ಕರ್ನಾಟಕದಲ್ಲಿನ ಲಿಂಗಾಯತ ನಾಯಕತ್ವ ಮುಗಿಸಿ ಹಿಂದುತ್ವ ಪ್ರತಿಷ್ಠಾಪಿಸಲು ಬಿಜೆಪಿಯ ವರಿಷ್ಠರು ಹೊರಟಂತಿದೆ ಬಿ.ವೈ. ವಿಜಯೇಂದ್ರ ಅವರಿಗೆ ರಾಜ್ಯ ಅಧ್ಯಕ್ಷ ಸ್ಥಾನವನ್ನು ನೀಡುವ ಮೂಲಕ ಲಿಂಗಾಯತ ಸಮುದಾಯಕ್ಕೆ ಒಂದು ಸವಾಲು ಹಾಕಿದಂತಾಗಿದೆ.
ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಲಿಂಗಾಯಿತರನ್ನು ಕಡೆಗಣಿಸಿದ ಬಿಜೆಪಿಯ ವರಿಷ್ಠರು ಇದ್ದಕ್ಕಿದ್ದಂತೆ ಬದಲಾವಣೆಗೊಂಡು ಈಗ ಲಿಂಗಾಯತ ಸಮುದಾಯಕ್ಕೆ ಮಣೆ ಹಾಕಿದ್ದು ಯಾಕೆ ಎಂಬ ಪ್ರಶ್ನೆಯಾಗಿ ಕಾಡುತ್ತಿದೆ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಲಿಂಗಾಯತರ ಬೆಂಬಲದಿಂದ ಹೆಚ್ಚು ಸ್ಥಾನಗಳನ್ನು ಪಡೆದುಕೊಳ್ಳಬಹುದೆಂಬ ನಿರೀಕ್ಷೆ ಇರಿಸಿಕೊಳ್ಳಲಾಗಿದೆ.
ಒಂದು ವೇಳೆ ಈ ನಿರೀಕ್ಷೆಯಂತೆ ನಡೆದರೆ ಲಿಂಗಾಯತರ ನಾಯಕತ್ವ ಉಳಿಯುತ್ತದೆ ಇಲ್ಲದಿದ್ದರೆ ಈ ಚುನಾವಣೆಯ ಮೂಲಕ ಲಿಂಗಾಯತ ನಾಯಕತ್ವ ಮುಗಿಸಿ ಹಿಂದುತ್ವ ಪ್ರತಿಷ್ಠಾಪಿಸಲು ಅನುಕೂಲಕರ ವಾತಾವರಣ ನಿರ್ಮಾಣವಾಗುತ್ತದೆ ಎಂಬ ಭಾವನೆ ಕರ್ನಾಟಕದ ಉಸ್ತುವಾರಿ ಹೊತ್ತ ವರಿಷ್ಠರ ಮನಸ್ಸಿನಲ್ಲಿ ಇರಬಹುದು.
ಅದಕಾಗಿ ವಿಜೆಯೇಂದ್ರ ಅವರಿಗೆ ಇಂಥ ಸಂದಿಗ್ಧ ಪರಿಸ್ಥಿತಿಯಲ್ಲಿ ರಾಜ್ಯಾಧ್ಯಕ್ಷ ಸ್ಥಾನ ನೀಡಿದ್ದು ನೋಡಿದರೆ ಇದೂಂದು ತಾತ್ಪೂರ್ತಿಕ ವ್ಯವಸ್ಥೆ ಮತ್ತು ಕಾದು ನೋಡು ವ ತಂತರವಾಗಿದೆ ಎಂದು ಅನಿಸುತ್ತಿದೆ ಒಂದು ವೇಳೆ ಈ ಚುನಾವಣೆಯಲ್ಲಿ ಹೆಚ್ಚಿನ ಲೋಕಸಭಾ ಸ್ಥಾನ ಗೆದ್ದರೆ ಯಡಿಯೂರಪ್ಪನವರ ಕುಟುಂಬ ರಾಜಕಾರಣಕ್ಕೆ ಕಳೆ ಬರುತ್ತದೆ ಇಲ್ಲದಿದದರೆ ಅವರ ರಾಜಕೀಯ ನಿಂತು ಹೋಗುತ್ತದೆ ಮಾಡು ಇಲ್ಲವೇ ಮಡಿ ಎಂಬ ವಾತಾವರಣ ನಿರ್ಮಾಣವಾಗಿದೆ.
