ಕಲಬುರಗಿ; ಲಿಟಲ್ ಲ್ಯಾಂಪ್ಸ್ ಪ್ಲೇ ಸ್ಕೂಲ್ ಕೃಷ್ಣ ಜನ್ಮಾಷ್ಟಮಿ ಯನ್ನು ಅದ್ದೂರಿಯಾಗಿ ಆಚರಿಸಲಾಯಿತು. ಈ ಕಾರ್ಯಕ್ರಮಕ್ಕೆ ಅತಿಥಿಗಳಾಗಿ ಆಗಮಿಸಿದ ಗಂದಿಗುಡಿ ಬಡಾವಣೆಯ ಹಿರಿಯರಾದ ಶ್ರೀಮತಿ ಶಕುಂತಲಾ ಹವಾಣಿ ರವರು ಆಗಮಿಸಿ ಶ್ರೀ ಕೃಷ್ಣನ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಮಾತನಾಡಿದರು.
ನಮ್ಮ ಸಂಸ್ಕೃತಿಯ ಪರಂಪರೆಯಂತೆ ನಮ್ಮಲ್ಲಿ ಪ್ರತಿಯೊಂದು ಹಬ್ಬವು ತನ್ನದೇ ಆದ ವೈಶಿಷ್ಟ ಹೊಂದಿದೆ ಹಾಗಾಗಿ ಇಂದಿನ ಮಕ್ಕಳಿಗೆ ಹಬ್ಬಗಳ ಆಚರಣೆ ಹಿರಿಯ ಕೀರಿಯರ ಬಗ್ಗೆ ಗೌರವ ನೀಡುವುದು ಅವುಗಳ ಮಹತ್ವದ ಬಗ್ಗೆ ತಿಳಿಸಿ ಕೊಡಬೇಕಾಗಿದೆ ಶ್ರೀ ಕೃಷ್ಣ ದೇವರ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಮಕ್ಕಳಿಗೆ ಒಳ್ಳೆಯ ಮೌಲ್ಯ ಆಧಾರಿತ ಗುಣಗಳನ್ನು ಹಾಗೂ ಶಿಕ್ಷಣವನ್ನು ನೀಡಲು ಕರೆ ನೀಡಿದರು.
ಈ ಸಂಸ್ಥೆಯ ಅಧ್ಯಕ್ಷೀಯರಾದ ರಾಜೇಶ್ವರಿ ಎನ್ ಮೂಲ್ಗೆ ಈ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಕ್ಕಳಿಗೆ ಸಿಹಿ ಹಂಚುವುದರೊಂದಿಗೆ ಮಾತನಾಡುತ್ತಾ ಶ್ರೀ ಕೃಷ್ಣನು ಶಿಷ್ಟ ರಕ್ಷಕ ದುಷ್ಟ ಸಂಹಾರಕನಾಗಿ ಜಗದ್ ಉದ್ಧಾರವನ್ನು ಮಾಡಿದ ಭಗವದ್ಗೀತೆಯ ಮುಖಾಂತರ ಧರ್ಮದ ಮೂಲಕ ಎಲ್ಲರೂ ನಡೆಯುವಂತೆ ತಿಳಿಹೇಳಿದ್ದಾರೆ ಶ್ರೀ ಕೃಷ್ಣನ ತಾಳ್ಮೆ ಆದರ್ಶಗಳನ್ನು ನಮಗೆ ದಾರಿ ದೀಪಗಳಾಗಿವೆ ಎಂದು ಹೇಳಿದರು.
ಈ ಶಾಲೆಯ ಪುಟ್ಟ ಮಕ್ಕಳು ಕೃಷ್ಣ ಮತ್ತು ರಾಧೆಯ ವೇಷ ಭೂಷಣಗಳನ್ನು ತೊಟ್ಟು ಶ್ರೀ ಕೃಷ್ಣನ ಹಾಡುಗಳು ಹಾಗೂ ನೃತ್ಯವನ್ನು ವಿವಿಧ ಭಂಗಿಯಲ್ಲಿ ಮಾಡುವುದರ ಮೂಲಕ ಎಲ್ಲರ ಮನಸ್ಸನ್ನು ತಮ್ಮತ್ತ ಸೆಳೆಯುವುದರಲ್ಲಿ ಯಶಸ್ವಿಯಾಗಿ ಎಲ್ಲರ ಮನಸೂರಗೊಳಿಸಿದರು.
ಈ ಕಾರ್ಯಕ್ರಮದಲ್ಲಿ ಈ ಸಂಸ್ಥೆ ಶಿಕ್ಷಕರು ಹಾಗೂ ಪಾಲಕರು ಭಾಗವಹಿಸಿ ಶ್ರೀಕೃಷ್ಣ ಜನ್ಮ ದಿನಾಚರಣೆಯನ್ನು ಆಚರಿಸಲು ಸಹಕರಿಸಿದರು.