ಸುರಪುರ: 2022-23ನೇ ಸಾಲಿನ ಬಿಲ್ಲುಗಾರಿಕೆ ರಾಜ್ಯ ಮಟ್ಟದ ಕ್ರೀಡಾಕೂಟವು ಮೈಸೂರಿನ ವಿಶ್ವವಿದ್ಯಾಲಯದ ಕ್ರೀಡಾಂಗಣದಲ್ಲಿ ನಡೆಯುತ್ತಿದ್ದು, ಕಲಬುರ್ಗಿ ವಿಭಾಗ ಮಟ್ಟದಿಂz ಕ್ರಿಡಾಕೂಟದಲ್ಲಿ ಭಾಗವಹಿಸಿದ್ದ ತಾಲೂಕಿನ ದೇವಾಪುರದ ಬಿಲ್ಲುಗಾರಿಕೆ ಪಟು ರಘು 50 ಮೀಟರ್,30 ಮೀಟರ್ ಹಾಗೂ ಎಲಿಮಿನೇಷನ್ ರೌಂಡ್ ಮೂರು ವಿಭಾಗಗಳಲ್ಲಿ ಪ್ರಥಮ ಸ್ಥಾನ ಪಡೆದು ಚಿನ್ನದ ಪದಕ ತನ್ನದಾಗಿಸಿಕೊಂಡು ಸಾಧನೆ ಮಾಡಿದ್ದಾನೆ.
ಅದರಂತೆ ಮತ್ತೋರ್ವ ಕ್ರೀಡಾಪಟು ಕಿರಣಕುಮಾರ ತೃತಿಯ ಸ್ಥಾನ ಪಡೆದಿದ್ದಾನೆ.ಇಬ್ಬರ ಸಾಧನೆಗೆ ಕರ್ನಾಟಕ ಅರ್ಚರಿ ಕೋಚ್‍ಗಳಾದ ಅನಿಲ್ ಕುಮಾರ್ ಹಾಗೂ ರಘು ಅವರು ಅಭಿನಂದಿಸಿದ್ದಾರೆ.ಈ ಕ್ರೀಡಾಪೂಟದಲ್ಲಿ ಕರ್ನಾಟಕದ 5 ವಿಭಾಗದಿಂದ 40 ಕ್ರೀಡಾಪಟುಗಳು ಭಾಗವಹಿಸಿದ್ದರು.ಕಲಬುರ್ಗಿ ವಿಭಾಗದ ದೇವಾಪುರದ ರಘು ಮತ್ತು ಬೆಂಗಳೂರಿನ ವಿನಯ್ ನಡುವೆ ನಡೆದ ಎಲಿಮಿನೇಷನ್ ರೌಂಡ್ ಮ್ಯಾಚ್‍ನಲ್ಲಿ ರಘು ವಿಜಯಿಶಾಲಿಯಾಗಿ ಚಿನ್ನದ ಪದಕ ಪಡೆದರು.
ಗ್ರಾಮೀಣ ಪ್ರತಿಭೆಗಳು ರಾಜ್ಯ ರಾಷ್ಟ್ರ ಮಟ್ಟದಲ್ಲಿ ಸಾಧನೆ ಮಾಡುತ್ತಿರುವುದು ಕಲ್ಯಾಣ ಕರ್ನಾಟಕ ಭಾಗಕ್ಕೆ ಹೆಮ್ಮೆಯ ಸಂಗತಿಯಾಗಿದ್ದು, ಇಬ್ಬರು ಕ್ರೀಡಾಪಟುಗಳ ಸಾಧನೆಗೆ ತರಬೇತಿದಾರ ಮೌನೇಶ ಕುಮಾರ ಸಂತಸ ವ್ಯಕ್ತಪಡಿಸಿ,ಸರಕಾರ ಈ ಕ್ರೀಡಾಪಟುಗಳಿಗೆ ಇನ್ನೂ ಹೆಚ್ಚಿನ ಸಹಕಾರ ನೀಡಿ ಇನ್ನಷ್ಟು ಉನ್ನತ ಸಾಧನೆ ಮಾಡಲು ನೆರವಾಗಬೇಕು ಎಂದು ಮನವಿ ಮಾಡಿದ್ದಾರೆ.ಇವರ ಸಾಧನೆಗೆ ಗ್ರಾಮದ ಜನರು ಹರ್ಷ ವ್ಯಕ್ತಪಡಿಸಿದ್ದಾರೆ.