ಪತ್ರಕರ್ತ-ಸಾಹಿತಿ ಮಹಿಪಾಲರೆಡ್ಡಿ ಮುನ್ನೂರರ “ಮುಗಿಲು ಸುರಿದ ಮುತ್ತು” ಪುಸ್ತಕ ಲೋಕಾರ್ಪಣೆ

0
404
  • ಜನ ಮನ ರಂಜಿಸಿದ ಸಂಗೀತ ನಿರ್ದೇಶಕ ವಿ. ಮನೋಹರ ಅವರ ಗಾನ ಸಂಭ್ರಮ

ಕಲಬುರಗಿ: ಕಲ್ಯಾಣ ಕರ್ನಾಟಕದಲ್ಲಿ ಸಾಕಷ್ಟು ಪ್ರವಾಸಿ ತಾಣಗಳಿದ್ದು, ಇವುಗಳ ಅಭಿವೃದ್ಧಿಗೆ ಸರ್ಕಾರ ಗಮನಹರಿಸಬೇಕು ಎಂದು ಖ್ಯಾತ ಸಿನಿಮಾ ನಟ, ನಿರ್ದೇಶಕ, ಸಂಗೀತ ಸಂಯೋಜಕ ವಿ. ಮನೋಹರ ತಿಳಿಸಿದರು.

ಸೇಡಂನ ರಾಷ್ಟ್ರಕೂಟ ಪುಸ್ತಕ ಮನೆ ಹಾಗೂ ಕಲಬುರಗಿಯ ಸುಕಿ ಸಾಂಸ್ಕೃತಿಕ ಪ್ರತಿಷ್ಠಾನ ಸಹಯೋಗದಲ್ಲಿ ಭಾನುವಾರ ಸಂಜೆ ನಗರದ ಕಲಾ ಮಂಡಳದಲ್ಲಿ ನಡೆದ ಪತ್ರಕರ್ತ-ಸಾಹಿತಿ ಮಹಿಪಾಲರೆಡ್ಡಿ ಮುನ್ನೂರ ಅವರು ರಚಿಸಿದ ಮುಗಿಲು ಸುರಿದ ಮುತ್ತು ಪುಸ್ತಕ ಜನಾರ್ಪಣೆ ಹಾಗೂ ಮುಸ್ಸಂಜೆಯ ಮನೋಹರ ಗಾನ ಸಂಭ್ರಮ ಉದ್ಘಾಟಿಸಿ ಮಾತನಾಡಿದ ಅವರು, ಈ ಭಾಗದ ಜನರು ಸಹ ಸುಮ್ಮನೆ ಕೂಡದೆ ಜನಪ್ರತಿನಿಧಿಗಳ ಮೇಲೆ ಒತ್ತಡ ಹೇರಬೇಕು ಎಂದು ಹೇಳಿದರು.

Contact Your\'s Advertisement; 9902492681

ಪುಸ್ತಕ ಕುರಿತು ಮಾತನಾಡಿದ ಪತ್ರಾಗಾರ ಇಲಾಖೆಯ ಸಹಾಯಕ ನಿರ್ದೇಶಕ ಡಾ. ವೀರಶೆಟ್ಟಿ ಗಣಾಪುರ, ಆಕರ್ಷಕ ತಲೆ ಬರೆಹದ ಈ ಗ್ರಂಥದಲ್ಲಿ ಭಿನ್ನ ವಲಯದ 112 ಪುಟಗಳ ನಾಟಕ, ಗಜಲ್, ಕವಿತೆ, ವ್ಯಕ್ತಿ ಚಿತ್ರ, ಕಾದಂಬರಿ ಪರಿಚಯ, ವಿಮರ್ಶೆ ಸೇರಿದಂತೆ ಪುಸ್ತಕ ಪ್ರೀತಿಯ 25 ಲೇಖನಗಳಿವೆ ಎಂದರು.

ಕನ್ನಡ ವಿಮರ್ಶೆ ಪರಂಪರೆಯ ಮರು ಸೃಷ್ಠಿಸುವ ಅಗತ್ಯ ಇರುವ ಹೊತ್ತಿನಲ್ಲಿ ಕಾವ್ಯ ಸತ್ಯದ ಜೊತೆಗೆ ಲೋಕ ಸತ್ಯವನ್ನು ಮನಗಾಣಿಸುವ, ನೈತಿಕ ನೆಲೆಯ, ಸಾಂಸ್ಕೃತಿಕ ಚಾರಿತ್ರೆ ಕಟ್ಟಿಕೊಡುವ ಸೃಜನಶೀಲ ಕೃತಿ ಇದಾಗಿದೆ ಎಂದರು.

