ಗುಲಾಮಗಿರಿ ಮತ್ತು ಸಮಕಾಲೀನ ಸಾಂಸ್ಕøತಿಕ ರಾಜಕಾರಣ ಕುರಿತು ಸಂವಾದ ಅ.15ಕ್ಕೆ

0
26

ಕಲಬುರಗಿ: ಜ್ಯೋತಿಭಾ ಪುಲೆಯವರ ‘ಗುಲಾಮಗಿರಿ’ ಪುಸ್ತಕದ 150ನೇ ವರ್ಷದ ಭಾಗವಾಗಿ ಗುಲಾಮಗಿರಿ ಮತ್ತು ಸಮಕಾಲೀನ ಸಾಂಸ್ಕೃತಿಕ ರಾಜಕಾರಣ ಕುರಿತು ಅ.15ರಂದು ಸಂಜೆ 5.30ಕ್ಕೆ ಇಲ್ಲಿನ ಡಾ.ಎಸ್.ಎಂ.ಪoಡಿತ ರಂಗಮoದಿರದಲ್ಲಿ ರಂಗ ನಿರ್ದೇಶಕರಾದ ಕೆ.ಪಿ.ಲಕ್ಷ್ಮಣ್ ಮತ್ತು ಮಹಾದೇವ ಹಡಪದ ಅವರೊಂದಿಗೆ ಸಂವಾದ ಹಾಗೂ ನಾಟಕ ಪ್ರದರ್ಶನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಆಯೋಜಕರಲ್ಲಿ ಒಬ್ಬರಾದ ಸಂಸ್ಕಾರ ಪ್ರತಿμÁ್ಠನದ ಅಧ್ಯಕ್ಷ ವಿಠ್ಠಲ್ ಚಿಕಣಿ ಹಾಗೂ ಕಲಬುರಗಿ ಆರ್ಟ್ ಥೇಟರ್ ಅಧ್ಯಕ್ಷ ಸುನಿಲ್ ಮಾನ್ಪಡೆ ತಿಳಿಸಿದ್ದಾರೆ.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕಲಬುರಗಿ ಆರ್ಟ ಥೀಯೇಟರ್, ಸಂಸ್ಕಾರ ಪ್ರತಿμÁ್ಠನ, ದಲಿತ ಸಾಹಿತ್ಯ ಪರಿಷತ್ತು, ಕಕ ರಸ್ತೆ ಸಾರಿಗೆ ನಿಗಮದ ಪ.ಪಂ.ನೌಕರರ ಅಧಿಕಾರಿಗಳ ಕ್ಷೇಮಾಧಿಭಿವೃದ್ಧಿ ಸಂಘದ ಸಹಯೋಗದಲ್ಲಿ ಹಮ್ಮಿಕೊಂಡಿರುವ ಈ ಮಹತ್ವಪೂರ್ಣ ಕಾರ್ಯಕ್ರಮವನ್ನು ಮಹಾಪೌರರಾದ ವಿಶಾಲ ದರ್ಗಿ ಉದ್ಘಾಟಿಸಲಿದ್ದಾರೆ.

Contact Your\'s Advertisement; 9902492681

ಹಿರಿಯ ಸಾಹಿತಿ,ಉಪನ್ಯಾಸಕ ಡಾ.ಸೂರ್ಯಕಾಂತ ಸುಜ್ಯಾತ್ ಅವರ ಅಧ್ಯಕ್ಷತೆಯಲ್ಲಿ ನಡೆಯಲಿರುವ ಈ ಸಂವಾದದಲ್ಲಿ ಆರ್.ಜಿ.ಶೆಟಗಾರ, ಲಕ್ಷ್ಮಣ್ ಸೋನಕಾಂಬಳೆ, ಗುಪ್ತಲಿಂಗ ಬಿರಾದಾರ, ಡಾ.ಮಲ್ಲಿಕಾರ್ಜುನ ಸಾವರಕರ್, ದತ್ತಪ್ಪ ಸಾಗನೂರ, ವಿಜಯಕುಮಾರ ಸೋನಾರೆ, ಡಾ.ಶರಣಪ್ಪ ಸೈದಾಪುರ, ಗವಿಸಿದ್ದಪ್ಪ ಪಾಟೀಲ್, ಮಸ್ತಾನ ದಂಡೆ, ಸಿದ್ರಾಮ ದಂಡಗುಲಕರ್, ಸಂತೋಷ ಸಿಂಧೆ, ಶಿವಕಾಂತ ಮುನ್ನೋಳಿ, ಡಾ.ಅನೀಲ ಮಂಡೋಲಕರ್, ಲಕ್ಷ್ಮಣ್ ಕೋರೆ, ಬಿ.ಎಚ್.ನಿರಗುಡಿ, ಡಾ.ಸುನೀಲ ಜಾಬಾದಿ, ಅಶೋಕ ತೊಟ್ನಳ್ಳಿ, ಡಾ.ಅರವಿಂದ ಕಟ್ಟಿ, ಡಾ.ರಾಜಶೇಖರ ಮಾಂಗ್ ಮತ್ತು ನಾಗೇಶ ಹರಳಯ್ಯ ಅವರು ಭಾಗವಹಿಸಲಿದ್ದಾರೆಂದು ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಸುನೀಲ ಮಾನಪಡೆ ಪ್ರಾಸ್ತಾವಿಕ ಮಾತನಾಡಲಿದ್ದಾರೆ. ಕಪೀಲ ಚಕ್ರವರ್ತಿ ನಿರೂಪಿಸಲಿದ್ದಾರೆ. ಕಾರ್ಯಕ್ರಮದಲ್ಲಿ ಆಯೋಜಕರಾದ ಡಾ.ರಾಜಕುಮಾರ ಮಾಳಗೆ, ಅಲ್ಲಮಪ್ರಭು ನಿಂಬರ್ಗಾ, ಭೀಮಶಾ ದಂಡಗುoಡಕರ್ ಮತ್ತು ಸುರೇಶ ಖೂನಿ ಉಪಸ್ಥಿತರಿರುವರು. ಸಂವಾದ ನಂತರ ಕೆ.ಬಿ.ಸಿದ್ದಯ್ಯ ರಚಿಸಿದ ಮತ್ತು ಲಕ್ಷ್ಮಣ್ ಕೆ.ಪಿ ಅವರು ನಿರ್ದೇಶಿಸಿದ ನಾಟಕ ‘ದಕ್ಲ ಕಥಾದೇವಿ ಕಾವ್ಯ’ ಪ್ರರ್ದಶನಗೊಳ್ಳಲಿದೆ ಎಂದು ಹೇಳಿದರು. ಸಂಘಟಕ ಸಂಗಮೇಶ ಕಲಬುರಗಿ ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here