ದಲಿತ ಮಹಿಳೆ ಅತ್ಯಾಚಾರ ಖಂಡನೆ: ವಾಸ್ತವ ಸಾಹಿತ್ಯ ರಚನೆಗೆ ಕರೆ

0
115

ಕಲಬುರಗಿ: ದಲಿತ ಸಾಹಿತ್ಯ ಪರಿಷತ್ತಿನ ಕನಸು ಇಂದು ನನಸಾಗಿದೆ.ಪರಿಷತ್ತು ಸಮಾಜಪರ,ಜ್ಯಾತ್ಯಾತೀತ ನಿಲುವು ಹೊಂದಿದೆ ಪ್ರಗತಿಪರ ಆಶಯದ ಎಲ್ಲರೂ ಇದರಲ್ಲಿ ಭಾಗವಹಿಸಲು ಅವಕಾಶವಿದೆ ಲೇಖಕರು,ಕವಿಗಳು ಪ್ರಚಲಿತ ಸಮಸ್ಯೆಗಳನ್ನು ಕುರಿತು ಬರೆಯಬೇಕು,ಬದ್ಧತೆ ಇರಬೇಕಾದದ್ದು ಅವಶ್ಯ ಮಹಿಳಾ ಅತ್ಯಾಚಾರ ಖಂಡನೀಯ ಎಂದು ಕೇಂದ್ರ ಸಾಹಿತ್ಯ ಅಕಾಡೆಮಿ ಕನ್ನಡ ಸಲಹಾ ಸಮಿತಿಯ ಸದಸ್ಯ ಡಾ.ಜಯದೇವಿ ಗಾಯಕವಾಡ ಕಳವಳ ವ್ಯಕ್ತಪಡಿಸಿದ್ದರು.

ಮಾನ್ಯವರ ದಾದಾಸಾಹೇಬ್ ಕಾನ್ಸಿರಾಮ ಪದವಿ ಕಾಲೇಜಿನಲ್ಲಿ ದಲಿತ ಸಾಹಿತ್ಯ ಪರಿಷತ್ತು ಹಮ್ಮಿಕೊಂಡ ಪುಸ್ತಕ ಅವಲೋಕನ ಮತ್ತು ಸನ್ಮಾನ ಕಾರ್ಯವನ್ನು ಉದ್ಘಾಟಿಸಿ ಮಾತನಾಡಿ ಇಂದು ಕನ್ನಡ ಸಂಶೋಧನಾ ವಿದ್ಯಾರ್ಥಿಗಳು ಓದಲು,ಬರೆಯಲು,ಮಾತನಾಡಲು ಬರುವುದಿಲ್ಲವೆಂಬ ಆರೋಪವಿದೆ ಇಂತಹ ವೇದಿಕೆಯ ಮೂಲಕ ಕಲಿತು ತೋರಿಸಬೇಕಾದ ಅಗತ್ಯ ಇದೆ ಎಂದರು.

Contact Your\'s Advertisement; 9902492681

ಮುಖ್ಯ ಅತಿಥಿಗಳಾಗಿ ಡಾ.ಮಹೇಶ ರುದ್ರಕರ್ ಬೀದರ ಜಿಲ್ಲಾ ದಸಾಪ ಅಧ್ಯಕ್ಷ ಡಾ. ಪೀರಪ್ಪ ಸಜ್ಜನ ಆಗಮಿಸಿದ್ದರು. ಕಲಬುರಗಿ ಜಿಲ್ಲಾ ದಸಾಪ ಅಧ್ಯಕ್ಷ ಡಾ.ಸುನೀಲ ಜಾಬಾದಿ ಅಧ್ಯಕ್ಷತೆ ವಹಿಸಿದ್ದರು.

ರೇಣುಕಾ ಹೆಳವರರ ಕಿಟಕಿ ಅಂಚಿನ ಮೌನ ಕುರಿತು ಡಾ.ಚಿದಾನಂದ ಕುಡ್ಡನ್ ,ಪ್ರಭುಲಿಂಗ ನಿಲೂರೆ ಅವರ ತ್ಯಾಗಮಯಿ ರಮಾಬಾಯಿ ಕುರಿತು ಡಾ.ಕಪಿಲ್ ಚಕ್ರವರ್ತಿ, ಡಾ.ಎಂ.ಬಿ.ಕಟ್ಟಿಯವರ ಆರೂಢ ಪಂಥ ಕುರಿತು ವಿಜಯಲಕ್ಷ್ಮಿ ದೊಡ್ಡಮನಿ ಮಾತನಾಡಿದರು.

ದಸಾಪ ಬೆಳ್ಳಿ ಪುಸ್ತಕ ಪ್ರಶಸ್ತಿ ಪಡೆದ ಡಾ.ಎಂ.ಬಿ ಕಟ್ಟಿ, ಪ್ರಭುಲಿಂಗ ನಿಲೂರೆ,ರೇಣುಕಾ ಹೆಳವರ್ ಅವರನ್ನು ಹಾಗೂ ನಿವೃತ್ತ ಪ್ರಾಧ್ಯಾಪಕರಾದ ಡಾ. ವಿ.ಟಿ.ಕಾಂಬಳೆಯವರನ್ನು ಸನ್ಮಾನಿಸಲಾಯಿತು.ಡಾ.ಪ್ರದೀಪ ಕಡೂನ್ ಕ್ರಾಂತಿಗೀತೆ ಹಾಡಿದರು ಡಾ.ರಾ ಜಕುಮಾರ ಮಾಳಗೆ ಸ್ವಾಗತಿಸಿ ಪ್ರಾಸ್ತಾವಿಕ ನುಡಿ ಆಡಿದರು.ಡಾಕಪ್ಪ ಮೋತಿಲಾಲ ನಿರೂಪಿಸಿದರು ಗೀತಾ ಹೊಸಮನಿ ವಂದಿಸಿದರು.

ಡಾ.ರಾಜಶೇಖರ ಮಾಂಗ್,ಡಾ.ಅಶೋಕ ಬಾಬು,ಡಾ.ಅನೀಲ ಟೆಂಗಳಿ ,ರಾಘವೇಂದ್ರ ಪರಹತ ಬಾದಕರ್,ಡಾ.ಅನೀಲ ಟೆಂಗಳಿ,ಡಾ.ಸಂದೀಪ ಹೊಳ್ಕ ರ್,ಮಹಾದೇವ ಗುಂಡಗುರ್ತಿ,ಪೂರ್ಣಿಮಾ ಬುರ್ಲೆ,ಶೃತಿ,ಪಲ್ಲವಿ ಉಬಾರೆ,ಡಾ.ಸೂಲಾಬಾಯಿ ಕಾ ಳಮದರಗಿ,ಅಣ್ಣಾರಾಯ್,ಮಹಾಂತೇಶ,ಮಹಾದೇವ,ಡಾ.ಪ್ರದೀಪ ಕಡೂನ್ ಕ್ರಾಂತಿಗೀತೆ ಹಾಡಿದರು. ಡಾ.ರಾ ಜಕುಮಾರ ಮಾಳಗೆ ಸ್ವಾಗತಿಸಿ ಪ್ರಾಸ್ತಾವಿಕ ನುಡಿ ಆಡಿ ದರು.ಡಾಕಪ್ಪ ಮೋತಿಲಾಲ ನಿರೂಪಿಸಿದರು ಗೀತಾ ಹೊಸಮನಿ ವಂದಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here