ಬೆಳಮಗಿ ಬುದ್ಧ ವಿಹಾರದಲ್ಲಿ ಬೌದ್ಧರ ವಾರ್ಷಿಕ ಧಮ್ಮ ಮೈತ್ರಿ ಸಮ್ಮೇಳನ

0
24

ಆಳಂದ: ಸೌಹಾರ್ದ, ಪರಸ್ಪರ ಪ್ರೀತಿ ವಿಶ್ವಾಸ ಮತ್ತು ಮೌಲ್ಯಯುತ ಮಾನವ ಸಂಬಂಧವೇ ಭಗವಂತನ ಮಹಾಮನೆಯಾಗಿದೆ ಎಂದು ಉಸ್ತುರಿ-ಧುತ್ತರಗಾಂವ ಮಠದ ಶ್ರೀ ವಿಶ್ವನಾಥ ಕೋರಣೇಶ್ವರ ಮಹಾಸ್ವಾಮೀಜಿ ಅವರು ಅಭಿಪ್ರಾಯಪಟ್ಟರು.

ತಾಲೂಕಿನ ಬೆಳಮಗಿ ಗ್ರಾಮದ ಹೊರವಲಯದ ಬುದ್ಧ ವಿವಾಹರದಲ್ಲಿ ಆಯೋಜಿಸಿದ್ದ ಬೌದ್ಧರ ವಾರ್ಷಿಕ ಧಮ್ಮ ಮೈತ್ರಿ ಸಮ್ಮೇಳನದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.

Contact Your\'s Advertisement; 9902492681

ನಮ್ಮ ಭಾರತೀಯ ಮೂಲ ಸಂಸ್ಕøತಿ ಆಗಿರುವಂತಹ ಸಹೋದರತೆ ಭಾತೃತ್ವ ಸಮಾನತೆ ಸ್ವಾತಂತ್ರ್ಯ ಮತ್ತು ಸಾಮಾಜಿಕ ನ್ಯಾಯ ಕಲ್ಪಿಸಿದ ಮಹಾತ್ಮಗೌತಮ ಬುದ್ಧರು, ಮಹಾವೀರ, ಬಸವಾದಿ ಶರಣರು ಒಳಗೊಂಡು ಜೋತಿಭಾ ಫುಲೆ ಸೇರಿ ಅನೇಕರು ಸಮಾಜವನ್ನು ಒಗ್ಗೂಡಿಸುತ್ತಾ. ದೇಶ ರಾಷ್ಟ್ರೀಯತೆಯ ಭಾವನೆ ಮೂಡಿಸುವಂಥ ಕಾರ್ಯ ಮಾಡಿದ್ದಾರೆ. ಆದರೆ ಅವರು ಕೇವಲ ದೇಶಭಕ್ತಿಯ ಪಾಠ ಹೇಳಿಲ್ಲ. ಮನುಷ್ಯ ಮನುಷ್ಯರನ್ನ ಒಗ್ಗುಡಿಸ್ತಕ್ಕಂತ ಮೊದಲನೆಯ ಧರ್ಮ ಮಾನವೀಯತೆಯಾಗಿದೆ ಎಂದು ಅವರು ಹೇಳಿದ್ದಾರೆ.

ಮಾನವಿತೆಗಿಂತ ದೊಡ್ಡದು ಇನ್ನೊಂದಿಲ್ಲ ಎಂಬ ನಿಟ್ಟಿನಲ್ಲಿ ಮಾನವೀಯ ವಿಚಾರಗಳ ಮೌಲ್ಯಗಳನ್ನು ನಮ್ಮಲ್ಲಿ ಸಮಾಜವನ್ನು ಒಗ್ಗೂಡಿಸುವಂತಹ ಕಾರ್ಯವರು ಮಾಡಿ ಇಡೀ ವಿಶ್ವವೇ ಆ ಭಗವಂತನ ಮಹಾಮನೆ ಅನ್ನುವ ಪರಿಕಲ್ಪನೆಯನ್ನು ಕೊಟ್ಟು ಹೋಗಿದ್ದಾರೆ. ಅಂಥವರ ಅನುಯಾಯಿಗಳಾಗಿ ವಾರುಸದಾರರಾಗಿ ಇಂದು ಅವರ ವಿಚಾರಧಾರೆಗಳ ಕುರಿತು ಅರ್ಥ ಮಾಡಿಕೊಳ್ಳುವವರು ಸಂಖ್ಯೆ ಬಹಳ ಕಡಿಮೆಯಾಗಿದೆ. ಇತಿಹಾಸದ ಸತ್ಯ ಹೇಳುವವರನ್ನು ಒಪ್ಪಿಕೊಳ್ಳುವುದಿಲ್ಲ. ಈಗ ಸತ್ಯ ಒಪ್ಪಿಕೊಳ್ಳುವ ಕೆಲಸವಾಗಬೇಕಾಗಿದೆ ಎಂದರು.

ಯಾರು ಅಜ್ಞಾನ, ಅಂಧಕಾರದೊಳಗೆ ತಮ್ಮ ಧರ್ಮದ ಹಾದಿಯಲ್ಲಿಲ್ಲ. ಒಳ್ಳೆಯ ಜ್ಞಾನವನ್ನು ಸಂಪಾದನೆ ಮಾಡಿಲ.್ಲ ಸತ್ಯ ಮತ್ತು ಅಸತ್ಯದ ಮಧ್ಯ ಇರುವಂತಹ ವ್ಯತ್ಯಾಸವನ್ನು ಅರ್ಥ ಮಾಡಿಕೊಂಡಿಲ್ಲ ಎಂದು ಅಸಮಾಧಾನ ಹೊರಹಾಕಿದ ಅವರು, ಒಳ್ಳೆಯ ಕಾರ್ಯ ವಿಚಾರಗಳು ಬೌದ್ಧ ಧರ್ಮದ ನಿಜಾಚರಣೆಗಳು ಜನರಲ್ಲಿ ಬರಲಿ, ಬುದ್ಧ, ಬಸವ ಮತ್ತು ಡಾ. ಅಂಬೇಡ್ಕರ್ ಅವರ ವಿಚಾರಧಾg ಆಚರಣೆಗೆÉ ತರುವ ಮೂಲಕ ಅವರ ಕನಸು ನನಸು ಮಾಡಬೇಕಾಗಿದೆ ಎಂದರು.

