ಚಿಗರಹಳ್ಳಿಯಲ್ಲಿ ಎನ್.ಎಸ್.ಎಸ್ ವಾರ್ಷಿಕ ವಿಶೇಷ ಶಿಬಿರ 18ರಿಂದ

0
57

ಕಲಬುರಗಿ: ವಿದ್ಯಾರ್ಥಿ ದೆಸೆಯಿಂದಲೇ ಶಿಸ್ತು, ದೇಶಭಕ್ತಿ, ಸಂಸ್ಕಾರ, ಮೌಲ್ಯಗಳನ್ನು ಅಳವಡಿಸಿಕೊಂಡು ರಾಷ್ಟ್ರದ ದೊಡ್ಡ ಸಂಪತ್ತಾಗುವಂತೆ ಮಾಡುವ ಉದ್ದೇಶಕ್ಕಾಗಿ ಆರಂಭಗೊಂಡ ಎನ್.ಎಸ್.ಎಸ್‍ನಲ್ಲಿ ವಾರ್ಷಿಕ ಶಿಬಿರ ಪ್ರಮುಖವಾಗಿದೆ. ಜೇವರ್ಗಿ ಪಟ್ಟಣದ ಬಸವೇಶ್ವರ ವೃತ್ತದ ಸಮೀಪವಿರುವ ಸರ್ಕಾರಿ ಪದವಿ ಪೂರ್ವ ಕಾಲೇಜು(ಕೆಕೆ-0023) ಎನ್.ಎಸ್.ಎಸ್ ಘಟಕದ ವತಿಯಿಂದ ಜೇವರ್ಗಿ ತಾಲೂಕಿನ ಚಿಹರಹಳ್ಳಿಯ ಶ್ರೀ ಜಗದ್ಗುರು ಮರುಳ ಶಂಕರ ದೇವರ ಗುರುಪೀಠದ ಸಮುದಾಯ ಭವನದಲ್ಲಿ ಇದೇ ಡಿ.18ರಿಂದ 24ರವರೆಗೆ ಒಂದು ವಾರದ ಕಾಲ ವಾರ್ಷಿಕ ವಿಶೇಷ ಶಿಬಿರ ಹಮ್ಮಿಕೊಳ್ಳಲಾಗಿದೆ ಎಂದು ಎನ್.ಎಸ್.ಎಸ್ ಅಧಿಕಾರಿ ಎಚ್.ಬಿ.ಪಾಟೀಲ ತಿಳಿಸಿದ್ದಾರೆ.

ಅವರು ಶನಿವಾರ ಪತ್ರಿಕಾ ಪ್ರಕಟಣೆಯ ಮೂಲಕ ವಿವರ ನೀಡಿದರು. ಖ.18ರಂದು ಸೋಮವಾರ ಬೆ.11ಗಂಟೆಗೆ ಉದ್ಘಾಟನೆ ಜರುಗಲಿದೆ. ಶ್ರೀ ಜಗದ್ಗುರು ಮರುಳ ಶಂಕರ ದೇವರ ಗುರುಪೀಠದ ಪೀಠಾಧಿಪತಿ ಪರಮಪೂಜ್ಯ ಶ್ರೀ ಸಿದ್ದಬಸವ ಕಬೀರ ಸ್ವಾಮೀಜಿ ಅವರ ದಿವ್ಯಸಾನಿಧ್ಯದಲ್ಲಿ ಡಿಡಿಪಿಯು ಶಿವಶರಣಪ್ಪ ಮೂಳೆಗಾಂವ ಉದ್ಘಾಟಿಸಲಿದ್ದಾರೆ.

Contact Your\'s Advertisement; 9902492681

ಸಿಬಿಸಿ ಉಪಾಧ್ಯಕ್ಷ ರವೀಂದ್ರಕುಮಾರ ವೈ.ಕೋಳಕೂರ ಧ್ವಜಾರೋಹಣ ನೆರವೇರಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಬಾಲಕಿಯರ ಸರ್ಕಾರಿ ಪಿಯು ಕಾಲೇಜಿನ ಪ್ರಾಚಾರ್ಯ ಶಿವಶರಣಪ್ಪ ಮಸ್ಕನಳ್ಳಿ, ಪಿಎಸ್‍ಐ ಸುರೇಶ ಚವ್ಹಾಣ, ಯಾಳವಾರ ಗ್ರಾ.ಪಂ.ಅಧ್ಯಕ್ಷ ಶರಣು ದೊಡ್ಡಮನಿ, ಉಪಾಧ್ಯಕ್ಷ ಶಂಕರಗೌಡ ಖಾದ್ಯಾಪುರ, ಸದಸ್ಯರಾದ ಸುಲೇಮಾನ ಪಟೇಲ್, ಸಾಯಬಣ್ಣ ಕವಲ್ದಾರ, ಚಂದ್ರಣ್ನ ಪೂಜಾರಿ, ಉದ್ಯಮಿ, ಸಮಾಜ ಸೇವಕ ಯಾಸೀನ್ ಪಟೇಲ್ ಜಾಹಗೀರದಾರ್ ಆಗಮಿಸಲಿದ್ದು, ಕಾಲೇಜಿನ ಪ್ರಾಚಾರ್ಯ ಮೊಹ್ಮದ್ ಅಲ್ಲಾಉದ್ದದೀನ್ ಸಾಗರ ಅಧ್ಯಕ್ಷತೆ ವಹಿಸಲಿದ್ದಾರೆ.

