ಸಂವಿಧಾನ ಪ್ರಜೆಗಳ ಹಕ್ಕು -ಕರ್ತವ್ಯ ನಿರ್ದಿಷ್ಟಪಡಿಸುತ್ತದೆ

0
26

ಶಹಾಬಾದ: ಸರ್ಕಾರ ಸಂವಿಧಾನದ ಮೂಲಕ ಕಾಯಾರ್ಂಗ, ಶಾಸಕಾಂಗ ಮತ್ತು ನ್ಯಾಯಾಂಗಗಳ ಅಧಿಕಾರದ ವ್ಯಾಖ್ಯಾನ ಮಾಡುತ್ತದೆ. ಪ್ರಜೆಗಳ ಹಕ್ಕು ಮತ್ತು ಕರ್ತವ್ಯಗಳನ್ನು ನಿರ್ದಿಷ್ಟಪಡಿಸುತ್ತದೆ ಎಂದು ತಹಶೀಲ್ದಾರ್ ಗುರುರಾಜ ಸಂಗಾವಿ ಹೇಳಿದರು.

ಅವರು ಎಸ್.ಎಸ್. ಮರಗೋಳ ಕಾಲೇಜಿನಲ್ಲಿ ಸಂವಿಧಾನ ದಿನದ ಅಂಗವಾಗಿ ಆಯೋಜಿಸಲಾದ ಕಾರ್ಯಕ್ರಮದಲ್ಲಿ ಡಾ.ಬಿಆರ ಅಂಬೇಡ್ಕರ ಅವರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ ಮಾತನಾಡಿದರು.

Contact Your\'s Advertisement; 9902492681

ಪ್ರಜಾ ಪ್ರಭುತ್ವವಾದ ಭಾರತ ದೇಶದ ಪ್ರಜೆಗಳು ಕೇಂದ್ರ, ರಾಜ್ಯ ಹಾಗೂ ಪ್ರಾದೇಶಿಕ ವಿಭಾಗಗಳಲ್ಲಿ ತಮ್ಮ ಸರಕಾರವನ್ನು ಸಾರ್ವತ್ರಿಕ ಮತಾಧಿಕಾರದ ಪದ್ಧತಿಯ ಮೂಲಕ ಆರಿಸುತ್ತಾರೆ, ಭಾರತದ ಎಲ್ಲ 18 ವರ್ಷಗಳ ವಯೋಮಿತಿಯ ಮೇಲಿರುವ ಕಾನೂನುಬದ್ಧ ಮತ ಚಲಾಯಿಸುವ ಅಧಿಕಾರ ಹೊಂದಿರುವ ಪ್ರಜೆಗಳು ಧರ್ಮ, ಜಾತಿ, ಮತ, ಲಿಂಗ ಅಥವಾ ಶಿಕ್ಷಣ ಮಟ್ಟದ ಭೇದವಿಲ್ಲದೇ ಮತ ಚಲಾಯಿಸುವ ಹಕ್ಕನ್ನು ಸಂವಿಧಾನ ರಚನೆ ಮಾಡಿದವರು ಅವಕಾಶ ಕಲ್ಪಿಸಿದ್ದಾರೆ ಎಂದರು.

