ಕಲಬುರಗಿ; ಜಿಲ್ಲೆಯ ಸೇಡಂ ಮತ್ತು ಚಿಂಚೋಳಿ ತಾಲೂಕಿನಲ್ಲಿ ಕೀಟಭಾದೆ, ಸಸ್ಯ ರೋಗ ಮತ್ತು ಪರಾವಲಂಬಿ ಸಸ್ಯ ಕಸ್ಕೂಟ ಹಾನಿಯ ಕುರಿತು ಕ್ಷೇತ್ರ ಭೇಟಿ ಮತ್ತು ಅಧ್ಯಯನ ನಡೆಸಲಾಯಿತು.
ಐಸಿಎಆರ್-ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥರಾದ ಡಾ. ರಾಜು ಜಿ. ತೆಗ್ಗಳ್ಳಿ ಮತ್ತು ಸಸ್ಯರೋಗ ತಜ್ಞರಾದ ಡಾ. ಜಹೀರ್ ಅಹೆಮದ್, ಸೇಡಂ ವಿಭಾಗದ ಜಂಟಿ ಕೃಷಿ ಉಪನಿರ್ದೇಕರಾದ ಶ್ರೀಮತಿ ಅನುಸೂಯಾ ಹೂಗಾರ, ಚಿತ್ತಾಪೂರ, ಸೇಡಂ, ಚಿತ್ತಪೂರ ತಾಲೂಕಿನ ಸಹಾಯಕ ಕೃಷಿ ಅಧಿಕಾರಿಗಳಾದ ಶ್ರೀ ಸಂಜೀವ ಮಾನೆ, ಹಂಪ್ಪಣ್ಣ, ವೀರಶೆಟ್ಟಿ ರಾಠೋಡ್, ಕೃಷಿ ಅಧಿಕಾರಿಗಳಾದ ಮುನಿಯಪ್ಪ, ಬಸವರಾಜ ಕೊಡ್ಸಾ, ಗುರಪಾದಪ್ಪಾ, ಬಾಲರಾಜ್ ಹಾಗೂ ರೈತರು ಕ್ಷೇತ್ರ ಭೇಟಿಯಲ್ಲಿ ಭಾಗವಹಿಸಿದರು.
ಕಸ್ಕೂಟ ಪರಾವಲಂಬಿ ಸಸ್ಯ ಹತೋಟಿ ಹಾಗೂ ಆರಂಭಿಕ ನೆಟೆ ರೋಗ ಭಾದೆಯನ್ನು ನಿರ್ವಹಿಸುವ ವಿಧಾನಗಳನ್ನು ರೈತರಿಗೆ ವಿವರಿಸಲಾಯಿತು.