ತಂತ್ರಜ್ಞಾನ ಮತ್ತು ಪರಿಸರ ಸಂರಕ್ಷಣೆ ಒಂದೆ ನಾಣ್ಯದ ಎರಡು ಮುಖಗಳು

0
73

ಕಲಬುರಗಿ: ಪರಿಸರ ಸಂರಕ್ಷಣೆಗೆ ಪ್ರಸ್ತುತ ತಂತ್ರಜ್ಞಾನಗಳಾದ ಆರ್ಟಿಫಿಷಿಯಲ್ ಇಂಟಲಿಜೆನ್ಸಿ ಮತ್ತು ಮಶಿನ್ ಲರ್ನಿಂಗ್‍ಗಳ ಅವಶ್ಯಕತೆ ಇದ್ದು ಈ ತಂತ್ರಜ್ಞಾನಗಳನ್ನು ಜಾಗತಿಕ ಮಟ್ಟಕ್ಕೆ ಸಿಮಿತಗೊಳಿಸದೇ ಪರಿಸರ ಸಂರಕ್ಷಣೆಗೂ ಉಪಯೊಗಿಸಿಕೊಳ್ಳಬೇಕೆಂದು ನಗರದ ಪಿ.ಡಿ.ಎ. ತಾಂತ್ರಿಕ ಮಹಾವಿದ್ಯಾಲಯದ ಪ್ರಾಚಾರ್ಯರಾದ ಡಾ. ಎಸ್. ಆರ್. ಮೀಸೆ ತಮ್ಮ ಅನಿಸಿಕೆ ವ್ಯಕ್ತಪಡಿಸಿದರು.

ಅವರು ಪಿ.ಡಿ.ಎ. ತಾಂತ್ರಿಕ ಮಹಾವಿದ್ಯಾಲಯದ ಮಾಹಿತಿ ವಿಜ್ಞಾನ ಮತ್ತು ತಂತ್ರಜ್ಞಾನ ವಿಭಾಗ ಏರ್ಪಡಿಸಿದ “ಪೈಥಾನ್ ಫಾರ್ ಮಶಿನ್ ಲರ್ನಿಂಗ್ ಮತ್ತು ಡೇಟಾ ಸಾಯಿನ್ಸ್” ಎಂಬ ಮೂರು ದಿನಗಳ ಬೂಟ್ ಕ್ಯಾಂಪ್ ಕಾರ್ಯಕ್ರಮ ಮತ್ತು ವಿಶ್ವ ಪರಿಸರ ದಿನಾಚರಣೆ ಕಾರ್ಯಕ್ರಮಗಳ ಅಧ್ಯಕ್ಷತೆ ವಹಿಸಿ ಮಾತನಾಡಿದರು.

Contact Your\'s Advertisement; 9902492681

ಈ ಕಾರ್ಯಕ್ರಮವನ್ನು ಕಂಪ್ಯೂಟರ್ ಸೋಸಾಯಿಟಿ ಆಫ್ ಇಂಡಿಯಾ ಮತ್ತು ಇಂಡಿಯನ್ ಸೋಸಾಯಿಟಿ ಫಾರ್ ಟೆಕ್ನಿಕಲ್ ಎಜುಕೇಶನ್, ನವದೇಹಲಿ ಅವರೊಂದಿಗೆ ಜಂಟಿಯಾಗಿ ಆಯೋಜಿಸಲಾಗಿದ್ದು ಪಿ.ಡಿ.ಎ. ಆರ್ ಆಂಡ್ ಡಿ ಅಧಿನದಲ್ಲಿ ಜರುಗಿತು.

ಬೆಂಗಳೂರು ಮೂಲದ ಪ್ರಜ್ಞಾ ಎಐ ಸಂಸ್ಥೆಯ ನಿರ್ದೇಶಕರಾದ ಸತೀಶ ಅಂಬಿಸಂಗೆ ಅವರ ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿ ಮೂರುದಿನಗಳ ಕಾಲ ಆರ್ಟಿಫಿಸಿಯಲ್ ಇಂಟಲಿಜೆನ್ಸಿ, ಮಶಿನ್ ಲರ್ನಿಂಗ್ ಮತ್ತು ಡೇಟಾ ಸಾಯಿನ್ಸ್‍ನ ಉಪಲಬ್ದತೆಗಳು ಕುರಿತು ಪ್ರಾಯೋಗಿಕ ಮಾಹಿತಿಯನ್ನು ಒದಗಿಸಿ ವಿದ್ಯಾರ್ಥಿಗಳಿಗೆ ತಮ್ಮ ಶೈಕ್ಷಣಿಕ ಪ್ರಾಜೆಕ್ಟಗಳನ್ನು ಮಾಡಲು ಅನುವು ಮಾಡಿಕೊಡುವರು.

