ಶಹಾಬಾದ: ಹನ್ನೇರಡನೇ ಶತಮಾನದಲ್ಲಿ ವಿಶ್ವಗುರು ಬಸವಣ್ಣ ವಚನ ಸಾಹಿತ್ಯದ ಮೂಲಕ ಜಾಗತಿಕ ಮನ್ನಣೆ ಗಳಿಸಿದರೆ, ಕನಕದಾಸರು ದಾಸ ಸಾಹಿತ್ಯದ ಮೂಲಕ ವಿಶ್ವಮಾನಸರೆನಿಸಿದ್ದಾರೆ ಎಂದು ನಗರಸಭೆಯ ಪೌರಾಯುಕ್ತೆ ಪಂಕಜಾ ರಾವೂರ ಹೇಳಿದರು.
ಅವರು ಗುರುವಾರ ನಗರಸಭೆಯ ಕಾರ್ಯಾಲಯದಲ್ಲಿ ಆಯೋಜಿಸಲಾದ ಕನಕದಾಸರ ಜಯಂತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.
ದಾಸ ಸಾಹಿತ್ಯದ ಮೂಲಕ ಜೀವನದ ಮೌಲ್ಯಗಳಿಗೆ ಹೊಸ ಅರ್ಥ ನೀಡಿದ ಕನಕದಾಸರು ಜಾತಿ ಮೀರಿ ಬೆಳೆದ ಮಹಾನ್ ಚಿಂತಕರಾಗಿದ್ದರು.ಕನಕದಾಸರ ಆದರ್ಶ, ತತ್ವಗಳು ಇಂದಿಗೂ ಪ್ರಸ್ತುತವಾಗಿದ್ದು,ಸಮಾಜದ ಪ್ರತಿಯೊಬ್ಬರಿಗೂ ದಾರಿದೀಪವಾಗಿವೆ ಎಂದು ಹೇಳಿದರು.
ಕರ್ನಾಟಕ ಪ್ರದೇಶ ಕುರುಬರ ಸಂಘದ ಮಾಜಿ ತಾಲೂಕಾಧ್ಯಕ್ಷ ಮಲಕಣ್ಣಾ ಮುದ್ದಾ ಮಾತನಾಡಿ,ದಾಸ ಸಾಹಿತ್ಯದ ಮೂಲಕ ಸಮಾಜದಲ್ಲಿ ವೈಚಾರಿಕತೆ ಅನಾವರಣಗೊಳಿಸಿದ ಕೀರ್ತಿ ಕನಕದಾಸರಿಗೆ ಸಲ್ಲುತ್ತದೆ.ಹೀಗಾಗಿ ಕನಕದಾಸರ ಜಯಂತೋತ್ಸವದಲ್ಲಿ ಸಮಾಜದಲ್ಲಿ ಪ್ರತಿಯೊಬ್ಬರೂ ಪಾಲ್ಗೊಳ್ಳಬೇಕು ಎಂದರು.
ಕರ್ನಾಟಕ ಪ್ರದೇಶ ಕುರುಬರ ಸಂಘದ ತಾಲೂಕಾಧ್ಯಕ್ಷ ನಿಂಗಣ್ಣ ಪೂಜಾರಿ, ಡಿ.ಸಿ.ಹೊಸಮನಿ,ಸಾಯಿಬಣ್ಣ ಕೊಲ್ಲೂರ್, ಡಾ.ರಶೀದ್ ಮರ್ಚಂಟ್, ಡಾ.ಅಹ್ಮದ್ ಪಟೇಲ್, ಅಶೋಕ ಬೆಳಗುಂಪಿ, ಮಂಜುನಾಥ ಪೂಜಾರಿ, ಸಂತೋಷ ದೊಡ್ಡಮನಿ, ಶಾಂತಪ್ಪ ಪೂಜಾರಿ, ಸುನೀಲ ಪೂಜಾರಿ, ಶಿವಾನಂದ ಪೂಜಾರಿ,ವಿಜಯಕುಮಾರ ಕಂಠಿಕರ್, ಸುರೇಶ ಗಿರಿಣಿ,ಮಲ್ಲಿಕಾರ್ಜುನ ಪೂಜಾರಿ, ಶರಣಗೌಡ ಪಾಟೀಲ, ಪೂಜಪ್ಪ ಮೇತ್ರೆ, ನಗರಸಭೆಯ ವ್ಯವಸ್ಥಾಪಕ ಶರಣಗೌಡ ಪಾಟೀಲÁರೋಗ್ಯ ನಿರೀಕ್ಷಕ ಶಿವರಾಜಕುಮಾರ, ಸಾಬಣ್ಣ ಸುಂಗಲಕರ್, ಅರುಣಕುಮಾರ ಜಾಯಿ ಇತರರು ಇದ್ದರು