ಕಲಬುರಗಿ: ಕಲಬುರಗಿ ಮಹಾನಗರ ಪಾಲಿಕೆಗೆ ಕೆ.ಕೆ.ಆರ್.ಡಿ.ಬಿ ರೂ.250.00 ಕೋಟಿಗಳ ಅನುದಾದಲ್ಲಿ ಅಥವಾ ಸರ್ಕಾರದ ವತಿಯಿಂದ ಮಂಜೂರು ಮಾಡಿಸಿಕೊಡಬೇಕೆಂದು ಪಾಲಿಕೆಯ ಮಹಾಪೌರರಾದ ವಿಶಾಲ ಎಸ್. ಧರ್ಗಿ ಅವರು ಗುರುವಾರ ಬೆಳಗಾವಿಯ ಸುವರ್ಣಸೌಧದಲ್ಲಿ ಜರುಗಿದ ಕೆ.ಕೆ.ಆರ್.ಡಿ.ಬಿ. ಯೋಜನೆಯ 2023-24ನೇ ಸಾಲಿನ ಜಿಲ್ಲಾ ಮಟ್ಟದ ಸಲಹಾ ಸಮಿತಿ ಸಭೆಯಲ್ಲಿ ಪಾಲ್ಗೊಂಡು ಸಚಿವರಾದ ಪ್ರಿಯಾಂಕ್ ಖರ್ಗೆ ಹಾಗೂ ಕೆ.ಕೆ.ಆರ್.ಡಿ.ಬಿ. ಅಧ್ಯಕ್ಷ ಡಾ. ಅಜಯ ಸಿಂಗ್ ಅವರಿಗೆ ಪಾಲಿಕೆಯ ಸರ್ವ ಸದಸ್ಯರ ವತಿಯಿಂದ ಪ್ರಸ್ತಾವನೆಯನ್ನು ಸಲ್ಲಿಸಿದರು.
ನಗರದ 55 ವಾರ್ಡ್‍ಗಳಲ್ಲಿ ಕಳೆದ 03 ವರ್ಷಗಳಿಂದ ಮಹಾನಗರ ಪಾಲಿಕೆಯಿಂದ ಯಾವುದೇ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಂಡಿಲ್ಲದಿರುವುದರ ಕುರಿತು ಪಾಲಿಕೆಯ ಸದಸ್ಯರುಗಳಿಗೆ ಸಾರ್ವಜನಿಕರಿಂದ ಬಹಳಷ್ಟು ದೂರುಗಳು ಬರುತ್ತಿವಿದೆ ಎಂದು ತಿಳಿಸಿದರು.
ನಗರವನ್ನು ಅಭಿವೃದ್ಧಿಪಡಿಸಲು ಸಾಧ್ಯವಾಗುತ್ತಿಲ್ಲವಾದ್ದರಿಂದ, ಪಾಲಿಕೆಯಲ್ಲಿ ಅತಿ ಅವಶ್ಯಕವಾದ ಕಾಮಗಾರಿಗಳು ಮತ್ತು ಪ್ರತಿ ವಾರ್ಡಗೆ ರೂ.50.00 ಲಕ್ಷದ ಕಾಮಗಾರಿಗಳನ್ನೊಳಗೊಂಡು ಒಟ್ಟು 250 ಕೋಟಿ ಅನುದಾನ ನೀಡಬೇಕೆಂದು ಮನವಿ ಮಾಡಿದ್ದರು.