ಶಾಲೆಗಳ ಮೂಲಭೂತ ಸೌಕರ್ಯಗಳ ಕೊರತೆ ನೀಗಿಸಲು ಮನವಿ

0
48

ಕಲಬುರಗಿ: ಕಾಳಗಿ ತಾಲೂಕಿನ ಮಾಡಬುಳ ಗ್ರಾಮ ಪಂಚಾಯತ ನೂತನ ಅಧ್ಯಕ್ಷೆಯಾಗಿ ಆಯ್ಕೆಯಾಗಿರುವ ಮಹಾದೇವಿ ಎಮ.‌ಸುಭೇದಾರ ವಚ್ಚಾ ಅವರನ್ನು ವಚ್ಚಾ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಸಿಬ್ಬಂದಿ ವರ್ಗ ಮತ್ತು ಶಾಲೆಯ ಮೇಲಸ್ತುವಾರಿ ಸಮಿತಿ ಇವುಗಳ ಸಂಯುಕ್ತ ಆಶ್ರಯದಲ್ಲಿ ನೂತನ ಅಧ್ಯಕ್ಷರಿಗೆ ಆದ್ಧೂರಿಯಾಗಿ ಶಾಲು ಹೊದಿಸಿ ಸನ್ಮಾನಿಸಲಾಯಿತು.

ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಮಾಡಬೂಳ ವಲಯದ ಸಮೂಹ ಸಂಪನ್ಮೂಲ ಅಧಿಕಾರಿಯಾದ ಶಿವಲಿಂಗಯ್ಯ ಗುರುಗಳು ಮಾತನಾಡಿ ನಮ್ಮ ಮಾಡಬೂಳ ವಲಯಕ್ಕೆ ಹಲವಾರು ಶಾಲೆಗಳು ತಮ್ಮ ಗ್ರಾಮ ಪಂಚಾಯತ ವ್ಯಾಪ್ತಿಗೆ ಒಳಪಡುತ್ತವೆ. ಈ ಶಾಲೆಗಳಲ್ಲಿ ಏನಾದರೂ ಮೂಲಭೂತ ಸೌಕರ್ಯಗಳ ಕೊರತೆ ನಿಗಿದರೆ ತಾವು ಹಂತ ಹಂತವಾಗಿ ಮೂಲಭೂತ ಸೌಕರ್ಯಗಳನ್ನು ನೀಡಬೇಕು ಎಂದು ನೂತನ ಅಧ್ಯಕ್ಷರಲ್ಲಿ ಎಲ್ಲಾ ಶಾಲೆಯ ಮುಖ್ಯ ಗುರುಗಳ ಪರವಾಗಿ ಮನವಿ ಮಾಡಿದರು.

Contact Your\'s Advertisement; 9902492681

ಶಾಲೆಯ ಮುಖ್ಯ ಗುರುಗಳಾದ ಕುಮಾರಿ ಗಾಯಿತ್ರಿದೇವಿ ಸಿ.ಡಿ ಮತ್ತು ಶಿಕ್ಷಣ ಪ್ರೇಮಿ ಸಿದ್ದಲಿಂಗ ಸಿ.ಕಟ್ಟಿಮನಿ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಖಜಾಂಚಿಯಾದ ಸುಭಾಷ ಎಸ್.ಪವಾರ ಕಾರ್ಯಕ್ರಮದ ಕುರಿತು ಮಾತನಾಡಿದರು ತದನಂತರ 2023-24 ನೇಯ ಸಾಲಿನ ಶಾಲಾ ಮಕ್ಕಳಿಗೆ ಬಂದ ಸಮವಸ್ತ್ರವನ್ನು ನೂತನ ಗ್ರಾಮ ಪಂಚಾಯತ ಅಧ್ಯಕ್ಷರಾದ ಶ್ರೀಮತಿ ಮಹಾದೇವಿ ಎಮ್.ಸುಭೇದರ ಇವರ ಅಮೃತ ಹಸ್ತದಿಂದ ಶಾಲಾ ಮಕ್ಕಳಿಗೆ ವಿತರಿಸಿದರು.

ಗ್ರಾಮ ಪಂಚಾಯತ ಮಾಜಿ ಉಪಾಧ್ಯಕ್ಷರಾದ ಲಲಿತಬಾಯಿ ದೊಡ್ಡಮನಿ, ಕಾಶಿನಾಥ ವಚ್ಚಾ, ಶಂಕರ ಪಾಣೆಗಾಂವ ವೇದಿಕೆಯಲ್ಲಿ ಉಪಸ್ಥಿತರಿದ್ದರು.ಕಾರ್ಯಕ್ರಮದ ಸಭೆಯ ಅಧ್ಯಕ್ಷತೆಯನ್ನು ಶಾಲೆಯ ಎಸ್.ಡಿ.ಎಂ.ಸಿ ಅಧ್ಯಕ್ಷರಾದ ಸಂಜಯಕುಮಾರ ದೊಡ್ಡಮನಿ ವಹಿಸಿದ್ದರು.ಸುಭಾಷ ಪವಾರ ಅವರು ಸ್ವಾಗತ ಕೋರಿದರು. ಶಿಕ್ಷಕ ಮಠಪತಿ ಕಾರ್ಯಕ್ರಮ ನಿರೂಪಿಸಿದರು. ಶಾಲೆಯ ಸಹ ಶಿಕ್ಷಕರಾದ ಪ್ರಕಾಶ ಕಾರ್ಯಕ್ರಮವನ್ನು ವಂದಿಸಿದರು.

ಈ ಸಂದರ್ಭದಲ್ಲಿ ಶಾಲೆಯ ಹಿರಿಯ ಶಿಕ್ಷಕರಾದ ರಾಜೇಶ್ವರಿ,ಭೀಮಬಾಯಿ,ಸುಭದ್ರ, ವಿಜಯಲಕ್ಷ್ಮಿ, ಶ್ರೀಮತಿ ಅಯ್ಯಮ್ಮ ಎಮ್.ಗಚ್ಚಿನಮನಿ ಹಾಗೂ ಶಾಲೆಯ ಶಿಕ್ಷಕರು ಮತ್ತು ಶಾಲೆಯ ಮಕ್ಕಳು ಉಪಸ್ಥಿತರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here