ಲಕ್ಷ್ಮೀಪುರ ಗ್ರಾಮದಲ್ಲಿ ಅದ್ಧೂರಿ ಶ್ರೀ ಮಹರ್ಷಿ ವಾಲ್ಮೀಕಿ ಜಯಂತಿ

0
29

ಸುರಪುರ: ತಾಲೂಕಿನ ಲಕ್ಷ್ಮೀಪುರ ಗ್ರಾಮದಲ್ಲಿ ಅದ್ಧೂರಿಯಾಗಿ ಶ್ರೀ ಮಹರ್ಷಿ ವಾಲ್ಮೀಕಿ ಜಯಂತಿಯನ್ನು ಆಚರಿಸಲಾಯಿತು.ಗ್ರಾಮದಲ್ಲಿ ಬಾಜಾ ಭಜಂತ್ರಿ,ಮಹಿಳೆಯರ ಕುಂಭ ಕಳಸಗಳೊಂದಿಗೆ ಡಿ.ಜೆ ಮೂಲಕ ಗ್ರಾಮಲದಲಿ ಮಹರ್ಷಿ ವಾಲ್ಮೀಕಿಯವರ ಭಾವಚಿತ್ರದ ಮೆರವಣಿಗೆ ನಡೆಸಲಾಯಿತು.

ನಂತರ ನಡೆದ ವಾಲ್ಮೀಕಿ ಜಯಂತಿ ಕಾರ್ಯಕ್ರಮದ ವೇದಿಕೆಯಲ್ಲಿ ಸಾನಿಧ್ಯ ವಹಿಸಿದ್ದ ಗೋಲಪಲ್ಲಿಯ ವಾಲ್ಮೀಕಿ ಪೀಠದ ವರದಾನೇಶ್ವರ ಸ್ವಾಮೀಜಿ ಮಾತನಾಡಿ,ನೀವೆಲ್ಲ ಸಂಘಟಿತರಾಗಬೇಕು ಶಿಕ್ಷಣವಂತರಾಗಬೇಕು ಉನ್ನತ ಹುದ್ದೆಯಲ್ಲಿ ಸರ್ಕಾರಿ ನೌಕರಿ ಮಾಡಬೇಕು ಅಂದಾಗ ಮಾತ್ರ ಸಮಾಜ ಶಕ್ತಿಯಾಗುತ್ತದೆ ಎಂದು ನುಡಿದರು.

Contact Your\'s Advertisement; 9902492681

ಯೂತ್ ಕಾಂಗ್ರೆಸ್ ಜಿಲ್ಲಾ ಅಧ್ಯಕ್ಷರಾದ ರಾಜಾ ಕುಮಾರ್ ನಾಯಕ್ ಮಾತನಾಡಿ, ಲಕ್ಷ್ಮಿಪುರ ಗ್ರಾಮದ ವಾಲ್ಮೀಕಿ ಸಮಾಜದ ಬಂಧುಗಳ ಒಂದಾಗಬೇಕು ಯುವಕರು ಮುಂದೆ ಬರಬೇಕು ನಿಮಗೆ ಏನು ಸಹಾಯ ಬೇಕಾದರೂ ಪ್ರಾಮಾಣಿಕ ಸಹಕರಿಸುತ್ತೇನೆ ಎಂದರು.

