ಕಲಬುರಗಿ: ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಕಲಬುರಗಿ ಜಿಲ್ಲಾ ಶಾಖೆಯು ಜನರಿಗೆ ಉಪಯುಕ್ತವಾಗುವ ಮತ್ತು ಕಷ್ಟದಲ್ಲಿ ಇರುವವರಿಗೆ ನೆರವಾಗುವ ಅನೇಕ ಕಾರ್ಯಕ್ರಮಗಳನ್ನು ಮಾಡುತ್ತಿದೆ.
ಈ ಅಂತರಾಷ್ಟ್ರೀಯ ಸಂಸ್ಥೆಯು ಕೊರೋನಾ ಸಂದರ್ಭದಲ್ಲಿ ಜನರಲ್ಲಿ ರೋಗದ ಬಗ್ಗೆ ವ್ಯಾಪಕವಾಗಿ ಜಾಗೃತಿ ಮೂಡಿಸಿದ್ದಲ್ಲದೆ, ಬಡವರಿಗೆ, ಕಾರ್ಮಿಕರಿಗೆ ಆರೋಗ್ಯ ಸಿಬ್ಬಂದಿಗೆ ಮುಂತಾದವರಿಗೆ ಸೋಪು, ಸ್ಯಾನಿಟೈಜರ್, ಮಾಸ್ಕ್ ಮುಂತಾದವಗಳನ್ನು ದೊಡ್ಡ ಪ್ರಮಾಣದಲ್ಲಿ ವಿತರಣೆ ಮಾಡಿದೆ. ನಗರದ ಎ.ಪಿ.ಎಮ್.ಸಿ ಕಾರ್ಮಿಕರಿಗೆ ಹೈಜಿನ್ ಕಿಟ್ಗಳನ್ನು ವಿತರಿಸಲಾಯಿತು.
ನಗರದ ಎ.ಪಿ.ಎಮ್.ಸಿ ರೈತ ಭವನದಲ್ಲಿ ಏರ್ಪಡಿಸಿದ ಸಮಾರಂಭದಲ್ಲಿ ಶ್ರೀ ಸಂತೋಷಕುಮಾರ ಸಹಾಯಕ ಕಾರ್ಯದರ್ಶಿ ಎ.ಪಿ.ಎಮ್.ಸಿ ಕಲಬುರಗಿ ಅವರು ಜಿಲ್ಲಾ ರೆಡ್ ಕ್ರಾಸ್ ಸಂಸ್ಥೆಯು ಕೊಡಮಾಡಿದ ಸುಮಾರು ರೂ. 30 ಸಾವಿರದ ಮೌಲ್ಯದ 100 ಹೈಜಿನ್ ಕಿಟ್ಗಳನ್ನು ವಿತರಿಸಿದರು.
ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ಉಪಸಭಾಪತಿ ಅರುಣಕುಮಾರ ಲೋಯಾ, ಅಧ್ಯಕ್ಷತೆ ವಹಿಸಿದ್ದರು. ಗೌ. ಕಾರ್ಯದರ್ಶಿ ರವೀಂದ್ರ ಶಾಬಾದಿ, ಹಾಗೂ ಸಂಸ್ಥೆಯ ಆಡಳಿತ ಮಂಡಳಿಯ ಸದಸ್ಯರಾದ ಶಿವರಾಜ ಅಂಡಗಿ ಅವರು ಅಲ್ಲದೇ ಹಮಾಲ ಸಂಘದ ಅಧ್ಯಕ್ಷರು ಮತ್ತು ಪದಾಧಿಕಾರಿಗಳು ಉಪಸ್ಥಿತರಿದ್ದರು.