ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ: ಅಭಿಮಾನಿಗಳಿಂದ ಅದ್ದೂರಿ ಮೆರವಣಿಗೆ

0
26

ಶಹಾಬಾದ: ತಾಲೂಕಿನ ಹೊನಗುಂಟಾ ಗ್ರಾಮದಲ್ಲಿ ಸಿದ್ದರಾಮಯ್ಯ ಅಭಿಮಾನಿ ಬಳಗ ವತಿಯಿಂದ ಸಿದ್ದರಾಮಯ್ಯನವರು ಎರಡನೇ ಬಾರಿಗೆ, ರಾಜ್ಯದ ಮುಖ್ಯಮಂತ್ರಿ ಆಗಿ ಪ್ರಮಾಣ ವಚನ ಸ್ವೀಕರಿಸಿದ ಪ್ರಯುಕ್ತ ಗ್ರಾಮದಲ್ಲಿ ಅದ್ದೂರಿಯಿಂದ ಹನುಮಾನ ದೇವಸ್ಥಾನದಿಂದ, ಕನಕದಾಸ ಸರ್ಕಲ್ ದವರಿಗೆ ಮೆರವಣಿಗೆ ನಡೆಯಿತು.

ಮೆರವಣಿಗೆಯಲ್ಲಿ ಡೊಳ್ಳು ಕುಣಿತ, ಬ್ಯಾಂಡ್ ಬಾಜಿ, ಜೈಕಾರ, ಹಾಕುತ್ತಾ ಅಭಿಮಾನಿಗಳು ರಾತ್ರಿಯೆಲ್ಲಾ ಕುಣಿದು ಕುಪ್ಪಳಿಸಿದರು.
ನಂತರ ಆಯೋಜಿಸಲಾದ ವೇದಿಕೆ ಕಾರ್ಯಕ್ರಮದಲ್ಲಿ ಜಿಲ್ಲಾ ಕಾಂಗ್ರೆಸ್ ಪಕ್ಷದ ಮಾಧ್ಯಮ ವಕ್ತಾರ ಪೀರ್ ಪಾμÁ ಮಾತನಾಡಿ, ಹಸಿದವರಿಗೆ ಅನ್ನ ನೀಡಿದ ಸರದಾರ ಸನ್ಮಾನ್ಯ ಶ್ರೀ ಸಿದ್ದರಾಮಯ್ಯ ಸರಕಾರ ಈ ರಾಜ್ಯದ ಜನರು ಬಯಸಿದ್ದಾರೆ. ಅವರ ಆಡಳಿತ ಜನಪರ ಆಡಳಿತ ಇರುತ್ತದೆ ಎಂದರು.ಚುನಾವಣಾ ಪೂರ್ವದಲ್ಲಿ ಘೋಷಿಸಿದ ಐದು ಗ್ಯಾರಂಟಿಗಳನ್ನು ಪ್ರಥಮ ಕ್ಯಾಬಿನೆಟಿನಲ್ಲಿ ಅನುಮೋದನೆ ನೀಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಆಗಿದ್ದಾರೆ. ಇವುಗಳು ಸಂಪೂರ್ಣವಾಗಿ ಈಡೇರಿಸುತ್ತಾರೆ ಎಂದು ಹೇಳಿದರು.

Contact Your\'s Advertisement; 9902492681

ಪಿ.ಎಸ್. ಮೇತ್ರಿ ಮಾತನಾಡಿ, ರಾಜ್ಯದಲ್ಲಿ ಮಹಿಳೆಯರ ಪರ, ನಿರುದ್ಯೋಗಿಗಳ ಪರ, ಬಡವರ ಪರ, ಸರಕಾರ ಬಂದಿದೆ. ಸಂವಿಧಾನ ಮೌಲ್ಯಗಳು ಜಾರಿಯಾಗುವುದಕ್ಕೆ ಸಿದ್ದರಾಮಯ್ಯನವರ ಸರ್ಕಾರ ಪ್ರಾಮಾಣಿಕ ಪ್ರಯತ್ನ ಮಾಡುತ್ತದೆ ಎಂದರು. ಮಲ್ಕಪ್ಪ ಮುದ್ದಾ ಮಾತನಾಡುತ್ತಾ ರಾಜ್ಯದಲ್ಲಿ ನುಡಿದಂತೆ ನಡೆಯುವ ಸರಕಾರ ಬಂದಿದೆ ಎಂದರು.

ಸರ್ವ ಜನಾಂಗದವರನ್ನು ಶಾಂತಿ, ನೆಮ್ಮದಿಯಿಂದ, ರಾಜ್ಯದಲ್ಲಿ ನೆಲೆಸುವಂತೆ ಸಿದ್ದರಾಮಯ್ಯ ಸರ್ಕಾರ ಆಡಳಿತ ನೀಡುತ್ತದೆ ಎಂದರು.ರುದ್ರಗೌಡ ಮಾಲಿಪಾಟೀಲ್, ಸಾಬಣ್ಣ ಕೊಲ್ಲೂರು ಮಾತನಾಡಿದರು.

ಕಾರ್ಯಕ್ರಮದಲ್ಲಿ ಸಾನಿಧ್ಯವನ್ನು ಪದ್ಮಣಪ್ಪ ಮುತ್ಯಾ ವಹಿಸಿದ್ದರು. ದೇವೇಂದ್ರ ಕಾರೋಳ್ಳಿ, ಮಾಥರ್ಂಡಪ್ಪ ಬುರ್ಲಿ, ಆನಂದ್ ಕೊಡಸ, ತಿಪ್ಪಣ್ಣ ಚಡಬಾ, ಇಸ್ಮಾಯಿಲ್ μÁ, ಮರೆಪ್ಪ ಕಂಟೇಕರ್ ,ರಾಜು ಆಡಿನ್, ಸುರೇಶ್ ಕುಂಬಾರ್, ಬಾಬು ಕೌಲಗಿ, ಭೂತಾಳಿ, ಲಕ್ಕಪ್ಪ, ರಾಘವೇಂದ್ರ, ಮಹಾದೇವ, ಶಾಂತಪ್ಪ ಉಪಸ್ಥಿತರಿದ್ದರು.

ಶಿವಕುಮಾರ ಕಾರೊಳ್ಳಿ ನಿರೂಪಿಸಿದರು, ವಿಜಯಕುಮಾರ್ ಕಂಟಿಕರ್ ಸ್ವಾಗತಿಸಿದರು, ಸಾಯಬಣ್ಣ ಕಂಟಿಕರ್ ವಂದಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here