AITUC 104 ನೇ ಸಂಸ್ಥಾಪನಾ ದಿನಾಚರಣೆ

0
36

ಕಲಬುರಗಿ; ನಗರದ ಕಲಾ ಮಂಡಳ ಟ್ರಸ್ಟನ ಸಭಾಂಗಣದಲ್ಲಿ ಆಲ್ ಇಂಡಿಯಾ ಟ್ರೇಡ ಯುನಿಯನ್ ಕಾಂಗ್ರೆಸ ಜಿಲ್ಲಾ ಸಮಿತಿ ವತಿಯಿಂದ ಆಯೋಜಿಸಿರುವ 104 ನೇ ಸಂಸ್ಥಾಪನಾ ದಿನಾಚರಣೆ ಅಂಗವಾಗಿ ಇಂದು ಬೆಳಿಗ್ಗೆ ಕಾ|| ಪಿ ಸಂಪತರಾವ್ ರವರು ಧ್ವಜಾರೋಹಣ ನೇರವೆರಿಸಿ ಮಾತನಾಡಿ AITUC 1920 ಅಕ್ಟೋಬರ 31 ರಂದು ಮುಂಬೈ ನಗರದಲ್ಲಿ ಗಿರಣಿ ಕಾರ್ಮಿಕರು ಹಾಗೂ ಇತರೆ ಕೈಗಾರಿಕಾ ಕಾರ್ಮಿಕರ ಸಹಕಾರದಿಂದ ಂIಖಿUಅ ಸ್ಥಾಪನೆ ಮಾಡಲಾಯಿತು.

ಕಳೆದ ನೂರಾಮೂರು ವರ್ಷಗಳಿಂದ ನಿರಂತರವಾಗಿ ಚಳುವಳಿ ನಡೆಸಿರುವ ಪ್ರತಿಫಲವಾಗಿ ಹಲವಾರು ಕಾರ್ಮಿಕ ಕಾನುನುಗಳನ್ನು ದೇಶದ ಕಾರ್ಮಿಕರು ಪಡೆದುಕೊಂಡಿದ್ದಾರೆ. ಆದರೆ 1991 ರಿಂದ ಬಂಡವಾಳಶಾಹಿ ಸರಕಾರಗಳು ಖಾಸಗಿಕರಣ, ಉದಾರಿಕರಣ, ಜಾಗತೀಕರಣ ನೀತಿಗಳನ್ನು ಜಾರಿ ಮಾಡಿರುವ ಕಾರಣದಿಂದಾಗಿ ಸದರಿ ಕಾರ್ಮಿಕ ಕಾನೂನುಗಳನ್ನು ಜಾರಿ ಮಾಡದೇ ಕಾರ್ಮಿಕರ ಮೇಲೆ ನಿರಂತರ ಶೋಷಣೆ ನಡೆದಿದೆ. ಇಂದಿನ ಬಿಜೆಪಿ ಕೇಂದ್ರ ಸರಕಾರ ನುಡಿದಂತೆ ನಡೆಯದೇ ಕಾರ್ಮಿಕರನ್ನು ಬೀದಿಗೆ ತಳ್ಳಿದೆ. ಹಾಗೂ ಬೆಲೆ ಏರಿಕೆ ಗಗನಕ್ಕೆ ಎರಿಸಿದೆ. ಹೀಗಾಗಿ ದೇಶದ ದುಡಿಯುವ ವರ್ಗದ ಪರಿಸ್ಥಿತಿ ಚಿಂತಾಜನಕವಾಗಿದೆ. ಆದ್ದರಿಂದ ಂIಖಿUಅ ಸಂಘಟನೆಯನ್ನು ಜಿಲ್ಲೆಯಾದ್ಯಂತ ವಿಸ್ತರಣೆ ಮಾಡಿ ಕ್ರಿಯಾಶೀಲಗೊಳಿಸಲು ಕರೆ ನೀಡಿದರು.

