ಆಳಂದ; ಕನ್ನಡದ ಖ್ಯಾತ ವ್ಯಕ್ತಿತ್ವ ವಿಕಸನ ಮಾತುಗಾರ ಪ್ರೊ. ಸಿದ್ದು ಯಾಪರಪರವಿ ಅವರ ಯುವ ಕಲ್ಯಾಣ ಯಾತ್ರೆ, ಉಪನ್ಯಾಸ ಹಾಗೂ ವಿದ್ಯಾರ್ಥಿಗಳೊಂದಿಗೆ ಸಂವಾದ ಕಾರ್ಯಕ್ರಮ ಆಳಂದ ಪಟ್ಟಣದಲ್ಲಿ ಗುರುವಾರ ಜರುಗಲಿದೆ.
ಸೇಡಂನ ಕೊತ್ತಲ ಬಸವೇಶ್ವರ ಭಾರತೀಯ ಶಿಕ್ಷಣ ಸಮಿತಿ, ವಿಕಾಸ ಅಕಾಡೆಮಿ, ಎಸ್‍ಆರ್‍ಜಿ ಫೌಂಡೇಶನ್ ಹಾಗೂ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಸಂಯುಕ್ತ ಆಶ್ರಯದಲ್ಲಿ ಪಟ್ಟಣದ ಹೊರವಲಯದಲ್ಲಿರುವ ತೋಂಟದಾರ್ಯ ಅನುಭವ ಮಂಟಪದಲ್ಲಿ ಬೆಳಿಗ್ಗೆ 11 ಗಂಟೆಗೆ ಜರುಗಲಿದೆ.
ಸಾಹಿತ್ಯ, ವಿಮರ್ಶೆ, ಜೀವನಶೈಲಿ, ಬ್ಲಾಗ್, ಕಥೆ, ಕವಿತೆ, ಫೇಸ್ಬುಕ್, ದೂರದರ್ಶನ, ಪ್ರವಾಸ ಕಥನ, ಪತ್ರಿಕೆ, ಅಂಕಣ, ನಾಟಕ, ಸಾಕ್ಷ್ಯಚಿತ್ರ, ಸಿನಿಮಾ, ಅಭಿನಯ, ಯೂಟ್ಯೂಬ್ ಮೂಲಕ ಚಿರಪರಿಚಿತರಾಗಿರುವ ಪ್ರೊ. ಸಿದ್ದು ಯಾಪಲಪರವಿ ಅವರು ಈಗಾಗಲೇ ಸಾವಿರಾರು ಉಪನ್ಯಾಸಗಳನ್ನು ನಾಡಿನಾದ್ಯಂತ ನೀಡಿ ಹೆಸರುವಾಸಿಯಾಗಿದ್ದಾರೆ.
ತಾಲೂಕಿನ ಮತ್ತು ಪಟ್ಟಣದ ಪದವಿ ಕಾಲೇಜು ಹಾಗೂ ಸ್ನಾತಕೋತ್ತರ ವಿದ್ಯಾರ್ಥಿಗಳು ಈ ಉಪನ್ಯಾಸದ ಪ್ರಯೋಜನ ಪಡೆಯಬೇಕು. ಶಿಕ್ಷಕರು, ಸಮಾನ ಮನಸ್ಕರು, ಸಂಘ ಸಂಸ್ಥೆಗಳಲ್ಲಿ ಗುರುತಿಸಿಕೊಂಡವರು, ಜೀವನದಲ್ಲಿ ಜೀವನೋತ್ಸಾಹವನ್ನು ಬಯಸುವವರಿಗಾಗಿ ಈ ವಿಶೇಷ ಉಪನ್ಯಾಸವನ್ನು ಏರ್ಪಡಿಸಲಾಗಿದೆ ಆಸಕ್ತರು ಈ ಉಪನ್ಯಾಸದ ಲಾಭವನ್ನು ಪಡೆಯಬೇಕು ಎಂದು ಆಳಂದ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಹಣಮಂತ ಶೇರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.