ಶಹಾಬಾದ: ಮೋದಿ’ ಉಪನಾಮ ಟೀಕೆ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ರಾಹುಲ್ ಗಾಂಧಿ ಅವರಿಗೆ ತಡೆ ನೀಡಿದ ನಂತರ ಲೋಕಸಭೆಯ ಸೆಕ್ರೆಟರಿಯೇಟ್ ಸದಸ್ಯತ್ವವನ್ನು ಮರುಸ್ಥಾಪಿಸಿ, ರಾಹುಲ್ ಗಾಂಧಿ ಸಂಸತ್ ಪ್ರವೇಶ ಮಾಡಿರುವ ಹಿನ್ನೆಲೆಯಲ್ಲಿ ಮಂಗಳವಾರ ಕಾಂಗ್ರೆಸ್ ಕಚೇರಿಯಲ್ಲಿ ಕಾಂಗ್ರೆಸ್ ಮುಖಂಡರು ಹಾಗೂ ಕಾರ್ಯಕರ್ತರು ವಿಜಯೋತ್ಸವ ಆಚರಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಡಾ.ರಶೀದ್ ಮರ್ಚಂಟ್ ಮಾತನಾಡಿ, ಕಳೆದ ಆರು ತಿಂಗಳಿನಿಂದ ಸಂಸತ್‍ನಲ್ಲಿ ಭಾಗಿಯಾಗದೇ ದೂರ ಉಳಿದಿದ್ದ ರಾಹುಲ್ ಗಾಂಧಿ ಇಂದು ಮತ್ತೆ ಲೋಕಸಭೆ ಪ್ರವೇಶ ಮಾಡಿದ್ದಾರೆ. ಜನರ ಆಶೋತ್ತರಗಳಿಗೆ ಮತ್ತು ಚುನಾಯಿತ ಸದಸ್ಯರ ಧ್ವನಿಗೆ ಸ್ಪಂದಿಸುವ ಕೆಲಸ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿದೆ. ಸಂವಿಧಾನದ ನೆರಳಲ್ಲಿ ಭಾರತ ಇರುವಾಗ ಸತ್ಯವನ್ನು ಹತ್ತಿಕ್ಕಲು ಯಾರಿಂದಲೂ ಸಾಧ್ಯವಿಲ್ಲ. ರಾಹುಲ್ ಗಾಂಧಿ ಸಂಸತ್ತಿಗೆ ಮತ್ತೊಮ್ಮೆ ಕಾಲಿಟ್ಟಿದ್ದಾರೆ. ಇನ್ನಷ್ಟು ಪ್ರಶ್ನೆಗಳೊಂದಿಗೆ, ಇನ್ನಷ್ಟು ಆತ್ಮವಿಶ್ವಾಸದೊಂದಿಗೆ ಹಾಗೂ ಇನ್ನಷ್ಟು ದೃಢತೆಯೊಂದಿಗೆ ಸತ್ಯದ ಪರವಾಗಿ ಮಾತನಾಡುತ್ತಾರೆ.ಆದರೆ ಬಿಜೆಪಿ ದ್ವೇಷದ ರಾಜಕಾರಣ ಮಾಡುತ್ತಿದ್ದಾರೆ. ಈಗಾಗಲೇ ರಾಜ್ಯದಲ್ಲಿ ಮತದಾರರು ಸರಿಯಾದ ಪಾಠ ಕಲಿಸಿದ್ದಾರೆ.ಮುಂದಿನ ಲೋಕಸಭೆ ಚುನಾವಣೆಯಲ್ಲೂ ಪಾಠ ಕಲಿಸಲಿದ್ದಾರೆ ಎಂದು ಹೇಳಿದರು.
ಕಾಂಗ್ರೆಸ್ ಮುಖಂಡರು ಹಾಗೂ ಕಾರ್ಯಕರ್ತರು ರಾಹುಲ್ ಗಾಂಧಿ ಅವರ ಭಾವಚಿತ್ರಕ್ಕೆ ಕ್ಷೀರಾಭಿಷೇಕ ಮಾಡಿದರು. ಮುಖಂಡರಾದ ವಿಜಯ್ ಕುಮಾರ್ ಮುತ್ತಟ್ಟಿ, ಯಾಕೂಬ್ ಮಚರ್ಂಟ, ಸಾಹೇಬಗೌಡ ಬೋಗುಂಡಿ, ಕಿರಣ ಚವ್ಹಾಣ, ಮೃತ್ಯುಂಜಯ್ ಹಿರೇಮಠ, ವಿಶ್ವರಾಧ್ಯ ಬಿರಾಳ, ನಿಂಗಣ್ಣ ದೇವಕರ್, ಮಹ್ಮದ ಉಬೇದುಲ್ಲಾ, ಆಶಮ್ ಖಾನ್, ಶರಣಗೌಡ ಪಾಟೀಲ್, ಅನ್ವರ್ ಪಾμÁ, ನಾಗರಾಜ ಸಿಂಗೆ, ಕೃಷ್ಣಪ್ಪ ಕರಣಿಕ,ಡಾ.ಅಹ್ಮದ್ ಪಟೇಲ್, ಸೂರ್ಯಕಾಂತ ಕೋಬಾಳ, ಶಿವಕುಮಾರ ನಾಟೇಕಾರ್, ಮಲ್ಕಣ್ಣ ಮುದ್ದಾ, ನಾಗಣ್ಣ ರಾಂಪೂರೆ, ರಾಜ್ ಮಹಮ್ಮದ್ ರಾಜಾ, ಮಲ್ಲಿಕಾರ್ಜುನ ಜಲಂಧರ್, ದೇವೇಂದ್ರಪ್ಪ ವಾಲಿ, ರಮೇಶ ಪವಾರ್, ಮಹ್ಮದ ಇಮ್ರಾನ್, ಅಜರುದ್ದಿನ್ ಇತರರು ಇದ್ದರು.