Contact Your\'s Advertisement; 9902492681

ಸಂಸ್ಥಾಪನಾ ದಿನಾಚರಣೆಯನ್ನು ಉದ್ಘಾಟನೆ ಮಾಡಿದ ಹಿರಿಯ ನ್ಯಾಯವಾದಿ ಕಾ|| ಪಿ. ವಿಲಾಸ ಕುಮಾರ ರವರು ರಾಜ್ಯದಲ್ಲಿAITUC ಬೆಳೆದು ಬಂದ ಬಗ್ಗೆ ಹಾಗೂ ಕೇಂದ್ರ ಸರಕಾರದ ಜನವಿರೋಧಿ, ಕಾರ್ಮಿಕ ವಿರೋಧಿ ನೀತಿಗಳ ಕುರಿತು ಸುಧೀರ್ಘವಾಗಿ ಮಾತನಾಡಿದರು. ಮುಂದುವರೆದು ಕಾರ್ಮಿಕರು ಂIಖಿUಅ ನಾಯಕತ್ವದಲ್ಲಿ ಹೋರಾಟ ಮಾಡಿ ಗಳಿಸಿರುವ ಕಾರ್ಮಿಕ ಕಾನೂನುಗಳನ್ನು ನಾಲ್ಕು ಕೋಡ್ ಗಳಲ್ಲಿ ತಿದ್ದುಪಡಿ ಮಾಡುವ ಮೂಲಕ ಕಾರ್ಮಿಕರ ಮೇಲೆ ಕೆಲಸದ ಹೊರೆ ಹಚ್ಚಿಸಿರುವದಲ್ಲದೇ ಕಾರ್ಮಿಕರನ್ನು ಗುಲಾಮಗಿರಿಗೆ ತಳ್ಳಿರುವದನ್ನು ಖಂಡಿಸಿದರು.

ಭಾರತ ಕಮ್ಯೂನಿಸ್ಟ ಪಕ್ಷದ ಜಿಲ್ಲಾ ಕಾರ್ಯದರ್ಶಿ ಕಾಂ|| ಮಹೇಶಕುಮಾರ ರಾಥೋಡ ರವರು ಮುಖ್ಯ ಅತಿಥಿಗಳಾಗಿ ಮಾತನಾಡಿ ರಾಜ್ಯ ಮತ್ತು ಕೇಂದ್ರ ಸರಕಾರಗಳು ಉಳ್ಳವರ ಪರವಾಗಿ ಕಾರ್ಮಿಕರನ್ನು ತರುತ್ತಿರುವುದರಿಂದಾಗಿ ಮಧ್ಯಮ ವರ್ಗದ ಜನರು ಕಾರ್ಮಿಕರು, ರೈತರು, ಮಹಿಳೆಯರು, ಸಂಕಷ್ಟಕ್ಕಿಡಾಗಿದ್ದಾರೆ. ಆದ್ದರಿಂದ ಕಾರ್ಮಿಕ ಸಂಘಟನೆಗಳನ್ನು ಸೈದ್ದಾಂತಿಕವಾಗಿ ಕಟ್ಟಬೇಕೆಂದು ಕರೆ ನೀಡಿದರು.

ರಾಜ್ಯ ಉಪಾಧ್ಯಕ್ಷರಾದ ಕಾ|| ಪ್ರಭುದೇವ ಯಳಸಂಗಿಯವರು ಮಾತನಾಡಿ ದುಡಿಯುವ ವರ್ಗದ ಮುಂದಿರುವ ಸವಾಲುಗಳು, ಸರಕಾರದ ಕಾರ್ಮಿಕ ವಿರೋಧಿ ನೀತಿಗಳು ಹಾಗು ಸಂಘಟನೆಯ ಜವಾಬ್ದಾರಿಗಳ ಕುರಿತು ಮಾತನಾಡಿ ಎಲ್ಲಾ ಸಾಮೂಹಿಕ ಸಂಘಟನೆಗಳನ್ನು ವಿಸ್ತರಿಸಲು ಕರೆ ನೀಡಿದರು.

ಸ್ಟಾಫ್ ಮತ್ತು ವರ್ಕರ್ಸ ಫೆಡರೇಷನ ರಾಜ್ಯ ಕಾರ್ಯಾಧ್ಯಕ್ಷರಾದ ಕಾ||ಸಿದ್ದಪ್ಪ ಪಾಲ್ಕಿ ರವರು ಶುಭಕೋರಿ ಮಾತನಾಡಿದರು.
ಜಿಲ್ಲಾ ಕಾರ್ಯದರ್ಶಿ ಕಾ|| ಭೀಮಾಶಂಕರ ಮಾಡಿಯಾಳ ರವರು ರಾಜ್ಯ ಮತ್ತು ಕೇಂದ್ರ ಸರಕಾರಗಳ ರೈತ ವಿರೋಧಿ, ಕಾರ್ಮಿಕ ವಿರೋಧಿ ನೀತಿಗಳ ಕುರಿತು ಮಾತನಾಡಿ ಹೋರಾಟಕ್ಕೆ ಬೆಂಬಲ ವ್ಯಕ್ತಪಡಿಸಿದರು.

ಜಿಲ್ಲಾ ಕಾರ್ಯದರ್ಶಿ ಕಾ|| ಹಣಮಂತರಾಯ ಅಟ್ಟುರ ರವರು ಮಾತನಾಡಿ ಅಂಗನವಾಡಿ ಹಾಗು ಬಿಸಿಯೂಟ ತಯಾರಕ ಕಾರ್ಯಕರ್ತೇಯರ ಮೇಲಿನ ಶೋಷಣೆ ವಿರೋದಿಸಿ ಮಾತನಾಡಿದರು.

