ಶಿಕ್ಷಕರಿಗೆ ಮತದಾರರ ಪಟ್ಟಿ ಪರಿಷ್ಕರಣೆ ಕಾರ್ಯ ನಿಯೋಜಿಸದಿರಲು ಮನವಿ

0
15

ಶಹಾಬಾದ: ಶಾಲಾ ಶಿಕ್ಷಣ ಇಲಾಖೆಯ ಪ್ರಾಥಮಿಕ/ ಪ್ರೌಢ ಶಾಲಾ ಶಿಕ್ಷಕರನ್ನು ಬೂತ್ ಮಟ್ಟದ ಅಧಿಕಾರಿಗಳನ್ನಾಗಿ(ಬಿಎಲ್‍ಓ) ಹಾಗೂ ಬೋಧನೇತರ ಕಾರ್ಯಗಳಿಗೆ ನಿಯೋಜನೆ ಬೇಡ ಎಂದು ಆಗ್ರಹಿಸಿ ತಾಲೂಕ ಅನುದಾನಿತ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಸಿದ್ರಾಮ ಉದಯಕರ ತಹಸೀಲ್ದಾರ ಗುರುರಾಜ ಸಂಗಾವಿ ಮುಖಾಂತರ ಶಿಕ್ಷಣ ಸಚಿವರಿಗೆ ಮನವಿ ಮಾಡಿದರು.

ಶಿಕ್ಷಕರುಗಳನ್ನು ಜನಗಣತಿ ಚುನಾವಣಾ ಕಾರ್ಯ, ಮಕ್ಕಳಗಣತಿ ಇವುಗಳಲ್ಲಿ ತೊಡಗಿಸಿಕೊಳ್ಳುವುದರ ಪರಿಣಾಮವಾಗಿ ಕನಿಷ್ಟ 244 ಶಾಲಾ ಕರ್ತವ್ಯದ ದಿನಗಳಲ್ಲಿ ಪರೀಕ್ಷೆಗಳು ಮತ್ತು ಮೌಲ್ಯಂಕನ ಕಾರ್ಯಕ್ಕಾಗಿ/ ಪಠ್ಯೇತರ ಚಟುವಟಿಕೆಗಳ/ ಪಠ್ಯ ಚಟುವಟಿಕೆಗಳ/ ಸ್ಪರ್ಧೆಗಳ ನಿರ್ವಹಣಾಕಾರ್ಯ/ ಮೌಲ್ಯಮಾಪನ ಮತ್ತು ಫಲಿತಾಂಶ ವಿಶ್ಲೇಷಣಾ ಕಾರ್ಯಕ್ಕಾಗಿ ಮತ್ತು ಶಾಲಾ ಸೃಷ್ಟಿಯ ರಜೆಗಳು ಒಟ್ಟಾರೆ 64 ದಿನಗಳು ಶಿಕ್ಷಕರುಗಳ ಸೇವೆಯನ್ನು ಮೇಲ್ಕಂಡ ಕಾರ್ಯಕ್ಕೆ ತೊಡಗಿಸಿಕೊಳ್ಳುತ್ತಿರುವುದರಿಂದ ವಿದ್ಯಾರ್ಥಿಗಳ ಬೋಧನಾ-ಕಲಿಕಾ ಪ್ರಕ್ರಿಯಗೆ ಕೇವಲ 180 ದಿನಗಳು ಉಳಿಯುತ್ತದೆ ಎಂದರು.

Contact Your\'s Advertisement; 9902492681

ಶಿಕ್ಷಕರನ್ನು ಮತದಾರರ ಪಟ್ಟಿ/ ಬೋದಕೇತರ ಕೆಲಸಕ್ಕೆ ನಿಯೋಜನೆ ಮಾಡಬಾರದೆಂದು ಸರ್ಕಾರದ ಸುತ್ತೋಲೆಗಳಲ್ಲಿ ತಿಳಿಸಿರುತ್ತದೆ. ಈ ಕಾರಣದಿಂದ ಮತದಾರರ ಪಟ್ಟಿಗಳ ಪರಿಷ್ಕರಣೆ ಕಾರ್ಯಗಳಿಗೆ ನಿಯೋಜಿಸುವ ಬಗ್ಗೆ ಮಾನ್ಯ ಉಚ್ಚ ನ್ಯಾಯಾಲಯ ಹಾಗೂ ಸರ್ವೋಚ್ಚ ನ್ಯಾಯಾಲಯ ನೀಡಿರುವ ತೀರ್ಪುಗಳಲ್ಲಿ ಶಿಕ್ಷಕರುಗಳನ್ನು ಶಿಕ್ಷಣೇತರ ಕಾರ್ಯಗಳಿಗೆ ನಿಯೋಜಿಸುವುದರಿಂದ ನ್ಯಾಯಾಲಯ ಹಾಗೂ ಸರ್ಕಾರದ ಆದೇಶಗಳ ಉಲ್ಲಂಘನೆ ಆಗುತ್ತದೆ ಎಂದು ಹಾಗೆ ಶಿಕ್ಷಣ ಸಚಿವರು ಕೂಡ ಶಾಲಾ ಶಿಕ್ಷಕರಿಗೆ ಮತದಾರರ ಪಟ್ಟಿ ಪರಿಷ್ಕರಣೆ ಕೆಲಸ ಕ್ಕೆ ನೇಮಿಸಬಾರದೆಂದು ಆದೇಶಿಸಿರುತ್ತಾರೆ ಎಂದರು.

ಆದ್ದರಿಂದ ಶಾಲಾ ಶಿಕ್ಷಣ ಇಲಾಖೆಯ ಪ್ರಾಥಮಿಕ/ ಪ್ರೌಢ ಶಾಲಾ ಶಿಕ್ಷಕರನ್ನು ಚುನಾವಣಾ ರೋಲ್ ಪರಿಷ್ಕರಿಸುವ ಸಲುವಾಗಿ ಬೂತ್ ಮಟ್ಟದ ಅಧಿಕಾರಿಗಳನ್ನಾಗಿ ನಿಯೋಜನೆ ಮಾಡಬಾರದೆಂದು ತಿಳಿಸಿದರು.

ಈ ಸಂದರ್ಭದಲ್ಲಿ ಶ್ರೀಶೈಲ ಮಠ, ಅಖೀಲ ಪಟೇಲ, ಶಿವಶರಣಪ್ಪ ಹೊನಗುಂಟಿಕರ, ಬಲವಂತಪ್ಪ ಓಲೇಕಾರ, ಗೌಡಪ್ಪ, ಶಂಕ್ರಪ್ಪ, ಉಮಪ್ಪ, ಕಾಶಿನಾಥ ಮುಂತಾದವರು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here