ಕಲಬುರಗಿ: ದಲಿತರ, ಅಲ್ಪಸಂಖ್ಯಾತರ, ಮಹಿಳೆಯರ ಮೇಲೆ ಕನ್ಯಾಕುಮಾರಿ ಯಿಂದ ಕಾಶ್ಮೀರದ ವರಗೆ, ಗುಜರಾತ್ ನಿಂದ ಕೋಲಕತ್ತಾವರೆಗೆ ದೌರ್ಜನ್ಯ ನಡೆದಿದೆ ಅದನ್ನು ಸಮರ್ಥವಾಗಿ ತಡೆಯಬೇಕಾಗಿದೆ ಎಂದು ಕಲಬುರಗಿ ಲೋಕಸಭೆ ಕಾಂಗ್ರೇಸ್ ಅಭ್ಯರ್ಥಿ ಮಲ್ಲಿಕಾರ್ಜುನ ಖರ್ಗೆ ಅವರು ಹೇಳಿದರು.
ಅವರು ಚಿಂಚೋಳಿ ತಾಲೂಕಿನ ಸುಲೇಪೇಟ್ ಗ್ರಾಮದಲ್ಲಿ ಏರ್ಪಡಿಸಲಾಗಿದ್ದ ಪ್ರಚಾರ ಸಭೆಯಲ್ಲಿ ಭಾಗವಹಿಸಿ ಮಾತನಾಡಿ, ಮೋದಿ ಆಡಳಿತ ಕೇಂದ್ರದಲ್ಲಿ ಬಂದ ಮೇಲೆ ಜನಸಾಮಾನ್ಯರು ತೊಂದರೆಯಲ್ಲಿದ್ದಾರೆ ಅದನ್ನು ತಡೆಯುವ ಜರೂರಿದ್ದು ನೆಮ್ಮದಿ ಜೀವನ ನಡೆಸಬೇಕಾದರೆ ಕಾಂಗ್ರೇಸ್ ಗೆ ಮತ ನೀಡಿ ಎಂದರು. ಜಾಧವ್ ಪರ್ಸೆಂಟೇಜ್ ತಗೊಳ್ತಿದ್ದ ಎಂದು ಶರಣಪ್ರಕಾಶ ಹೇಳ್ತಾರೆ, ಅದಕ್ಕೆ ಇರಬೇಕು ಮೋದಿ ರಾಜ್ಯಕ್ಕೆ ಬಂದಾಗೆಲ್ಲ ಇವನನ್ನು ನೋಡಿಯೇ ಪರ್ಸೆಂಟೇಜ್ ಬಗ್ಗೆ ಮಾತನಾಡುತ್ತಿರಬೇಕು.
ಕಾಂಗ್ರೇಸ್ ಪಕ್ಷದ ಕುರಿತು ಸಮಧಾನದ ಮಾತನಾಡುವ ಜಾಧವ್ ಮನೆಯಲ್ಲಿ ಅವರ ಸಂಬಂಧಿಗಳಿಗೆ ಎಂ ಎಲ್ ಎ ಟಕೇಟ್ ಕೊಟ್ಟಿದ್ದೆವು ಆದರೆ ಯಾರೂ ಗೆಲ್ಲಲಿಲ್ಲ ಎಂದು ಟೀಕಿಸಿದರು. ಸಂಸದನಾಗಿ ನಾನು ಹಲವಾರು ಅಭಿವೃದ್ದಿ ಕೆಲಸ ಮಾಡಿದ್ದೇನೆ. ಜೇವರ್ಗಿ ಶ್ರೀರಂಗಪಟ್ಟಣ, ಪೂನಾ ಸೋಲಾಪುರ ಮುಂಬೈ ರಾಷ್ಟ್ರೀಯ ಹೆದ್ದಾರಿ, ಮುಂಬೈ ಚೆನ್ನೈ ಎಕ್ಸಪ್ರೇಸ್ ಕಾರಿಡಾರ್ ಗೆ ಸರ್ವೆ ನಡೆದಿದೆ, ಜಯದೇವ ಆಸ್ಪತ್ರೆ, ಮೆಡಿಕಲ್ ಕಾಲೇಜು, ಸ್ಕಿಲ್ ಡೆವೆಲಾಪ್ ಮೆಂಟ್ ಕೇಂದ್ರ ಸ್ಥಾಪನೆ ಮಾಡಿದೆ ಅದಕ್ಕೆ ನನ್ನನ್ನು ಸೋಲಿಸುತ್ತೀರಾ ಎಂದರು.
