ಕಲಬುರಗಿ: ಗ್ರಾಮ ಸ್ವರಾಜ್ ಮತ್ತು ಮಂಚಾಯತ್ ರಾಜ್ ಕಾಯ್ದೆಡಿಯಲ್ಲಿ 15ನೇ ಹಣಕಾಸಿನಲ್ಲಿ 46 ಲಕ್ಷ ಅವ್ಯವಹಾರ ನಡೆಸಿರುವ ಆರೋಪದ ಹಿನ್ನೆಯಲ್ಲಿ ಕಮಲಾಪುರ ತಾಲ್ಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿಗಳಿಂದ ಓಕಳಿ ಗ್ರಾಮ ಪಂಚಾಯತ ಪಿಡಿಓ ಅಧಿಕಾರಿ ವಿರುದ್ಧ ಕಲಬುರಗಿ ಸಿಇಎನ್ ಪೊಲೀಸ್ ಠಾಣೆಯಲ್ಲಿ ಕ್ರಿಮಿನಲ್ ಪ್ರಕರಣ ದಾಖಲಾಗಿದೆ.
ಕಮಲಾಪುರ ತಾಲ್ಲೂಕಿನ ಓಕಳಿ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಯಾಗಿರುವ ಪ್ರವೀಣ ಕುಮಾರ ಅವರ ಮೇಲೆ ಕ್ರಿಮಿನಲ್ ಪ್ರಕರಣ ದಾಖಲಾಗಿದ್ದು, 15ನೇ ಹಣಕಾಸು ಅನುದಾನದಲ್ಲಿ ಅವ್ಯವಹಾರ ನಡೆಸಿ ಕಾಮಗಾರಿ ಕೈಗೊಳ್ಳದೆ ಪರಿಕರಗಳನ್ನು ಖರೀದಿಸದೆ ಓಚರ್ ಸೃಷ್ಠಿಸಿ ರವರು 46 ಲಕ್ಷ ರೂಪಾಯಿ ಹಣ ದುರ್ಬಳಗೆ ಮಾಡಿರುತ್ತಾರೆ ಎಂದು ಅಂಬೇಡ್ಕರ್ ಯುವ ಸೇನೆ ಜಿಲ್ಲಾಧ್ಯಕ್ಷ ನ್ಯಾಯವಾದಿ ಮಲ್ಲಿಕಾರ್ಜುನ ತಳಕೇರಿ ಮತ್ತು ಓಕಳಿ ಗ್ರಾಮ ಪಂಚಾಯತ ಮಾಜಿ ಅಧ್ಯಕ್ಷ ವಿಜಯಕುಮಾರ ಶೆಟ್ಟಿ ದೂರು ಸಲ್ಲಿಸಿದರು.
ಪಿಡಿಓ ಪ್ರವೀಣಕುಮಾರ ವಿರುದ್ಧ ದೂರಿನ ತನಿಖೆ ಕೈಗೊಂಡ ಅಧಿಕಾರಿಗಳು ವಿಚಾರಣೆ ನಡೆಸಿದ ವೇಳೆ ಅನಾರೊಗ್ಯದ ನೆಪವೊಡ್ಡಿ 8 ದಿನಗಳ ಕಾಲಾವಕಾಶ ಕೋರಿದ್ದರು . ನಂತರ ದೂರಿಗೆ ಸಂಬಂಧಿಸಿದ ಎಲ್ಲಾ ದಾಖಲೆಗಳೊಂದಿಗೆ ಖುದ್ದಾಗಿ ಹಾಜರಾಗಲು ಹಾಗೂ ತನಿಖೆಗೆ ಸಹಕರಿಸಲು ತಿಳಿಸಲಾಗಿತ್ತು. ಅನೇಕ ಸಲ ದಾಖಲೆ ಸಲ್ಲಿಸುವಂತೆ ತಿಳಿಸಿಸರೂ ಕೂಡ ತನಿಕಾಧಿಕಾರಿಗಳಿಗೆ ಸ್ಪಂದಿಸಿರುವುದಿಲ್ಲ ಎಂದು ತಿಳಿದುಬಂದಿದೆ.
ದಾಖಲೆ ಸಲ್ಲಿಸಲು ಹಿಂಜರಿಯುತ್ತಿರುವುದನ್ನು ಗಮನಿಸಿ ಅನುದಾನ ದುರುಪಯೋಗ ಪಡಿಸಿರುವ ಬಗ್ಗೆ ಪ್ರಥಾಮಿಕ ತನಿಖಾ ವರದಿಯಿಂದ ಕಂಡು ಬಂದಿರುವ ಹಿನ್ನೆಲೆಯಲ್ಲಿ ಸೆನ್ ಪೊಲೀಸ್ ಠಾಣೆಯಲ್ಲಿ ಪ್ರವಿಣಕುಮಾರ ಪಿಡಿಒ ವಿರುದ್ಧ ಪ್ರಕರಣ ದಾಖಲಾಗಿದೆ.
ಪ್ರಥಾಮಿಕ ತನಿಖೆಯಲ್ಲಿ 46 ಲಕ್ಷ ಅನುದಾನ ಅವ್ಯವಹಾರ ನಡೆಸಿರುವುದು ಮೇಲ್ನೊಟಕ್ಕೆ ಕಂಡುಬಂದಿದ್ದು, ಕ್ರಿಮಿನಲ್ ಪ್ರಕರಣ ಸಹ ದಾಖಲಾಗಿದೆ. ತಕ್ಷಣ ಅವ್ಯವಹಾರ ನಡೆಸಿರುವ ಪಿಡಿಓ ಅಧಿಕಾರಿ ಪ್ರವೀಣಕುಮಾರಗೆ ಅಮನಾತುಗೊಳ್ಳಿಸಿ ಮುಂದಿನ ತನಿಖೆ ನಡೆಸಬೇಕು. – ನ್ಯಾಯವಾದಿ ಮಲ್ಲಿಕಾರ್ಜುನ ತಳಕೇರಿ, ಅಂಬೇಡ್ಕರ್ ಯುವ ಸೇನೆ ಜಿಲ್ಲಾ ಅಧ್ಯಕ್ಷರು ಕಲಬುರಗಿ.