ಅಧ್ಯಕ್ಷತೆ ವಹಿಸಿ ಮಾತನಾಡಿದ ಪ್ರಾಚಾರ್ಯ ಪೆÇ್ರೀ.ಕೆ.ಬಿ. ಬಿಲ್ಲವ ಮಾತನಾಡಿ, ಭಾರತದ ಪ್ರಜೆಯಾಗಿ ಹುಟ್ಟಿದ ಪ್ರತಿ ಮಗು ಕೂಡ ಭಾರತದ ಸಂವಿಧಾನ ಮತ್ತು ಅದರ ಪೀಠಿಕೆ ಅರಿಯಬೇಕು. ಎಲ್ಲ ಧರ್ಮಗಳಿಗೆ ಒಂದೊಂದು ಗ್ರಂಥಗಳಿವೆ. ಆದರೆ, ಸಂವಿಧಾನ ಎಲ್ಲರಿಗೂ ಶ್ರೇಷ್ಠ ಧರ್ಮಗ್ರಂಥವಾಗಿದೆ, ಪ್ರತಿಯೊಬ್ಬರು ಸಂವಿಧಾನದಲ್ಲಿನ ಮೂಲಭೂತ ಹಕ್ಕು ಮತ್ತು ಕರ್ತವ್ಯಗಳನ್ನು ಅರಿತು ಅದರಂತೆ ನಡೆದುಕೊಳ್ಳಬೇಕು, ಸಂವಿಧಾನ ರಚನೆಯಾಗಲು 2 ವರ್ಷ 11 ತಿಂಗಳು 18 ದಿನಗಳ ಕಾಲ ಹಿಡಿಯಿತು, ಭಾರತ ಸಂವಿಧಾನವು ಜಗತ್ತಿನಲ್ಲಿನ ಅತಿ ದೊಡ್ಡ ಸಂವಿಧಾನ ಎಂದು ಹೇಳಲಾಗುತ್ತದೆ. ಇಂತಹ ಬೃಹತ್ ಸಂವಿಧಾನವು 26ನೇ ನವೆಂಬರ್ 1949 ರಂದು ಬಾಬಾಸಾಹೇಬ ಅಂಬೇಡ್ಕರ್ ಅವರ ನೇತೃತ್ವದಲ್ಲಿ ಆಗಿನ ರಾಷ್ಟ್ರಪತಿ ಡಾ. ರಾಜೇಂದ್ರ ಪ್ರಸಾದ ಅವರಿಗೆ ಸಂವಿಧಾನ ಸಮರ್ಪಣೆ ಮಾಡಲಾಯಿತು.

ನಂತರ 26 ನೇ ಜನೆವರಿ 1950 ರಂದು ಇದನ್ನು ಕಾನೂನಾತ್ಮಕವಾಗಿ ಜಾರಿಗೆ ತರಲಾಯಿತು, ಆ ದಿನವನ್ನು ಗಣರಾಜ್ಯೋತ್ಸವ ದಿನ ಎಂದು ಘೋಷಣೆ ಮಾಡಲಾಯಿತುಮಾಡಲಾಯಿತು ಎಂದರು.

ಉಪನ್ಯಾಸಕ ರಾಮಣ್ಣ ಇಬ್ರಾಹಿಂಪೂರ ಮಾತನಾಡಿದರು. ಡಾ. ವೆಂಕಟರಾಜಪ್ಪ, ಪೆÇ್ರೀ. ಸೋಮಶೇಖರ, ಪತ್ರಕರ್ತ ಲೋಹಿತ್ ಕಟ್ಟಿ ವೇದಿಕೆ ಮೇಲೆ ಇದ್ದರು.

ಶಿವಕುಮಾರ ಕುಸಾಳೆ ಸ್ವಾಗತಿಸಿದರು, ಶಿವಶಂಕರ ಹಿರೇಮಠ ನಿರೂಪಿಸಿದರು. ಶರಣಮ್ಮ ಕೊಳ್ಳಿ ವಂದಿಸಿದರು.

ಮತದಾನ ಪ್ರತಿಯೊಬ್ಬ ನಾಗರಿಕನ ಹಕ್ಕು.18 ವರ್ಷ ತುಂಬಿದ ಎಲ್ಲರಿಗೂ ಮತದಾನ ಮಾಡುವ ಹಕ್ಕಿದೆ.ಆದ್ದರಿಂದ 18 ವರ್ಷ ಪೂರೈಸಿದವರು ನೊಂದಣಿ ಮಾಡಿಸಿಕೊಳ್ಳತಕ್ಕದ್ದು. ಈ ಬಗ್ಗೆ ಜಾಗೃತಿ ಮೂಡಿಸುವಲ್ಲಿ ತಾಲೂಕಾಡಳಿತ ವತಿಯಿಂದ ಎಲ್ಲಾ ಶಾಲಾ-ಕಾಲೇಜುಗಳಲ್ಲಿ ಮತದಾನ ಜಾಗೃತಿ ಅಭಿಯಾನ ಕಾರ್ಯಕ್ರಮ ಮಾಡಲಾಗುತ್ತಿದೆ. -ಗುರುರಾಜ ಸಂಗಾವಿ ತಹಶೀಲ್ದಾರ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here