ವಾಡಿ: ಪಟ್ಟಣದ ರೈಲ್ವೆ ನಿಲ್ದಾಣದಲ್ಲಿ ಸ್ವಚ್ಛತಾ ಹಿ ಸೇವಾ ಅಭಿಯಾನದ ಪ್ರಯುಕ್ತ ನಿಲ್ದಾಣದ ಆವರಣದಲ್ಲಿ ರೈಲ್ವೆ ನಿಲ್ದಾಣದ ಸ್ಟೇಷನ್ ಮಾಸ್ಟರ್ ಜೆಎನ್ ಪರಿಡಾ, ರಾಹುಲ್, ಪೂಮಾ ರಾಠೊಡ ಹಾಗೂ ಬಿಜೆಪಿ ತಾಲೂಕ ಉಪಾಧ್ಯಕ್ಷ ವೀರಣ್ಣ ಯಾರಿ, ಪುರಸಭೆಯ ಅಧಿಕಾರಿಗಳಾದ ಲತಾಮಣಿ,ಬಸವರಾಜ ಪೂಜಾರಿ ಸೇರಿದಂತೆ ಪುರಸಭೆ ಅಧಿಕಾರಿಗಳು ಪುರಸಭೆ ಪೌರಕಾರ್ಮಿಕರು ಹಾಗೂ ರೈಲ್ವೆ ಸಿಬ್ಬಂದಿಗಳು, ಪಟ್ಟಣದ ವಿವಿಧ ಸಂಘಟನೆಯ ಪ್ರಮುಖರು ಸ್ವಚ್ಛತಾ ಕಾರ್ಯದಲ್ಲಿ ತೊಡಗಿ ನಿಲ್ದಾಣದ ಆವರಣವನ್ನು ಸಂಪೂರ್ಣವಾಗಿ ಸ್ವಚ್ಛಗೊಳಿಸಿದರು.
ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಗಾಂಧಿ ಜಯಂತಿ ಪ್ರಯುಕ್ತ ಅವರಿಗೆ ಗೌರವ ಸಮರ್ಪಕವಾಗಿ ಕರೆ ನೀಡಿದ ಸ್ವಚ್ಛತಾ ಅಭಿಯಾನ ವಾಡಿ ಪಟ್ಟಣದಲ್ಲಿ ಅಭೂತಪೂರ್ವವಾಗಿ ಜರುಗಿತು.