ಕಾಯಂ ಶಿಕ್ಷಕರ ನೇಮಕಕ್ಕೆ ಸಿಎಂಗೆ ಎಸ್ಎಫ್ಐ ಒತ್ತಾಯ

0
16

ಬೆಂಗಳೂರು: ರಾಯಚೂರು ಜಿಲ್ಲೆಯ ಸರ್ಕಾರಿ ಶಾಲೆಗಳಿಗೆ ಕಾಯಂ ಶಿಕ್ಷಕರನ್ನು ನೇಮಿಸಿ ಸಾರ್ವಜನಿಕ ಶಿಕ್ಷಣ ಬಲಪಡಿಸಲು ಒತ್ತಾಯಿಸಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರಿಗೆ ಭಾರತ ವಿದ್ಯಾರ್ಥಿ ಫೆಡರೇಶನ್ ( ಎಸ್ಎಫ್ಐ) ನಿಯೋಗ ಭೇಟಿ ಮಾಡಿ ಮನವಿ ಸಲ್ಲಿಸಲಾಯಿತು.

ಸಿಎಂ ಗೃಹ ಕಚೇರಿ ಕೃಷ್ಣಾದಲ್ಲಿ ಮಂಗಳವಾರದಂದು ಅವರ ಭೇಟಿ ಮಾಡಿ ಮನವಿ ಸಲ್ಲಿಸಿ ಮಾತನಾಡಿದ ಅವರು 2022-23 ಸಾಲಿನ ಶಿಕ್ಷಕರ ವರ್ಗಾವಣೆಯಿಂದ ರಾಯಚೂರು ಜಿಲ್ಲೆಯ ಶಾಲೆಗಳು ಖಾಲಿಯಾಗಿವೆ. ಅದರಲ್ಲೂ 52000 ಸಾವಿರ ಮಕ್ಕಳಿರುವ ದೇವದುರ್ಗ ತಾಲೂಕಿನಿಂದ 373, 52000 ಮಕ್ಕಳಿರುವ ಮಾನ್ವಿಯಿಂದ 351, ಸಿಂಧನೂರಿನಿಂದ 401, ಲಿಂಗಸೂಗೂರಿನಿಂದ 380, ರಾಯಚೂರು ತಾಲೂಕಿನಿಂದ 280 ಶಿಕ್ಷಕರು ವರ್ಗಾವಣೆಯಾಗಿದ್ದರು. ವರ್ಗಾವಣೆಗೊಂಡ ಶಿಕ್ಷಕರನ್ನು ಖಾಯಂ ಶಿಕ್ಷಕರ ನೇಮಕಾತಿ ಮಾಡುವವರೆಗೂ ಬಿಡುಗಡೆ ಮಾಡದಂತೆ ಜಿಲ್ಲೆಯಾದ್ಯಂತ ಹೋರಾಟಗಳನ್ನು ಮಾಡಲಾಗಿತ್ತು.

Contact Your\'s Advertisement; 9902492681

ನಂತರ ದಿನಾಂಕ 25/08/2023 ರಂದು ಮುಖ್ಯಮಂತ್ರಿ, ಶಿಕ್ಷಣ ಸಚಿವರು, ಉಸ್ತುವಾರಿ ಸಚಿವರು, ಶಿಕ್ಷಣ ಇಲಾಖೆಯ ಆಯುಕ್ತರು ಎಲ್ಲರಿಗೂ ಪತ್ರ ಸಲ್ಲಿಸಿ ಬಿಡುಗಡೆ ಮಾಡದಂತೆ ಮತ್ತು ಖಾಯಂ ಶಿಕ್ಷಕರ ನೇಮಕಾತಿ ಮಾಡಲು ಒತ್ತಾಯಿಸಲಾಗಿತ್ತು. ಆಗ ಜಿಲ್ಲಾ ಉಸ್ತುವಾರಿ ಸಚಿವರು ಸಮಸ್ಯೆಯನ್ನು ಮನಗಂಡು ದಿನಾಂಕ 17/09/2023 ರಂದು ಬಿಡುಗಡೆಗೆ ತಾತ್ಕಾಲಿಕ ತಡೆ ನೀಡಲು ಉಪ ನಿರ್ದೇಶಕರಿಗೆ ಸೂಚಿಸಿದ್ದರು. ಜಿಲ್ಲಾಧಿಕಾರಿ ಕೂಡಾ ತಡೆಗೆ ಆದೇಶಿಸಿ ಸೂಚಿಸಿದ್ದರು.