ವಾರಣಾಸಿ ಮೈಸೂರು, ಬೆಂಗಳೂರು ಅಜ್ಮೇರ್, ಬೀದರದ ಕಲಬುರಗಿ ಪಿಟ್ ಲೈನ್ ಸ್ಥಾಪನೆ, ವಾಡಿ ಗದಗ ನಡುವೆ 2500 ಕೋಟಿ ವೆಚ್ಚದಲ್ಲಿ ನೂತನ ರೈಲು ಮಾರ್ಗ ಸ್ಥಾಪನೆ, ಗುಜರಾತ್ ನ ಅಂಕಲೇಶ್ವರದಲ್ಲಿ 300 ಕೋಟಿ ವೆಚ್ಚದಲ್ಲಿ ಆಸ್ಪತ್ರೆ ನಿರ್ಮಾಣ ಮಾಡಿದ್ದೇನೆ.ಆದರೆ ಈ ಭಾಗಕ್ಕೆ ಮೋದಿ ಏನು ಮಾಡಿದ್ದಾನೆ? ಈ ಐದು ವರ್ಷದಲ್ಲಿ ಜನರಿಗೆ ಏನು ಕೊಟ್ಟ ಎನ್ನುವುದನ್ನು ಜಾಧವ್ ಹೇಳಲಿ ಎಂದು ಸವಾಲಾಕಿದರು. ಬಂಜಾರ ಸಮುದಾಯದಕ್ಕೆ ಕಾಂಗ್ರೇಸ್ ಹೆಚ್ಚು ಅಭಿವೃದ್ದಿ ಮಾಡಿದೆ ಎಂದರು.
” ಗಲ್ಲಿಸೇ ಲೇಖರ್ ದಿಲ್ಲಿತಕ್ ಸಭೀ ಮುಜೆ ಹರಾನೇಕೇಲಿಯೇ ಕೋಶಿಸ್ ಕರ್ ರಹೆ ಹೈ. ಮೈ ಆಪ್ ಕಾ ಕ್ಯಾತೋ ಖಾಯಾ ಕ್ಯಾ? ಎಂದು ಪ್ರಶ್ನಿಸಿದರು. “ಮೋದಿ ಆಪ್ ಕೋ 15 ಲಾಕ್ ದೇತೂಂ ಬೋಲೆತಾ ? ಕ್ಯಾ ಆಪ್ ಕೋ ಕುಚ್ ದಿಯಾ? ಜಾಧವ್ ನೆ ಬಿಜೆಪಿಮೆ ಗಯಾ ಉನ್ಹೋನೆ ಪೈಸೆ ದಿಲಾಯಾಗ ಆಪ್ಕೋ” ಎಂದು ವ್ಯಂಗ್ಯವಾಗಿ ನುಡಿದರು. ಬಿಜೆಪಿಯವರು ದೇಶಭಕ್ತಿಯನ್ನು ಗುತ್ತಿಗೆ ಪಡೆದುಕೊಂಡಿದಾರಾ? ಹಾಗಾದರೆ ನಾವ್ಯಾರು? ದೇಶದ್ರೋಹಿಗಳಾ? ಎಂದು ಪ್ರಶ್ನಿಸಿದ ಖರ್ಗೆ, ನಾವೇನು ಪಾಕಿಸ್ಥಾನದಲ್ಲಿ ಇಂಗ್ಲೆಂಡ್ ನಲ್ಲಿ ಹುಟಿದಿವಾ? ಎಂದು ಪ್ರಶ್ನಿಸಿದರು.
ಕಲಬುರಗಿ ಹಾಗೂ ಶಿವಮೊಗ್ಗಾದಲ್ಲಿ ಏಕಕಾಲದಲ್ಲೇ ವಿಮಾನನಿಲ್ದಾಣ ನಿರ್ಮಾಣ ಮಾಡಲು ಕೈಗೆತ್ತಿಕೊಳ್ಳಲಾಗಿತ್ತು. ನಮ್ಮದು ಈಗಾಗಲೇ ವಿಶೇಷ ವಿಮಾನದ ಉಡಾವಣೆ ಪ್ರಾರಂಭಿಸಲಾಗಿದೆ ಅದರೆ ನಿಮ್ಮ ಶಿವಮೊಗ್ಗಾದಲ್ಲಿ ಏನಾಗಿದೆ ಯಡಿಯೂರಪ್ಪನವರೇ ಎಂದು ಪ್ರಶ್ನಿಸಿದರು. ಮಾಜಿಸಚಿವ ಡಾ ಶರಣಪ್ರಕಾಶ್ ಪಾಟೀಲ್ ಮಾತನಾಡಿ ಬಿಜೆಪಿ ಹೇಳೋದೊಂದು ಮಾಡೋದೊಂದು ಹಾಗಾಗಿ ಅದನ್ನು ಯಾರು ನಂಬಲ್ಲ. ಸೇಡಂ ಬಿಜೆಪಿ ಶಾಸಕನ ದುರಾಡಳಿತ ಈಗಾಗಲೇ ಜನರಿಗೆ ಅರ್ಥವಾಗಿದೆ ಎಂದರು.
ವೇದಿಕೆಯ ಮೇಲೆ ಮುಕ್ರಂಖಾನ್, ನಾಗೇಶ್ವರರಾವ ಮಾಲೀಪಾಟೀಲ್, ಗಣಪತರಾವ್, ಬಿ.ಆರ್.ಪಾಟೀಲ್, ಅಶೋಕ್, ರುದ್ರಶೆಟ್ಟಿ ಸೇರಿದಂತೆ ಮತ್ತಿತರಿದ್ದರು.