ಸಶಕ್ತ ನಾಡು ಕಟ್ಟುವಲ್ಲಿ ಮಹಿಳೆಯರ ಪಾತ್ರ ಪ್ರಮುಖ: ಪ್ರತಿಭಾ ಛಾಮಾ

0
97

ಕಲಬುರಗಿ: ಒಂದು ದೇಶ, ಒಂದು ನಾಡು ಬೆಳೆಯಬೇಕಾದರೆ ಪ್ರತಿಯೊಬ್ಬರ ಕಾರ್ಯ ಪ್ರಮುಖವಾಗಿರುತ್ತದೆ. ಒಂದು ನಾಡು ಸಶಕ್ತವಾಗಿ ಬೆಳೆಯಬೇಕಾದರೆ ಮಹಿಳೆಯರ ಪಾತ್ರ ಪ್ರಮುಖ ಎಂದು ನಗರದ ಪ್ರತಿಷ್ಠಿತ ಶ್ರೀಮತಿ ವ್ಹಿ ಜಿ ಮಹಿಳಾ ಪದವಿ ಕಾಲೇಜಿನಲ್ಲಿ ಆಯೋಜಿಸಿದ ರಾಷ್ಟ್ರೀಯ ಸೇವಾ ಯೋಜನೆಯ ಸಂಸ್ಥಾಪನಾ ದಿನಾಚರಣೆ ಕಾರ್ಯಕ್ರಮದವನ್ನೂ ಉದ್ಘಾಟಿಸಿದ ಗುಲಬರ್ಗಾ ವಿಶ್ವವಿದ್ಯಾಲಯದ ಮಾಜಿ ಸಿಂಡಿಕೇಟ್ ಸದಸ್ಯರಾದ ಶ್ರೀಮತಿ ಪ್ರತಿಭಾ ಛಾಮಾ ಅವರು ನುಡಿದರು.

ಮುಂದುವರೆದು ದೇಶ ಅಭಿವೃದ್ಧಿ ಯಾಗಬೇಕಾದರೆ ಪ್ರತಿಯೊಬ್ಬರ ಕರ್ತವ್ಯ ಪ್ರಮುಖ ಎಂದು ನುಡಿದರು.

Contact Your\'s Advertisement; 9902492681

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಹಾವಿದ್ಯಾಲಯದ ಪ್ರಾಚಾರ್ಯರಾದ ಡಾ. ರಾಜೇಂದ್ರ ಕೊಂಡಾ ಅವರು ವಹಿಸಿಕೊಂಡು ರಾಷ್ಟ್ರೀಯ ಸೇವಾ ಯೋಜನೆಯ ಆವಶ್ಯಕತೆ ಕುರಿತು ಮಾತನಾಡಿದರು.

ಕಾರ್ಯಕ್ರಮದ ವೇದಿಕೆಯಲ್ಲಿ ಉಪ ಪ್ರಾಚಾರ್ಯರಾದ ಉಮಾ ರೇವೂರ್, ಡಾ. ಚಂದ್ರಕಲಾ ಪಾಟೀಲ್, ಮಂಗಳಾ ಬಿರಾದಾರ ಉಪಸ್ಥಿತರಿದ್ದರು.

ಕಾರ್ಯಕ್ರಮದ ನಿರ್ವಹಣೆಯನ್ನು ಕು. ಅಂಜಲಿ ಯಾದವ ಮಾಡಿದರು. ಅತಿಥಿಗಳ ಸ್ವಾಗತವನ್ನೂ ಡಾ. ರೇಣುಕಾ ಹಾಗರಗುಂಡಗಿ ಮಾಡಿದರು. ಅತಿಥಿ ಪರಿಚಯವನ್ನೂ ಸುಷ್ಮಾ ಕುಲಕರ್ಣಿಯವರು ಮಾಡಿದರು.

ಕಾರ್ಯಕ್ರಮದಲ್ಲಿ ಡಾ. ನಾಗೇಂದ್ರ ಮಸೂತಿ, ಡಾ. ಪ್ರೇಮಚಂದ ಚವ್ಹಾಣ, ಡಾ. ಜ್ಯೋತಿಪ್ರಕಾಶ ದೇಶಮುಖ, ಡಾ. ಶರಣಮ್ಮ ಕುಪ್ಪಿ, ಶ್ರೀಮತಿ ಶಿವಲೀಲಾ ದೊತ್ರೆ ಮತ್ತು ಬೋಧಕ, ಬೋಧಕೇತರ ಸಿಬ್ಬಂದಿ ವರ್ಗದವರು ಮತ್ತು ಸ್ವಯಂ ಸೇವಕರು ಉಪಸ್ಥಿತರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here