ಕಲಬುರಗಿ: ಕರ್ನಾಟಕ ರಾಜ್ಯೋತ್ಸವ ನಿಮಿತ್ತ ಹಳದಿ ಮತ್ತು ಕೆಂಪು ಕನ್ನಡ ಧ್ವಜದ ಮೂಲಕ ಕನ್ನಡ ರಾಜ್ಯೋತ್ಸವ ಧ್ವಜವರ್ಣ ಮತ್ತು ಕರುನಾಡ ವಿಜಯ ಸೇನೆಯ ಎಲ್ಲಾ ಪದಾಧಿಕಾರಿಗಳು ಒಗ್ಗೂಡಿ ಜಿಲ್ಲಾ ಕಾರ್ಯಾಲಯದಲ್ಲಿ ತಾಯಿ ಭುವನೇಶ್ವರಿಗೆ ಪೂಜೆ ನೆರವೇರಿಸಿದರು.
ನಗರದಲ್ಲಿ ಐವಾನ್ -ಇ -ಶಾಹಿ ರೋಡ್ ಪಿ ಡಿ ಎ ಕಾಲೇಜ್ ಮುಂಭಾಗದಲ್ಲಿ ಸುವರ್ಣ ಕರ್ನಾಟಕ ರಾಜ್ಯೋತ್ಸವದ ಸಂತೋಷ ಮತ್ತು ಸಡಗರದಿಂದ ನಾಡಹಬ್ಬ ಆಚರಣೆ ಮಾಡಲಾಯಿತು.
ಕನ್ನಡ ನಾಡನ್ನು ಶ್ರೀಗಂಧದ ನಾಡು, ಕರುನಾಡು, ಕನ್ನಡಾಂಭೆಯ ನಾಡು, ತಾಯಿ ಭುವನೇಶ್ವರಿಯ ನಾಡು ಎಂಬೆಲ್ಲ ಹೆಸರುಗಳಿಂದ ಕರೆಯಲಾಗುತ್ತದೆ. ಕನ್ನಡ ನಾಡು ಎಂಬ ಹೆಸರಿಗೆ ಒಂದು ಧೀಮಂತ ಶಕ್ತಿ ಇದೆ. ಕರ್ನಾಟಕಕ್ಕೆ ಆಗಮಿಸುವ ಅನ್ಯಭಾಷಿಗರಿಗೆ ಕನ್ನಡವನ್ನು ಕಲಿಸಿ, ನಾವು ಹೆಚ್ಚು ಬಳಕೆ ಮಾಡುವ ಮೂಲಕ ಕನ್ನಡ ಭಾಷೆಯ ಶ್ರೀಮಂತಿಕೆಯನ್ನು ಎತ್ತಿಹಿಡಿಯಬೇಕು ಎಂದು ಕರುನಾಡ ವಿಜಯಸೇನೆ ಜಿಲ್ಲಾ ಅಧ್ಯಕ್ಷರಾದ ಪೃಥ್ವಿರಾಜ ಎಸ್ ರಾಂಪುರ ಅವರು ವಿಜಯ ಸೇನೆ ಪದಾಧಿಕಾರಿಗಳಿಗೆ ಕರೆ ನೀಡಿದರು.
ಕೇವಲ ನವೆಂಬರ್ ಕನ್ನಡಿಗರಾಗದೇ, ‘ಕನ್ನಡ ನಾಡಿನ ಜವಾಬ್ದಾರಿಯುತ ಪ್ರಜೆಯಾಗಿ ಕನ್ನಡದಲ್ಲೇ ಮಾತನಾಡುತ್ತೇನೆ, ಬರೆಯುತ್ತೇನೆ, ನಿತ್ಯ ವ್ಯವಹಾರ ದಲ್ಲಿ ಕನ್ನಡವನ್ನೇ ಬಳಸುತ್ತೇನೆ, ಕನ್ನಡ ನುಡಿ, ಸಂಸ್ಕೃತಿ, ಪರಂಪರೆ ಉಳಿಸಲು ಸದಾ ಕಟಿಬದ್ಧರಾಗಿರುತ್ತೇವೆ’ ಎಂದು ಇದೇ ವೇಳೆ ದೃಢ ನಿರ್ಧಾರ ಮಾಡೋಣ ಮತ್ತು ಕನ್ನಡ ಭಾಷೆ ನೆಲ ಜಲ ನಮ್ಮ ಜನ್ಮ ಭೂಮಿ ನಮ್ಮ ರಕ್ಷಣೆ ಕನ್ನಡಕ್ಕೆ ದಕ್ಕೆ ಬಂದಾಗ ಕನ್ನಡಿಗರಿಗೆ ದಕ್ಕೆ ಆದಾಗ ನಾವು ಹೋರಾಡಲು ಸಿದ್ದರಾಗಬೇಕು ಕನ್ನಡವನ್ನು ಕಟ್ಟೋಣ ಕನ್ನಡವನ್ನು ರಕ್ಷಿಸೋಣ ನಮ್ಮ ನಾಡು ನಮ್ಮ ಜಲ ನಮ್ಮ ಭಾಷೆ ನಮ್ಮ ಕನ್ನಡ ನಮ್ಮ ಹೆಮ್ಮೆ ಎಂಬ ಘೋಷ ವಾಕ್ಯದೊಂದಿಗೆ ರಾಜ್ಯೋತ್ಸವ ಆಚರಿಸಲಾಯಿತು.
ಈ ಸಂದರ್ಭದಲ್ಲಿ ವಿಜಯಕುಮಾರ್ , ಅಂಬರೀಶ್ , ಶಂಕರ್ ದೊಡ್ಮನಿ, ರಾಜು ಎಚ್ ಗುಂಡ್ರಾಳ , ವಿಶ್ವನಾಥ್ , ವಿಶ್ವರಾಧ್ಯ , ರಾಜೇಂದ್ರ ಟೈಗರ್ , ನಾಗರಾಜ ಮ್ಯಾತ್ರಿ , ಸಂಗಮೇಶ್ , ಶಿವಕುಮಾರ್ , ಪ್ರಶಾಂತ್, ಸೈಬಣ್ಣ , ಶೇಕರ ಭಂಡಾರಿ, ವಿಜಯ ಸೇನೆ ಎಲ್ಲ ಪದಾಧಿಕಾರಿಗಳು ಉಪಸ್ಥಿತರಿದ್ದರು.