ಲೇಖಕ ಮತ್ತು ವಿಮರ್ಶಕ ಸಂವಾದ ನಡೆಸುವ, ಮುಖಾಮುಖಿಯಾಗಿಸುವ ಇಲ್ಲಿನ ಲೇಖನಗಳಲ್ಲಿ ಸಾಂಸ್ಕೃತಿಕ ಅನನ್ಯತೆ ಇರುವುದನ್ನು ಗುರುತಿಸಬಹುದಾಗಿದೆ. ಪುಸ್ತಕಗಳ ಗುಣಾವದೋಷಗಳನ್ನು ಎತ್ತಿ ಹೇಳದ ಈ ಕೃತಿ ಪುಸ್ತಕ ಪ್ರೀತಿಗೆ ಸಾಕ್ಷಿಯಾಗಿದೆ ಎಂದು ತಿಳಿಸಿದರು.

ಮುಖ್ಯ ಅತಿಥಿಯಾಗಿದ್ದ ಸಿನಿಮಾ ನಿರ್ದೇಶಕ ಮಂಜು ಪಾಂಡವಪುರ ಮಾತನಾಡಿದರು. ಪ್ರಕಾಶಕ ಬಸವರಾಜ ಕೊನೇಕ್ ಅಧ್ಯಕ್ಷತೆ ವಹಿಸಿದ್ದರು.

ಕಿರಣ ಪಾಟೀಲ ನಿರೂಪಿಸಿದರು. ಕಾವೇರಿ ಪ್ರಾರ್ಥನೆ ಗೀತೆ ಹಾಡಿದರು. ಮಹಿಪಾಲರೆಡ್ಡಿ ಮುನ್ನೂರ ಸ್ವಾಗತಿಸಿ ಪ್ರಾಸ್ತಾವಿಕ ಮಾತನಾಡಿದರು. ಸಿದ್ಧಪ್ರಸಾದರೆಡ್ಡಿ ಮಾತನಾಡಿದರು.

ಕಲ್ಲಯ್ಯ ಸ್ಥಾವರಮಠ, ಡಾ.‌ಸದಾನಂದ ಪೆರ್ಲ, ಬಸವರಾಜ ನಂದಿಧ್ವಜ, ಡಾ.‌ ಸುಜಾತಾ ಜಂಗಮಶೆಟ್ಟಿ, ವೆಂಕಟೇಶ ಮುದಗಲ್, ಬಿ.ಎಚ್. ನಿರಗುಡಿ, ಪಿ.ಎಂ. ಮಣ್ಣೂರ, ಡಾ. ಶರಣಬಸವ ವಡ್ಡನಕೇರಿ ಮತ್ತಿತರರು ಇದ್ದರು.

ಮುಗಿಲು ಸುರಿದ ಮುತ್ತು ಪುಸ್ತಕ ಬಿಡುಗಡೆ ಸಮಾರಂಭದ ವೇಳೆಯಲ್ಲಿ ಮಳೆ ಸುರಿಯುತ್ತಿರುವುದು ಮನಸ್ಸಿಗೆ ಆಹ್ಲಾದ ಉಂಟು ಮಾಡುವಂತಿದೆ. ಕನ್ನಡ ಪ್ರೀತಿಗೆ ಈ ಕಾರ್ಯಕ್ರಮ ಸಾಕ್ಷಿಯಾಗಿದೆ. -ವಿ. ಮನೋಹರ, ಖ್ಯಾತ ಸಂಗೀತ ನಿರ್ದೇಶಕ, ಬೆಂಗಳೂರು.

ಮುಸ್ಸಂಜೆಯ ಗಾನ ಸಂಭ್ರಮ ನಂತರ ನಡೆದ ಮುಸ್ಸಂಜೆಯ ಮನೋಹರ ಗಾನ ಸಂಭ್ರಮ ಕಾರ್ಯಕ್ರಮದಲ್ಲಿ ತಪ್ಪು ಮಾಡದವ್ರ ಯಾರವ್ರೆ, ತಪ್ಪೆ ಮಾಡವ್ರ ಎಲ್ಲವ್ರೆ ಸೇರಿದಂತೆ ಸಾಕಷ್ಟು ಕನ್ನಡ ಗೀತೆಗಳನ್ನು ಹಾಡಿ ಜನ ಮನ ರಂಜಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here