ಮಹಾವಿದ್ಯಾಲಯದಲ್ಲಿ ಈಗಾಗಲೇ ಆರ್ಟಿಫಿಶಿಯಲ್ ಇಂಟಲಿಜೆನ್ಸಿ ಮತ್ತು ಮಶಿನ್ ಲರ್ನಿಂಗ್ ಕೋರ್ಸು ಪ್ರಾರಂಭವಾಗಿದ್ದು ಅದರ ಪಠ್ಯಕ್ರಮವನ್ನು ಉತ್ತಮಗೋಳಿಸಲು ಹಾಗೂ ವಿದ್ಯಾರ್ಥಿಗಳಿಗೆ ಉತ್ತಮ ಶಿಕ್ಷಣ ನೀಡಲು ಜಾಗತಿಕ ಮಟ್ಟದ ಸಂಸ್ಥೆಗಳೊಂದಿಗೆ ಒಡಂಬಡಿಕೆ ಮಾಡಿಕೊಂಡಿದ್ದು ಮುಂಬರುವ ದಿನಗಳಲ್ಲಿ ಇನ್ನೂ ಹಲವಾರು ಕಾರ್ಯಗಾರ ಹಾಗೂ ಹ್ಯಾಕಥಾನ್‍ಗಳನ್ನು ಏರ್ಪಡಿಸಲಾಗುವುದು.

ಮಹಾವಿದ್ಯಾಲಯದ ಅಕಾಡೆಮಿಕ್ಸನ ಉಪ-ಪ್ರಾಚಾರ್ಯರಾದ ಡಾ. ಭಾರತಿ ಹರಸೂರ ಅವರು ಕಂಪ್ಯೂಟರ್ ಸೋಸಾಯಿಟಿ ಆಫ್ ಇಂಡಿಯಾ ಮತ್ತು ಇಂಡಿಯನ್ ಸೋಸಾಯಿಟಿ ಫಾರ್ ಟೆಕ್ನಿಕಲ್ ಎಜುಕೇಶನ್ ವತಿಯಿಂದ ಇಲ್ಲಿಯವರೆಗೆ ಜರುಗಿದ ಕಾರ್ಯಗಾರ ಹಾಗೂ ಚಿಂತನ ಕಾರ್ಯಕ್ರಮಗಳ ಕುರಿತು ಸಮಗ್ರ ಮಾಹಿತಿಯನ್ನು ನೀಡಿದರು.

ಇದೇ ಸಂದರ್ಭದಲ್ಲಿ ವಿಶ್ವಪರಿಸರ ದಿನಾಚರಣೆಯ ಅಂಗವಾಗಿ ಮಹಾವಿದ್ಯಾಲಯದಲ್ಲಿ ಸಸಿ ನೆಡುವ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು ಪ್ರಾಚಾರ್ಯರು, ಉಪ-ಪ್ರಾಚಾರ್ಯರು, ಶಿಕ್ಷಕರು ಮತ್ತು ಸಿಬ್ಬಂದಿಗಳು ಸಸಿಯನ್ನು ನೆಟ್ಟಿ ನೀರೆರೆದರು.

ಕಾರ್ಯಕ್ರಮದ ಸಂಯೋಜಕರಾಗಿ ಡಾ. ವಿಶ್ವನಾಥ ಬುರಕಪಳ್ಳಿ, ಸಂಚಾಲಕರಾಗಿ ಪ್ರೊ. ಅಶೋಕ ಪಾಟೀಲ, ಮತ್ತು ಪ್ರೊ. ಪ್ರಿಯಾಂಕಾ ದೇವಣಿ ತಮ್ಮ ಕಾರ್ಯವನ್ನು ನಿರ್ವಹಿಸಿದರು.

ವಿಭಾಗದ ಮುಖ್ಯಸ್ಥರಾದ ಡಾ. ವಿಶ್ವನಾಥ ಬುರಕಪಳ್ಳಿ ಸರ್ವರಿಗೂ ಸ್ವಾಗತಿಸಿದರು, ಮುಖ್ಯ ಅತಿಥಿ ಮತ್ತು ಗೌರವ ಅತಿಥಿಗಳನ್ನು ಪ್ರೊ. ಗೌರಿ ಪಾಟೀಲ ಅವರು ಪರಿಚಯಿಸಿದರು, ಪ್ರೊ. ಶರಣಕುಮಾರ ಹುಲಿ ವಂದಿಸಿದರು ಮತ್ತು ಪ್ರೊ. ಅಶ್ವಿನಿ ಹತ್ತಿ ನಿರೂಪಿಸಿದರು.

ಕಾರ್ಯಕ್ರಮದಲ್ಲಿ ಮಹಾವಿದ್ಯಾಲಯದ ಡೀನ್, ವಿವಿಧ ವಿಭಾಗಗಳ ಮುಖ್ಯಸ್ಥರು, ಶಿಕ್ಷಕರು, ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here