ವಿದ್ಯಾರ್ಹತೆಗೆ ತಕ್ಕಂತೆ ದರ್ಜೆ ನೀಡಲು ನೀಡಲು ಸಚಿವ ಎನ್.ಎಸ್ ಭೋಸರಾಜುಗೆ ಮನವಿ

0
530

ಹಟ್ಟಿ: ವಿದ್ಯಾರ್ಹತೆಗೆ ತಕ್ಕಂತೆ ದರ್ಜೆ ನೀಡಬೇಕು ಎಂದು ಆಗ್ರಹಿಸಿ ಸೆಂಟರ್ ಆಫ್ ಆಫ್ ಟ್ರೇಡ್ ಯೂನಿಯನ್ಸ್ (ಸಿಐಟಿಯು) ನಿಂದ ತಾಲೂಕು ಸಮಿತಿಯಿಂದ ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಎನ್ ಎಸ್ ಭೋಸರಾಜು ಅವರಿಗೆ ಮನವಿ ಸಲ್ಲಿಸಿದರು.

ಮಂಗಳವಾರದಂದು ವಿಕಾಸಸೌಧದಲ್ಲಿ ಸಚಿವರ ಕಚೇರಿಯಲ್ಲಿ ಮನವಿ ಸಲ್ಲಿಸಿದ ಸಿಐಟಿಯು ಮುಖಂಡರು ಜಿ-12 ದರ್ಜೆಯಲ್ಲಿ ಸಾಮಾನ್ಯ ಕೆಲಸಗಾರಗಾಗಿ ಕಾರ್ಯನಿರ್ವಹಿಸುತ್ತಿದ್ದೆವೆ. ಅನುಕಂಪದ ಆಧಾರದ ಮೇಲೆ ಸುಮಾರು 7 ರಿಂದ 8 ವರ್ಷಗಳ ಕಾಲ ಸೇವೆ ಸಲ್ಲಿಸುತ್ತಾ ಬಂದಿದ್ದೇವೆ. ಈ ಮೊದಲು ಹಟ್ಟಿ ಚಿನ್ನದ ಗಣಿಯಲ್ಲಿ, ಆ ಕಂಪದ ಆಧಾರದ ಮೇಲೆ ಕಾರ್ಮಿಕರಿಗೆ 2013-14 ರಲ್ಲಿ ನೇಮಕಾತಿ ಮಾಡಿಕೊಂಡಿರುವ ಕಲಸುರರನ್ನು ವಿದ್ಯಾರ್ಹತೆಗೆ ಅನುಗುಣವಾಗಿ ಮುದ್ದೆಯನ್ನು ಕೊಟ್ಟಿರುತ್ತಾರೆ. ಆದರೆ ಚಿನ್ನದ ಗಣಿ ನಿರ್ದೇಶಕ ಮಂಡಳಿಯಲ್ಲಿ ವಿದ್ಯಾರ್ಹತೆಗೆ ತಕ್ಕಂತೆ ಉದ್ಯೋಗ ನೀಡಬೇಕೆಂಬ ನಿಯಮವಿದ್ದರೂ ಇದಾರನ್ನು ಪರಿಗಣಿಸದೆ, ನಿಯಮಗಳನ್ನು ಗಾಳಿಗೆ ತೂರಿ ಹೊಸದಾಗಿ ನೇರ ನೇಮಕಾತಿ ಮಾಡಿಕೊಳ್ಳಲಾಗುತ್ತಿದೆ ಎಂದು ಆರೋಪಿಸಲಾಯಿತು.

Contact Your\'s Advertisement; 9902492681

ಸುಮಾರು ವರ್ಷಗಳಿಂದ ಕರ್ತವ್ಯ ನಿರ್ವಹಿಸುತ್ತಿದ್ದೀವೆ. ನಮಗೆ ಗಣಿಯ ಕೆಲಸದಲ್ಲಿ ಅನುಭವವಿದೆ. ಕಂಪನಿಯಲ್ಲಿ ಪಧವೀದರರು, ಎಂ. ಎ., ಎಂ.ಕಾಂ, ಬಿ ಕಾಮ್. ಎಮ್.ಎಸ್.ಡಬ್ಲ್ಯೂ, ಡಿಪ್ಲೋಮಾ, ಡಿಪ್ಲೋಮಾ ನರ್ಸಿಂಗ್‌, ಬಿಎಸ್ಸಿ ಸರ್ಸಿಂಗ್, ಓಟಿ ಟೆಕ್ನಿಸಿಯನ್, ಲ್ಯಾಬ್ ಟೆಕ್ನಿಷಿಯನ್, ಐಟಿಐ ಹಾಗೂ ಇನ್ನಿತರ ಕೋರ್ಸುಗಳನ್ನು ಮುಗಿಸಿದವರು ಇದ್ದಾರೆ. ಕಂಪನಿಯಲ್ಲಿ ಸೇವೆಗೆ ಸೇರಿಕೊಳ್ಳುವಾಗಲೇ ನಮ್ಮ ಸರ್ಟಿಫಿಕೇಟ್‌ಗಳನ್ನು ನೀಡಿರುತ್ತೇವೆ. ಅದಕ್ಕಾಗಿ ನಮ್ಮನ್ನು ಖಾಲಿ ಇರುವ ಸ್ಥಾನಗಳಿಗೆ ಭರ್ತಿ ಮಾಡಿ ಉಳಿದ ಸ್ಥಾನಗಳಿಗೆ ನೇರ ನೇಮಕಾತಿ ಪ್ರಕಟಣೆ ಹೊರಡಿಸಬೇಕು ಎಂದು ಆಗ್ರಹಿಸಿದರು.

ಈ ಸಂದರ್ಭದಲ್ಲಿ ಸಿಐಟಿಯು ಜಿಲ್ಲಾಸಹ ಕಾರ್ಯದರ್ಶಿ ಮಹಮ್ಮದ್ ಹನೀಫ್, ಮುಖಂಡರಾದ ರಮೇಶ್ ವೀರಾಪೂರು, ಅಲ್ಲಾಭಕ್ಷ, ರಾಜರತ್ನಂ, ಸುದೀರ್ ಕುಮಾರ, ಅರುಣ್ ವಿ ಉಪಸ್ಥಿತರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here