ಸಮಾಜಕ್ಕೆ ಛಾಯಾಗ್ರಾಹಕರ ಕೊಡುಗೆ ಅನನ್ಯ

0
30

ಶಹಾಬಾದ: ಒಂದು ಚಿತ್ರ ಸಾವಿರ ಶಬ್ದಗಳಿಗೆ ಸಮಾನ. ವರ್ಣಿಸಲಾಗದ ದೃಶ್ಯವನ್ನು ನೈಜವಾಗಿ ಸೆರಹಿಡಿಯುವ ಕಲೆ ಕ್ಯಾಮರಾ ಮತ್ತು ಛಾಯಾಗ್ರಾಹಕರು ಹೊಂದಿದ್ದಾರೆ. ಇದರಿಂದ ಆ ಸಂದರ್ಭ ಖುದ್ದಾಗಿ ವೀಕ್ಷಿಸಿದ ಅನುಭವ ಉಂಟಾಗುವಂತೆ ಮಾಡಿ, ಅಲ್ಲಿನ ಸ್ಥಿತಿ-ಗತಿಯ ನೈಜ ಚಿತ್ರಣ ನೀಡುವ ಕೆಲಸ ಮಾಡುವ ಛಾಯಾಗ್ರಾಹಕರ ಕೊಡುಗೆ ತುಂಬಾ ಅನನ್ಯವಾಗಿದೆ ಎಂದು ಮುಖಂಡರಾದ ಸುರೇಶ ಮೆಂಗನ್ ಹೇಳಿದರು.

ಅವರು ನಗರದ ಜಿಇ ಕಾಲೋನಿಯ ಎಮ್‍ಸಿಸಿ ಶಾಲೆಯಲ್ಲಿ ಯುವ ಛಾಯಾಚಿತ್ರಕಾರ ಖಾಜಾ ಪಟೇಲ ಅವರು ಆಯೋಜಿಸಿದ ಛಾಯಾಚಿತ್ರ ಪ್ರದರ್ಶನ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.

Contact Your\'s Advertisement; 9902492681

ಕ್ಯಾಮರಾ ಮಾನವನ ಕಣ್ಣುಗಳಿಂದ್ದಂತೆ. ಕೆಲವು ಸಲ ನಾವೂ ನೋಡಿದ್ದು ನೆನಪಿಗೆ ಬರದಿದ್ದರೂ, ಕ್ಯಾಮಾರಾವು ಶಾಶ್ವತ ದಾಖಲೆಯನ್ನು ಒದಗಿಸುತ್ತದೆ. ಪ್ರಸ್ತುತವಾಗಿ ಮೋಬೈಲ್ ಯುಗದಲ್ಲಿ ಛಾಯಾಗ್ರಾಹಕರು ತೀರ್ವ ಸ್ಪರ್ಧೆಯನ್ನು ಎದುರಿಸಿ ಕಾರ್ಯನಿರ್ವಹಿಸಬೇಕಾಗಿರುವುದು ಒಂದು ಸವಾಲಿನ ಕಾರ್ಯವಾಗಿದೆ ಎಂದು ಹೇಳಿದರು.

ಕಾರ್ಯಕ್ರಮವನ್ನು ಉದ್ಘಾಟಿಸಿದ ವಾಸುದೇವ ಚಹ್ವಾಣ ಮಾತನಾಡಿ, ಒಂದು ಚಿತ್ರ ಸಾವಿರ ಪದಗಳಿಗೆ ಸಮ, ಛಾಯಾಗ್ರಹಣಕ್ಕೆ ಇರುವ ಸಾಮಥ್ರ್ಯವೇ ಅಂತಹದ್ದು, ಪದಗಳಲ್ಲಿ ವರ್ಣಿಸಲು ಸಾಧ್ಯವಾದ ಅದೇμÉ್ಟೂೀ ಮಾತುಗಳನ್ನು ಕೇವಲ ಒಂದು ಚಿತ್ರ ಬಿಡಿಸುತ್ತದೆ ಎಂದು ಹೇಳಿದರು.

ಎಮ್‍ಸಿಸಿ ಶಾಲೆಯ ಸಿಸ್ಟರ್ ರಿಷಿಕ ರೋಸ್ ಮಾತನಾಡಿ, ಛಾಯಾಗ್ರಹಣವು ಒಂದು ಕಲಾ ಪ್ರಕಾರವಾಗಿದ್ದು, ಇದು ದೃಶ್ಯ ರೂಪದಲ್ಲಿ ಕ್ಷಣಗಳು ಮತ್ತು ಭಾವನೆಗಳನ್ನು ಸೆರೆಹಿಡಿಯುವ ಒಂದು ಅದ್ಭುತವಾಗಿದೆ. ಛಾಯಾಗ್ರಹಣದ ಹಿಂದಿನ ಕಲೆ, ವಿಜ್ಞಾನ ಮತ್ತು ಇತಿಹಾಸವನ್ನು ಸ್ಮರಿಸಲು ಪ್ರಪಂಚದಾದ್ಯಂತ ವಿಶ್ವ ಛಾಯಾಗ್ರಹಣ ದಿನವನ್ನು ಆಚರಿಸಲಾಗುತ್ತದೆ ಎಂದರು.

ವಿದ್ಯಾರ್ಥಿಗಳ ಪಾಲಕ ಪೆÇೀಷಕರ ಸಂಘದ ಅಧ್ಯಕ್ಷ ಸುನಿಲ ಭಗತ್ ವೇದಿಕೆಯಲ್ಲಿ ಇದ್ದರು. ಛಾಯಾಚಿತ್ರಕಾರ ಖಾಜಾ ಪಟೇಲ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು, ಭರತ ಧನ್ನಾ ನಿರೂಪಿಸಿದರು, ರವಿ ದಾಚಂಪಲ್ಲಿ ವಂದಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here