zಕಾಂಗ್ರೆಸ್ ಎಸ್.ಟಿ ಘಟಕದ ಜಿಲ್ಲಾಧ್ಯಕ್ಷ ವೆಂಕಟೇಶ ಬೇಟೆಗಾರ ಮಾತನಾಡಿ, ವಾಲ್ಮೀಕಿ ಗುರುಗಳು ಜಗತ್ತಿಗೆ ರಾಮಾಯಣದಂತ ಮಹಾನ್ ಕಾವ್ಯವನ್ನು ರಚಿಸಿದವರು ಅದನ್ನು ಸಂಪೂರ್ಣವಾಗಿ ಓದಿ ಮನನ ಮಾಡಿಕೊಂಡಾಗ ಗ್ರಂಥಕ್ಕೆ ಅರ್ಥ ಬರುವುದು ಮತ್ತು ಬೇಡ ಜನಾಂಗದ ನಮ್ಮ ಹಿರಿಯರು ಬಹಳ ಶೂರ ರಾಗಿದ್ದರು ಯುದ್ಧದಲ್ಲಿ ನಿಪುಣರಾಗಿದ್ದರು ಕುಸ್ತಿ ಅಖಾಡದಲ್ಲಿ ಬಲಡ್ಡರಾಗಿದ್ದರು 77 ಬಾಳೆ ಪಟ್ಟುಗಳನ್ನು ಆಳಿದವರು ಕೆರೆ ಕಟ್ಟೆಗಳನ್ನು ಕಟ್ಟಿದವರು ಖಡ್ಗ ಹಿಡಿದು ಹೋರಾಡಿದವರು ಈಗ ಕಾಲ ಬದಲಾದಂತೆ ಖಡ್ಗವನ್ನು ಬಿಟ್ಟು ಪೇನ್ನು ಹಿಡಿಯಬೇಕು ಶಿಕ್ಷಣವಂತರಾಗಬೇಕು ಅಂದಾಗ ಮಾತ್ರ ಸಮಾಜ ಉದ್ಧಾರ ಆಗುವುದು ಎಂದು ನುಡಿದರು.

ಹಿರಿಯ ಹೋರಾಟಗಾರ ವೆಂಕೋಬ್ ದೊರೆ ಮಾತನಾಡಿ, ನಮ್ಮ ಸಮಾಜದ ಮುಂದೆ ಬಹುದೊಡ್ಡ ಹೋರಾಟಗಳಿವೆ ಆ ಹೋರಾಟದಲ್ಲಿ ಯುವಕರು ಹೆಚ್ಚು ಹೆಚ್ಚು ಭಾಗವಹಿಸಬೇಕೆಂದರು. ವೇದಿಕೆ ಮೇಲೆ ಮುಖ್ಯ ಅತಿಥಿಗಳಾಗಿ ರಾಜಾ ಸುಶಾಂತ ನಾಯಕ್ ಯುವ ಮುಖಂಡರಾದ ಶರಣು ನಾಯಕ್ ಬೈರಮರಡಿ ಭೀಮನ ಗೌಡ ಲಕ್ಷ್ಮಿ ಗೌಡ್ರು ಹೇಮನೂರ್ ಎಸ್ ಸಿ ಎಸ್ ಟಿ ದೌರ್ಜನ್ಯ ಕಮಿಟಿ ಸದಸ್ಯರಾದ ರಮೇಶ್ ದೊರೆ ಆಲ್ದಾಳ ತಾಲೂಕ ಯುವ ಮುಖಂಡರಾದ ಶ್ರೀಧರ್ ನಾಯಕ್ ಮಾಜಿ ಯೋಧ ಭೀಮಣ್ಣ ಮಿಲ್ಟ್ರಿ ತಿಪ್ಪಣ್ಣ ಶುಕ್ಲ ಮೌನೇಶ್ ಶಾಖಪೊರ ಸಿದ್ದರಾಜ್ ಗ್ರಾಮ ಘಟಕದ ಅಧ್ಯಕ್ಷರು ಪದಾಧಿಕಾರಿಗಳು ವೇದಿಕೆ ಮೇಲಿದ್ದರು. ಊರಿನ ಮುಖಂಡರಾದ ಯಲ್ಲಪ್ಪ ನಾಯಕ್ ರಂಗನಾಥ್ ನಾಯಕ್ ಶ್ರೀನಿವಾಸ್ ಮಲ್ಲಯ್ಯ ಮತ್ತು ನಿಂಗಣ್ಣ ಹನುಮಂತ ಮರಿಯಪ್ಪ ಶರಬಣ್ಣ ಹನುಮಂತರಾಯ ಊರಿನ ಮಹಿಳೆಯರು ಹಿರಿಯರು ಮುಖಂಡರು ಯುವಕರು ಭಾಗಿಯಾಗಿ ಕಾರ್ಯಕ್ರಮ ಯಶಸ್ವಿಗೊಳಿಸಿದರು

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here