ನೇಕಾರ ನಿಗಮ ಮಂಡಳಿ ಸ್ಥಾಪನೆಗೆ ಒತ್ತಾಯ

0
27

ಮಾದನಹಿಪ್ಪರಗಿ: ರಾಜಕೀಯವಾಗಿ ಆರ್ಥಿಕವಾಗಿ ಶೈಕ್ಷಣಿಕವಾಗಿ ಹಿಂದುಳಿದ ನೇಕಾರ ಸಮುದಾಯ ಅಭಿವೃದ್ಧಿ ಹೊಂದಲು ಎಲ್ಲಾರೂ ಒಗ್ಗಟ್ಟಾಗಿ ಹೋರಾಡಿ ನೇಕಾರ ನಿಗಮ ಮಂಡಳಿ ಸ್ಥಾಪನೆಗೆ ಒತ್ತಾಯಿಸಬೇಕಾಗಿದೆ ಎಂದು ಕಲಬುರಗಿ ಜಿಲ್ಲಾ ನೇಕಾರ ಸಮುದಾಯಗಳ ಒಕ್ಕೂಟದ ಅಧ್ಯಕ್ಷ ಪ್ರದೀಪಕುಮಾರ ಸಂಗಾ ಹೇಳಿದರು.

ಇಂದು ಸ್ಥಳೀಯ ಶರಣ ಶಿವಲಿಂಗೇಶ್ವರರ ಸಭಾ ಗೃಹದಲ್ಲಿ ನಡೆದ ಹಟಗಾರ ಸಮಾಜದವರನ್ನುದ್ದೇಶಿಸಿ ಮಾತನಾಡುತ್ತ, ಹರಿದು ಹಂಚಿ ಹೋಗಿದ್ದ ನೇಕಾರ ಸಮಾಜದವರನ್ನು ಒಂದುಗೂಡಿಸಿ ಮುಂಬರುವ ದಿನಗಳಲ್ಲಿ ಆಧ್ಯಪ್ರವಚನಕಾರ ದೇವರ ದಾಸಿಮಯ್ಯನವರ ಜಯಂತಿಗೆ ಜಿಲ್ಲೆಯಿಂದ ಹತ್ತು ಸಾವಿರ ಜನರನ್ನು ಕೂಡಿಸುವ ಗುರಿ ಹೊಂದಿದೆ. ನೇಕಾರರ ನಡೆ ದೇವರ ದಾಸಿಮ್ಮಯ್ಯನವರ ಕಡೆ ಎಂದು ಸಾರಲು ಒಂದು ಶಕ್ತಿ ಪ್ರದರ್ಶನ ಮಾಡಲು ಉದ್ದೇಶಿಸಲಾಗಿದೆ.

Contact Your\'s Advertisement; 9902492681

ಜವಳಿ ಇಲಾಖೆಯಲ್ಲಿನ ಸರಕಾರಿ ಸೌಲಭ್ಯಗಳು ಇನ್ನೊಬ್ಬರು ಪಡೆಯುತ್ತಿದ್ದಾರೆ. ನೇಕಾರ ಜವಳಿ ಇಲಾಖೆಯ ಚೊಚ್ಚಲ ಮಗ ಇದ್ದಂತೆ. ಸಮಾಜದ ಒಳತಿಗಾಗಿ ಉತ್ತಮ ಆಲೋಚನೆಗಳಿಂದ ಹೋರಾಟ ಮಾಡಬೇಕಾಗಿದೆ. ನಮ್ಮ ಸಮುದಾಯಗಳ ಭವಿಷ್ಯ ರೂಪಿಸಲು ಉತ್ತಮ ಆಲೋಚನೆಗಳು ಇರಬೇಕು. ನಮ್ಮ ಉತ್ಪನ್ನಗಳನ್ನು ಮೊದಲು ನಾವು ಉಪಯೋಗಿಸಬೇಕು ಎಂದರು.

ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶಾಂತಕುಮಾರ ಯಳಸಂಗಿ ಮಾತನಾಡಿ ಜಿಲ್ಲೆಯಲ್ಲಿ ಒಂದು ಲಕ್ಷ ಐವತ್ತು ಸಾವಿರ ಜನ ನೇಕಾರರಿದ್ದಾರೆ. ರಾಜ್ಯದಲ್ಲಿ 60 ಲಕ್ಷಕ್ಕಿಂತ ಹೆಚ್ಚು ಜನ ಸಂಖ್ಯೆಯಲ್ಲಿ ಇದ್ದಾರೆ. ನೇಕಾರರ ಸಮುದಾಯಗಳ ಒಕ್ಕೂಟದ ಉದ್ದೇಶ ನಮ್ಮ ಸಮಸ್ಯೆ ನಾವೇ ಬಗೆಹರಿಸಿಕೊಳ್ಳಬೇಕಿದೆ. ಅದಕ್ಕಾಗಿ ನಾವೆಲ್ಲಾ ಒಂದಾಗಿರಬೇಕು ಎಂದರು.

ಮುಖಂಡ ಮಲ್ಲಿನಾಥ ನಿಂಬಾಳ ಮಾತನಾಡಿದರು. ವೇದಿಕೆಯ ಮೇಲೆ ಶ್ರೀನಿವಾಸ ಕಲಕೂರೆ, ಜಗದೀಶ, ಸೋಮು, ಸಂಗಣ್ಣಪ್ಪ ನಿಂಬಾಳ, ಶಾಂತಕುಮಾರ ಯಳಸಂಗಿ, ಈರಣ್ಣ ಸೊನ್ನದ ರವಿಕುಮಾರ ಯಳಸಂಗಿ ಇದ್ದರು. ಮಲ್ಲಯ್ಯ ಕಣ್ಣಿ, ಲಕ್ಷ್ಮಣ ಪಾತಾಳೆ, ಧರೆಪ್ಪ ಗುಳಗಿ, ಸಿದ್ದಾರೂಢ ಜಳಕೋಟಿ, ಶ್ರೀಶೈಲ ಜೇವೂರ, ಮಲ್ಲಿನಾಥ ಮಾಶನಳ್ಳಿ, ಕಲ್ಯಾಣಿ ಅಕ್ಕಾ, ಬಮನಿಂಗಪ್ಪ ಗೌಡಗಾಂವ್ ಅಲ್ಲದೆ ಸಾಜದ ಅನೇಕ ಮುಖಂಡರುಗಳು ಭಾಗವಹಿಸಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here