ಪರಿಣಾಮ ಬಿಡುಗಡೆಗೆ ತಾತ್ಕಾಲಿಕ ತಡೆ ಬಿದ್ದಿತ್ತು. ಇದಕ್ಕಾಗಿ ಜಿಲ್ಲೆಯ ನೂರಾರು ವಿದ್ಯಾರ್ಥಿಗಳು ಕೂಡ ಪತ್ರ ಚಳುವಳಿ ನಡೆಸಿದ್ದರು. ಆದಾಗ್ಯೂ ಸರ್ಕಾರ ದೇಶದಲ್ಲೇ ಶೈಕ್ಷಣಿಕವಾಗಿ, ಆರ್ಥಿಕವಾಗಿ, ಸಾಮಾಜಿಕವಾಗಿ ಹಿಂದುಳಿದ ಜಿಲ್ಲೆಯ ಮಕ್ಕಳ ಹಿತ ಕಾಪಾಡುವಲ್ಲಿ ಸರ್ಕಾರ ಸಂಪೂರ್ಣ ವಿಫಲವಾಗಿದೆ. ಬದಲಾಗಿ ಅತಿಥಿ ಶಿಕ್ಷಕರ ನೇಮಕ ಮಾಡಿಕೊಂಡಿದ್ದೇವೆ ಎಂದು ಹೇಳಿ ಜಿಲ್ಲೆಯ ಗಂಭೀರವಾದ ಶೈಕ್ಷಣಿಕ ಸಮಸ್ಯೆಯನ್ನು ಸರ್ಕಾರ ಮರೆಮಾಚುತ್ತಿದೆ ಎಂದು ಆರೋಪಿಸಲಾಯಿತು.

ಈ ವರ್ಗಾವಣೆಯಿಂದ ಪ್ರತೀ ತಾಲೂಕಿನಲ್ಲಿ 85-100 ಶಾಲೆಗಳು ಶೂನ್ಯ ಶಿಕ್ಷಕ ಶಾಲೆಗಳಾಗಿವೆ. ಮತ್ತು ಜಿಲ್ಲೆಯಲ್ಲಿ ಅನೇಕ ಶಾಲೆಗಳು ಮುಚ್ಚುತ್ತಿವೆ. ಸಿರವಾರ ತಾಲೂಕಿನ ಜಕ್ಕಲ ದಿನ್ನಿ ಕ್ಯಾಂಪ್, ಕಡದಿನ್ನಿ ಕ್ಯಾಂಪ್, ಅತ್ತನೂರು ಅಂಜನೇಯ ಕ್ಯಾಂಪ್, ಬಾಗಲವಾಡದ ಲಕ್ಷ್ಮೀ ಕ್ಯಾಂಪ್, ಚಾಗಬಾವಿ ಕ್ಯಾಂಪ್ ಹಾಗೂ ಮಸ್ಕಿಯ ಬೊಂಬಾಯಿ ದೊಡ್ಡಿ, ಲಿಂಗಸ್ಗೂರಿನ ಮಲ್ಲಾಪೂರು ಕ್ಯಾಂಪ್ ಸೇರಿದಂತೆ ಜಿಲ್ಲೆಯ ಇನ್ನೂ ಅನೇಕ ಶಾಲೆಗಳು ಮುಚ್ಚಿವೆ. ಈ ಬಗ್ಗೆ ಸರ್ಕಾರ ಗಂಭೀರವಾಗಿ ಪರಿಗಣಿಸಿ ಶಿಕ್ಷಕರ ನೇಮಕಾತಿ ಮಾಡಲು ಮುಂದಾಗಬೇಕು. ಹಾಗೂ ಈ ಮಾರ್ಚ್ ತಿಂಗಳವರೆಗೂ ವರ್ಗಾವಣೆಗೊಂಡ ಶಿಕ್ಷಕರನ್ನು ಬಿಡುಗಡೆ ಮಾಡಬಾರದು. ಈಗ ಹೊರಡಿಸಿದ ಆದೇಶ ವಾಪಸ್ ಪಡೆಯಬೇಕು ಎಂದು ಎಸ್ಎಫ್ಐ ರಾಯಚೂರು ಜಿಲ್ಲಾ ಸಮಿತಿ ಹಾಗೂ ಪ್ರಗತಿಪರ ಸಂಘಟನೆಗಳು ಒತ್ತಾಯಿಸಿದರು.

ನಿಯೋಗದಲ್ಲಿ ಎಸ್ಎಫ್ಐ ಜಿಲ್ಲಾಧ್ಯಕ್ಷ ರಮೇಶ ವೀರಾಪೂರು, ಮುಖಂಡರಾದ ಭೀಮನಗೌಡ, ರಮೇಶ ಹಾಸನ್, ಸಾಮಾಜಿಕ ಹೋರಾಟಗಾರರಾದ ಶಿವರಾಜ್ ಕೊತ್ತದೊಡ್ಡಿ, ಹೊನ್ನಪ್ಪ ನಾಯಕ ವಕೀಲರು, ಮಹಮದ್ ಹನೀಫ್, ಅಲ್ಲಾಭಕ್ಷ, ರಾಜರತ್ನಂ, ಅರುಣ್ ಸುದೀರ್ ಕುಮಾರ್ ಉಪಸ್ತಿತರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here