ಪಿಂಚಣಿ ಹೆಸರಲ್ಲಿ ಸರ್ಕಾರಕ್ಕೆ ವಂಚನೆ: ಸೈಬಣ್ಣ ಜಮಾದಾರ ಆರೋಪ

0
25

ಕಲಬುರಗಿ: ಗ್ರಾಮದಲ್ಲಿ ವಾಸವಾಗಿರುವ ಜನಸಂಖ್ಯೆಗಿಂತ ಹೆಚ್ಚಿನ ಜನರು ವಿವಿಧ ಪಿಂಚಣಿಗಳ ಪಡೆಯುವ ಮೂಲಕ ಸರಕಾರಕ್ಕೆ ದೋಖಾ ಮಾಡಲಾಗುತ್ತಿದೆ, ಇದಕ್ಕೆ ಪುಷ್ಠಿ ನೀಡಿರುವ ಅಧಿಕಾರಿಗಳ ವಿರುದ್ಧ ಸೂಕ್ತಕ್ರಮ ಜರುಗಿಸಬೇಕೆಂದು  ಅಹಿಂದ ಚಿಂತಕರ ವೇದಿಕೆಯ ಸಂಸ್ಥಾಪಕ ರಾಜ್ಯಾಧ್ಯಕ್ಷ ಸೈಬಣ್ಣ ಜಮಾದಾರ ಆಗ್ರಹಿಸಿದರು.

ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತಿದ್ದ ಅವರು, ಅಫಜಲಪೂರ ತಾಲೂಕಿನ ಶೇಷಗಿರಿವಾಡಿ ಗ್ರಾಮದಲ್ಲಿ 1311 ಜನ ಮತದಾರರಿದ್ದು ಅಲ್ಲಿ ವಿವಿಧ ಪಿಂಚಣಿ ಪಡೆಯುವರ ಸಂಖ್ಯೆ 1687 ಜನರಿದ್ದಾರೆ, ಯಡ್ರಾಮಿ ತಾಲೂಕಿನ ಮೂರಗನೂರ ಗ್ರಾಮದಲ್ಲಿ 1024 ಜನರಿದ್ದು ಇಲ್ಲಿ 1047 ಜನರು ವಿವಿಧ ಪಿಂಚಣಿ ಪಡೆಯುತ್ತಿದ್ದಾರೆ, ಕಮಲಾಪೂರ ತಾಲೂಕಿನ ವಡಗೇರಾ ಗ್ರಾಮದಲ್ಲಿ 293 ಜನ ಮತದಾರರಿದ್ದು, 1073 ಜನ ಪಿಂಚಣಿದಾರರು ಇದ್ದಾರೆ, ಚಿಂಚೋಳಿ ತಾಲೂಕಿನ ವಂಟಿಗುಡಸಿ ತಾಂಡಾದಲ್ಲಿ 359 ಜನ ಮತದಾರರಿದ್ದು ಇಲ್ಲಿ ಪಿಂಚಣಿ ಪಡೆಯುವರ ಸಂಖ್ಯೆ 800ಕ್ಕೂ ಹೆಚ್ಚು ಜನರಿದ್ದಾರೆಂದು ದೂರಿದರು.

Contact Your\'s Advertisement; 9902492681

ಗ್ರಾಮಗಳಲ್ಲಿ ವಾಸಿಸುವವರಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ವಿವಿಧ ವೃದ್ದಾಪ್ಯ, ವಿಧವಾ ವೇತನ ಸೇರಿದಂತೆ ವಿವಿಧ ಪಿಂಚಣಿ ಪಡೆಯಲಿಕ್ಕೆ ಆಯ್ಕೆಯಾದ ಸಂದರ್ಭದಲ್ಲಿದ್ದ ಅದಿಕಾರಿಗಳ ಯಡವಟ್ಟು ಇದಾಗಿದ್ದು, ತಕ್ಷಣವೇ ಜಿಲ್ಲಾದಿಕಾ ರಿಗಳು ಮತ್ತು ಸಂಬಂಧಪಟ್ಟ ಅದಿಕಾರಿಗಳು ಗಮನ ಹರಿಸಿ ಸರಕಾರದ ದುಡ್ಡು ವ್ಯಥಾ ಹಾಳಾಗುತ್ತಿರುವುದನ್ನು ತಡೆಯಲು ಸೂಕ್ತ ಕ್ರಮ ಜರುಗಿಸಿ ತಪ್ಪಿತಸ್ಥರ ವಿರುದ್ಧ ಕಾನೂನುಕ್ರಮ ಜರುಗಿಸಬೇಕೆಂದು ಒತ್ತಾಯಿಸಿದರು.

ರಮೇಶ, ಹಡಪದ, ಸಂಜು ಹೊಡಲ್ಕರ್, ಯಶ್ವಂತರಾವ ಸೂರ್ಯವಂಶಿ, ವಿಜಯಕುಮಾರ ಮಠಪತಿ, ವಿನೋದಕುಮಾರ ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here