ಕಾರ್ಯಕ್ರಮದ ಅದ್ಯಕ್ಷತೆ ವಹಿಸಿರುವ ಂIಖಿUಅ ಜಿಲ್ಲಾ ಅದ್ಯಕ್ಷರಾದ ಕಾ|| ಎಚ್ ಎಸ್ ಪತಕಿ ರವರು ಮಾತನಾಡಿ ಜಿಲ್ಲೆಯಲ್ಲಿ ಸಿಮೆಂಟ ಕೈಗಾರಿಕೆ ಹಾಗೂ ಕಾರ್ಮಿಕ ಸಂಘಟನೆ ಬೆಳೆದು ಬಂದ ಬಗೆ ಹಾಗು ಂIಖಿUಅ ಹಿರಿಯ ಮುಖಂಡರಾದ ಕಾ|| ಮೊಯಿದ್ದೀನ, ಕಾ|| ಶ್ರೀನಿವಾಸ ಗುಡಿ ಮುಂತಾದ ನಾಯಕರ ತ್ಯಾಗ ಬಲಿದಾನವನ್ನು ಸ್ಮರಿಸಿದರು.

.ಕಾರ್ಯಕ್ರಮದಲ್ಲಿ ವಾಡಿ ಸಿಮೆಂಟ ಕಾರ್ಮಿಕ ಸಂಘಟನೆಯ ಅಧ್ಯಕ್ಷರಾದ ಕಾ|| ರಮೇಶ ಕಾರಬಾರಿ, ಉಗಾರ ಶುಗರ್ಸ ಫ್ಯಾಕ್ಟರಿ ಕಾಂಟ್ರ್ಯಾಕ್ಟ ವರ್ಕರ್ಸ ಯೂನಿಯನ ಪ್ರಧಾನ ಕಾರ್ಯದರ್ಶಿ ವಿಜಯಕುಮಾರ ಬೇನಾಳಮಠ, ಕಟ್ಟಡ ಕಾರ್ಮಿಕ ಸಂಘದ ಮುಖಂಡರಾದ ಕಾ|| ಮಾನಪ್ಪ ಕಟ್ಟಿಮನಿ(ಇಜೇರಿ), ಕಾ||ಶಿವಲಿಂಗಮ್ಮ ಲೆಂಗಟಿಕರ, ಕಲಬುರಗಿ ನಗರ ಆಟೋ ಚಾಲಕರ ಸಂಘದ ಪ್ರದಾನ ಕಾರ್ಯದರ್ಶಿ ಕಾ|| ಮಹಮ್ಮದ ಹುಸ್ಸೆನ, ಏSಖಖಿಅ ಸ್ಟಾಫ ಮತ್ತು ವರ್ಕರ್ಸ ಯೂನಿಯನ ಕಲಬುರಗಿ ವಿಬಾಗ 2 ರ ಪ್ರದಾನ ಕಾರ್ಯದರ್ಶಿ ಅಬ್ದುಲ ಕಲೀಮ, ಂIಖಿUಅ ಜಿಲ್ಲಾ ಉಪಾದ್ಯಕ್ಷರಾದ ಕಾ|| ಬಕ್ಕಪ್ಪ ಅಮಲೆ, ಭಾರತಿಯ ಮಾಹಿಳಾ ಒಕ್ಕೂಟದ ಜಿಲ್ಲಾ ಮುಖಂಡರಾದ ಕಾ|| ಪದ್ಮಾವತಿ ಮಾಲಿಪಾಟಿಲ, ಅಂಗನವಾಡಿ ಕಾರ್ಯಕರ್ತೆಯರು ಹಾಗು ಸಹಾಯಕಿಯರ ಸಂಘದ ಮುಖಂಡರಾದ ಕಾ|| ಶಾರದಾ ಹಿರೇಮಠ, ಅಕ್ಷರ ದಾಸೋಹ ಬಿಸಿಯೂಟ ತಯಾರಕರ ಸಂಘದ ಮುಖಂಡರಾದ ಯಶೋದಾ ರಾಥೋಡ ರವರು ಉಪಸ್ಥಿತರಿದ್ದರು.

ಪ್ರಾರಂಭದಲ್ಲಿ ಕಾ|| ಕಲ್ಯಾಣಿ ತುಕ್ಕಾಣಿ ಸ್ವಾಗತಿಸಿ ಕಾರ್ಯಕ್ರಮ ನಿರುಪಿಸಿದರು. ಕೊನೆಯಲ್ಲಿ ಕಾ|| ಶರಣಮ್ಮ ಪೂಜಾರಿ ರವರು ವಂದನಾರ್ಪಣೆ ಮಾಡಿ ಕಾರ್ಯಕ್ರಮ ಮುಕ್ತಾಯಗೊಳಿಸಲಾಯಿತು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here