ಅಧ್ಯಕ್ಷತೆ ವಹಿಸಿದ್ದ ಬುದ್ಧ ವಿವಾಹರದ ಬಂತೇ ಅಮರಜ್ಯೋತಿ ಅವರು ಮಾತನಾಡಿ, ಬುದ್ಧ, ಬಸವ ಮತ್ತು ಡಾ. ಅಂಬೇಡ್ಕರ್ ಅವರ ತತ್ವಾದರ್ಶಗಳನ್ನು ಜನಮಾಸನದಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ಬುದ್ಧ ವಿವಾರ ಸ್ಥಾಪನೆಯ ಮೂಲಕ ಸಮಾಜ ಧಾರ್ಮಿಕ ಕಾರ್ಯಗಳನ್ನು ನಿರಂತರವಾಗಿ ಕೈಗೊಳ್ಳಲಾಗುತ್ತಿದೆ. ಇದಕ್ಕೆ ಸರ್ವರು ಕೈಜೋಡಿಸಬೇಕು ಎಂದರು.

ಹುಮನಾಬಾದ ಮಠದ ಶರಣಿ ಮಾತೋಶ್ರೀ, ಭಾರತೀಯ ಬೌದ್ಧ ಮಹಾಸಭಾ ರಾಜ್ಯಾಧ್ಯಕ್ಷ ಮನೋಹರ ಮೋರೆ, ಜಿಪಂ ಮಾಜಿ ಸದಸ್ಯೆ ಪೂಜಾ ಲೋಹಾರ, ಮಲ್ಲಿನಾಥ ಯಲಶೆಟ್ಟಿ, ಗೋದೋತಾಯಿ ಕಾಲೇಜು ಪ್ರಾಧ್ಯಾಪಕಿ ಪುಟಮನಿ ದೇವಿದಾಸ್, ಬೆಳಗಾಂವದ ರಾವಾಸಾಬ ದೇವರಮನಿ, ವಿಠ್ಠಲ ಕೋಣೆಕರ್, ಶ್ಯಾಮರಾವ್ ಅಫಜಲಪೂರ, ಬಸರಾಜ ಝಳಕಿ, ವೈಶಾಲಿ ಮೋರೆ ಅನೇಕರು ಪಾಲ್ಗೊಂಡು ಮಾತನಾಡಿದರು.

ಮೊದಲಿಗೆ ಗ್ರಾಮದ ಧರ್ಮಶಾಲೆಯಿಂದ 2 ಕಿ.ಮೀ ಅಂತರದ ಬುದ್ಧ ವಿವಾಹರದವರೆಗೆ ಪಂಚಶೀಲ ಧ್ವಜಾ ಯಾತ್ರೆಯನ್ನು ಪ್ರಮುಖ ರಸ್ತೆಗಳ ಮೂಲಕ ಸಾಗಿತು. ವಿಹಾರದಲ್ಲಿ ಶ್ರೀ ವಿಶ್ವನಾಥ ಕೋರಣೇಶ್ವರ ಸ್ವಾಮೀಜಿ ಅವರು ಪಂಚಶೀಲ ಧ್ಜಜಾರೋಹಣ ಕೈಗೊಳ್ಳುವ ಮೂಲಕ ಬೌದ್ಧರ ವಾರ್ಷಿಕ ಧಮ್ಮ ಮೈತ್ರಿ ಸಮ್ಮೇಳನವನ್ನು ಉದ್ಘಾಟಿಸಿದರು. ಈ ಮೊದಲು ಒಂದು ಜೋಡಿ ಬೌದ್ಧ ಸಾಂಪ್ರದಾಯಂತೆ ವಿವಾಹ ನೆರವೇರಿತು.

ಕಲಾವಿದ ಸಿದ್ಧಾರ್ಥ ಚಿಮ್ಮದಾಲಾಯಿ ಸಂಘಡಿಗರಿಂದ ಸಂಗೀತ ನೆರವೇರಿಸಿದರು. ಉಮರಗಾದ ಕಪಿಲ ವಸ್ತು ಬುದ್ಧ ವಿವಾಹರ ಬಂತೇ ಸುಮಂಗಲ್ ಅವರು ಬುದ್ಧ ವಂದನೆ ಸಲ್ಲಿಸಿದರು. ಜಾಗತಿಕ ಲಿಂಗಾಯತ್ ಮಹಾಸಭಾ ತಾಲೂಕು ಅಧ್ಯಕ್ಷ ರಮೇಶ ಲೋಹಾರ ನಿರೂಪಿಸಿದರು. ಕರ್ನಾಟಕ ದಲಿತ ಸೇನೆ ರಾಜ್ಯಾಧ್ಯಕ್ಷ ಬಾಬುರಾವ್ ಅರುಣೋದಯ ಸ್ವಾಗತಿಸಿದರು. ಬಳಿಕ ಬುದ್ಧ ಸ್ಮರಣೆಯೊಂದಿಗೆ ಮಹಾಮಂಗಲ ನಡೆಯಿತು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here