ಈ ಸಮಸ್ಯೆ ಒಂದು ಸವಾಲಾಗಿ ಸ್ವೀಕರಿಸುವುದರ ಮೂಲಕ ಬಿವೈ ವಿಜಯೇಂದ್ರ ಅವರು ಮತ್ತು ಯಡಿಯೂರಪ್ಪನವರು ತಮ್ಮ ಕಾಲಿಗೆ ಚಕ್ರಗಳನ್ನು ಕಟ್ಟಿಕೊಂಡು ಕರ್ನಾಟಕದ ತುಂಬಾ ಸಂಚರಿಸಬೇಕಾಗುತ್ತದೆ ಇದು ಲಿಂಗಾಯಿತರು ಮತ್ತು ಬಿಜೆಪಿಗೆ ಸವಾಲಾಗಿದೆ ಈ ಸವಾಲಿನಲ್ಲಿ ವಿಜಯೇಂದ್ರ ಅವರು ಸೋಲುತ್ತಾರೆಯೋ ಅಥವಾ ಗೆಲ್ಲುತ್ತಾರೆ ಎಂಬುದು ಕಾದು ನೋಡಬೇಕಾಗಿದೆ. ಈಗಾಗಲೇ ಬಿಜೆಪಿಯ ಲಿಂಗಾಯತ ನಾಯಕರು ಮುಕ್ತವಾಗಿ ಮಾತನಾಡದೆ ಹೃದಯ ಬಿಚ್ಚಿ ವಿಷಯಗಳನ್ನು ಹೇಳದೆ ಉಂಟಾದ ಮೇಲಿನ ಮಾತುಗಳನ್ನು ಮಾತನಾಡುತ್ತಿದ್ದಾರೆ.
ಇದು ಒಂದು ರೀತಿ ಕೃತಕವಾದ ಮಾತುಗಳೆಂದು ಕೇಳಿದವರಿಗೆ ಅನ್ನಿಸುತ್ತಿದೆ ಸೋಮಣ್ಣ ಮೌನಕ್ಕೆ ಜಾರಿದ್ದಾರೆ ಬಸವರಾಜ್ ಬೊಮ್ಮಾಯಿ ಅವರು ಹೃದಯ ಶಸ್ತ್ರ ಚಿಕಿತ್ಸೆಯಿಂದ ವಿಶ್ರಾಂತಿಯಲ್ಲಿದ್ದಾರೆ ಬಿಸಿ ಪಾಟೀಲ್ ಮತ್ತು ಸಿ ಸಿ ಪಾಟೀಲ್ರು ಏನು ಮಾಡುತ್ತಿದ್ದಾರೆ ಎಂದು ತಿಳಿಯದಾಗಿದೆ ಮುರುಗೇಶ ನಿರಾಣಿಯವರು ಮೂಲೆಗುಂಪಾಗಿದ್ದಾರೆ ಬಸನಗೌಡ ಪಾಟೀಲ್ ಯತ್ನಾಳ್ ಅವರು ಗಂಭೀರವಾಗಿದಾರೆ ಜಗದೀಶ್ ಶೆಟ್ಟರ್ ಮತ್ತು ಲಕ್ಷ್ಮಣ ಸೌದಿ ಅವರು ಹೊರಬಂದಿದ್ದಾರೆ ಹೀಗೆ ಅನೇಕ ಉದಾಹರಣೆಗಳ ಮಧ್ಯದಲ್ಲಿ ಕರ್ನಾಟಕದಲ್ಲಿನ ಲಿಂಗಾಯತ ನಾಯಕತ್ವ ಮೌನವಾಗಿರುವಾಗ ಬಿ.ವೈ. ವಿಜಯೇಂದ್ರ ಅವರಿಗೆ ರಾಜ್ಯಾಧ್ಯಕ್ಷ ಪಟ್ಟ ಕಟ್ಟುವುದರ ಮೂಲಕ ಲಿಂಗಾಯತ ಸಮುದಾಯಕ್ಕೆ ಓಲೈಸಿದಂತೆ ಮತ್ತು ಒಂದು ಅವಕಾಶ ನೀಡಿದಂತೆ ಮೇಲ್ನೋಟಕ್ಕೆ ಕಾಣಿಸುತ್ತಿದೆ.