ಡಿ.19ರ ಮಂಗಳವಾರ ‘ಪರಿಸರ ಸಂರಕ್ಷಣೆ ಮತ್ತು ನಿರ್ವಹಣೆ’ ಎಂಬ ವಿಷಯದ ಮೇಲೆ ವಿಜ್ಞಾನ ಶಿಕ್ಷಕ ಪಂಕಜ ಪಾಟೀಲ ವಿಶೇಷ ಉಪನ್ಯಾಸ ನೀಡಲಿದ್ದಾರೆ. ಉಪನ್ಯಾಸಕರಾದ ಆಸ್ಮಾ ಜಬೀನ್, ನಯಿಮಾ ನಾಹಿದ್ ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ. ಉಪನ್ಯಾಸಕ ಶಂಕ್ರೆಪ್ಪ ಹೊಸದೊಡ್ಡಿ ಅಧ್ಯಕ್ಷತೆ ವಹಿಸಲಿದ್ದಾರೆ.

ಡಿ.20ರ ಬುಧವಾರ ‘ಕನ್ನಡ ನಾಡಿಗೆ ಜೇವರ್ಗಿ ಕೊಡುಗೆ’ ಎಂಬ ವಿಷಯದ ಮೇಲೆ ಪ್ರಾಚಾರ್ಯ ದೇವೀಂದ್ರ ಬಿ.ಗುಡುರ್ ಅವರು ವಿಶೇಷ ಉಪನ್ಯಾಸ ನೀಡಿಲಿದ್ದಾರೆ. ಮುಖ್ಯ ಅತಿಥಿಗಳಾಗಿ ಉಪನ್ಯಾಸಕರಾದ ಸಿದ್ರಾಮಯ್ಯ ಮಠಪತಿ, ರೇಣುಕಾ ಚಿಕ್ಕಮೇಟಿ, ರಂಜಿತಾ ಠಾಕೂರ ಆಗಮಿಸಲಿದ್ದು, ಮಲ್ಲಪ್ಪ ರಂಜಣಗಿ ಅಧ್ಯಕ್ಷತೆ ವಹಿಸಲಿದ್ದಾರೆ.

ಡಿ.21ರ ಗುರುವಾರ ‘ಕರಿಯರ್ ಗೈಡೆನ್ಸ್, ವ್ಯಕ್ತಿತ್ವ ವಿಕಸನ ಮತ್ತು ಸ್ಪರ್ಧಾತ್ಮಕ ಪರೀಕ್ಷೆಗಳು’ ಎಂಬ ವಿಷಯದ ಮೇಲೆ ಪ್ರಾಧ್ಯಾಪಕ ಡಾ.ಬಾಬುರಾವ ಶೇರಿಕಾರ ಮತ್ತು ‘ಭಾರತದ ಸಂವಿಧಾನ ಮತ್ತು ಜನಸಾಮಾನ್ಯರಿಗೆ ಕಾನೂನುಗಳು’ ಎಂಬ ವಿಷಯದ ಮೇಲೆ ನ್ಯಾಯವಾದಿ ಡಾ.ಸುನೀಲಕುಮಾರ ಎಚ್.ವಂಟಿ ವಿಶೇಷ ಉಪನ್ಯಾಸ ನೀಡಲಿದ್ದಾರೆ. ಮುಖ್ಯ ಅತಿಥಿಗಳಾಗಿ ಶಿವಯೋಗೆಪ್ಪಾ ಬಿರಾದಾರ, ಬಸಯ್ಯಸ್ವಾಮಿ ಹೊದಲೂರ, ದೇವೇಂದ್ರಪ್ಪ ಗಣಮುಖಿ ಆಗಮಿಸಲಿದ್ದು, ಉಪನ್ಯಾಸಕ ರವೀಂದ್ರಕುಮಾರ ಬಟಗೇರಿ ಅಧ್ಯಕ್ಷತೆ ವಹಿಸಲಿದ್ದಾರೆ.

ಡಿ.22ರ ಶುಕ್ರವಾರ ‘ಆರೋಗ್ಯ ಸಂರಕ್ಷಣೆಯ ಕ್ರಮಗಳು’ ಎಂಬ ವಿಷಯದ ಬಗ್ಗೆ ಜೇವರ್ಗಿ ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಅಂಬಾರಾಯ ತಂಗಾ, ‘ವಚನ ಮತ್ತು ಜಾನಪದ ಸಾಹಿತ್ಯದಲ್ಲಿ ಜೀವನದ ಮೌಲ್ಯಗಳು’ ಎಂಬ ವಿಷಯದ ಕುರಿತು ಶರಣ ಚಿಂತಕ ಸಂತೋಷ ಹೂಗಾರ ವಿಶೇಷ ಉಪನ್ಯಾಸ ನೀಡಲಿದ್ದಾರೆ. ಶರಣಯ್ಯ ಹಿರೇಮಠ, ಸಮೀನಾ ಬೇಗಂ, ಸಾಹೇಬಗೌಡ ಪಾಟೀಲ, ನಾಗಮ್ಮ ಹಾದಿಮನಿ ಮುಖ್ಯ ಅತಿಥಿಗಳಾಗಿದ್ದಾರೆ. ಉಪನ್ಯಾಸಕರಾದ ಶರಣಮ್ಮ ಬಾವಿಕಟ್ಟಿ ಅಧ್ಯಕ್ಷತೆ ವಹಿಸಲಿದ್ದಾರೆ.

ಡಿ.23ರ ಶನಿವಾರರಾಜ್ಯ ಸಂಪನ್ಮೂಲ ವ್ಯಕ್ತಿಗಳಾದ ಜಯಪ್ರಕಾಶ ಕಟ್ಟಿಮನಿ ಮತ್ತು ಗುರುಲಿಂಗಯ್ಯ ವಿ.ಮಠ ಅವರು ಶಿಬಿರಾರ್ಥಿಗಳಿಗೆ ಯೋಗ, ಸಂಗೀತ, ನೃತ್ಯ, ರಾಷ್ಟ್ರಲಾಂಛನಗಳ ಬಗ್ಗೆ ಮಾಹಿತಿ ನೀಡಲಿದ್ದಾರೆ. ನುಝ್ಹತ್ ಪರ್ವಿನ್, ಸಲೀಮಾ ಪಠಾಣ, ನೇಸರ ಎಂ.ಬೀಳಗಿಮಠ, ರಾಮಚಂದ್ರ ಚವ್ಹಾಣ ಮುಖ್ಯ ಅತಿಥಿಗಳಾಗಿದ್ದಾರೆ. ಉಪನ್ಯಾಸಕರಾದ ಮಲ್ಲಿಕಾರ್ಜುನ ದೊಡ್ಡಮನಿ ಅಧ್ಯಕ್ಷತೆ ವಹಿಸಲಿದ್ದಾರೆ.

ಡಿ.24ರ ರವಿವಾರ ಸಮಾರೋಪ ಸಮಾರಂಭ ಜರುಗಲಿದೆ. ಶ್ರೀ ಜಗದ್ಗುರು ಮರುಳ ಶಂಕರ ದೇವರ ಗುರುಪೀಠದ ಪೀಠಾಧಿಪತಿ ಪರಮಪೂಜ್ಯ ಶ್ರೀ ಸಿದ್ದಬಸವ ಕಬೀರ ಸ್ವಾಮೀಜಿ ಅವರ ದಿವ್ಯಸಾನಿಧ್ಯ ವಹಿಸಲಿದ್ದಾರೆ. ಎನ್.ಎಸ್.ಎಸ್ ವಿಭಾಗೀಯ ಅಧಿಕಾರಿ ಡಾ.ಚಂದ್ರಶೇಖರ ದೊಡ್ಡಮನಿ ಸಮಾರೋಪ ಭಾಷಣ ಮಾಡಲಿದ್ದಾರೆ. ಪ್ರಾಚಾರ್ಯರುಗಳಾದ ಬಸವರಾಜ ಬಿರಾಜಾದಾರ, ಶ್ರೀಶೈಲ್ ಖನದಾಳ, ಅಮೀನಪ್ಪ ಹೊಸಮನಿ, ಡಾ.ಧರ್ಮಣ್ಣ ಬಡಿಗೇರ, ವೆಂಕಟರಾವ ಮುಜುಮದಾರ, ಜಗದೀಶ ಉಕನಾಳ, ಮೆಹಬೂಬ ಇನಾಮದಾರ, ಸಂಜೀವ ಪವಾರ, ಹಿರಿಯ ಗ್ರಂಥಪಾಲಕ ಪ್ರಕಾಶ ಪಾಟೀಲ ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ. ಕಾಲೇಜಿನ ಪ್ರಾಚಾರ್ಯ ಮೊಹ್ಮದ್ ಅಲ್ಲಾಉದ್ದೀನ್ ಸಾಗರ ಅಧ್ಯಕ್ಷತೆ ವಹಿಸಲಿದ್ದಾರೆ. ಒಂದು ವಾರ ಕಾಲದಲ್ಲಿ ಸ್ವಚ್ಛತೆ, ವಿಶೇಷ ಉಪನ್ಯಾಸಗಳು, ಸಾಂಸ್ಕøತಿಕ ಸೇರಿದಂತೆ ಮತ್ತಿತರ ಚಟುವಟಿಕೆಗಳು ಜರುಗಲಿವೆ ಎಂದು ಅವರು ಮಾಹಿತಿ ನೀಡಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here