ಇದರ ಹಿಂದೆ ಕರ್ನಾಟಕದ ಉಸ್ತುವಾರಿ ನೋಡಿಕೊಳ್ಳುವ ಬಿಜೆಪಿ ವರಿಷ್ಠರ ಷಡ್ಯಂತ್ರ ಬೇರೆ ಇದೆ ಈ ಚುನಾವಣೆ ಯಡಿಯೂರಪ್ಪನವರಿಗೆ ಮತ್ತು ವಿಜಯೇಂದ್ರ ಅವರಿಗೆ ಅಗ್ನಿಪರೀಕ್ಷೆಯಾಗಿದೆ ಈ ಪರೀಕ್ಷೆಯಲ್ಲಿ ಇವರು ಬೆಂದು ಬಾಡಿ ಹೋಗುತ್ತಾರೆಯೋ ಅಥವಾ ಸುಂದರ ಹೂವಾಗಿ ಅರಳುತ್ತಾರೆಯೋ ಕಾದು ನೋಡಬೇಕು ಮತ್ತು ಇಂಥ ತಂತ್ರ ಕುತಂತ್ರ ಪ್ರತಿ ತಂತ್ರಗಳಿಗೆ ಕಾಲವೇ ಉತ್ತರಿಸಬೇಕು.
ರಾಮಕೃಷ್ಣ ಹೆಗಡೆಯವರು ಹೇಳಿದ ಹಾಗೆ ಲಿಂಗಾಯತರು ಜಾಣರು ದಕ್ಷ ಮತ್ತು ಆಡಳಿತ ಸಾಮರ್ಥ್ಯ ಗುಣವುಳ್ಳವರು ಅವರು ಒಂದಾದರೆ ಕರ್ನಾಟಕ ಏಕೆ ಭಾರತವನ್ನು ಆಳ ಬಲ್ಲರು ಆದರೆ ಅವರಲ್ಲಿ ಹೊಂದಾಣಿಕೆ ಮತ್ತು ಏಕತೆ ಇಲ್ಲ ಎಂಬ ಮಾತು ಇಲ್ಲಿ ನೆನಪಿಸಿಕೊಳ್ಳಬೇಕು ಒಂದು ವೇಳೆ ಬಿಜೆಪಿಯ ಲಿಂಗಾಯತ ನಾಯಕರು ಒಂದಾದರೆ ಲೋಕಸಭಾ ಚುನಾವಣೆಯಲ್ಲಿ 28ರಲ್ಲಿ 2೦ ಸ್ಥಾನಗಳನ್ನು ಗೆಲ್ಲಬಹುದು ಆದರೆ ಇವರನ್ನು ಒಂದು ಮಾಡುವುದು ತುಂಬಾ ಕಷ್ಟದ ಕೆಲಸವೆಂಬುದು ಬಿಜೆಪಿಯ ದೆಹಲಿ ವರಿಷ್ಠರಿಗೆ ಚೆನ್ನಾಗಿ ತಿಳಿದಿರುವುದರಿಂದಲೇ ವಿಜೇಂದ್ರ ಮತ್ತು ಯಡಿಯೂರಪ್ಪನವರನ್ನು ಏಕ ಕಾಲಕ್ಕೆ ಬಲಿಪಶು ಮಾಡುವ ವಿಚಾರವಿರಿಸಿಕೊಂಡಂತೆ ಕಾಣುತ್ತಿದೆ.
ಒಂದು ವೇಳೆ ಗೆದ್ದರೂ ಸರಿ ಸೋತರೂ ಸರಿ ದೆಹಲಿ ವರಿಷ್ಠರಿಗೆ ಯಾವ ಹಾನಿಯೂ ಆಗದು ಎಂಬುದು ಅವರಿಗೆ ತಿಳಿದಿದೆ ಗೆದ್ದರೆ ರಾಜ್ಯ ಹೋದರೆ ಲಿಂಗಾಯತ ನಾಯಕತ್ವ ಎಂಬ ಸೂತ್ರಕ್ಕೆ ಬದದರಾಗಿ ಈ ನಿರ್ಣಯ ತೆಗೆದು ಕೊಂಡಂತೆ ಕಾಣುತ್ತಿದೆ ಇದನ್ನು ಎಲ್ಲ ಲಿಂಗಾಯಿತರು ಸೂಕ್ಷ್ಮವಾಗಿ ಅವಲೋಕನೆ ಮಾಡುತ್ತಿದ್ದಾರೆ.