ಬದುಕುವ ಕಲೆ ಕಲಿಸಿಕೊಡುವ ಎನ್.ಎಸ್.ಎಸ್ ಕಾರ್ಯ ದೊಡ್ಡದು

0
76

ಕಲಬುರಗಿ: ಒಳ್ಳೆಯದನ್ನು ಗುರುತಿಸಿ ಪ್ರೊತ್ಸಾಹಿಸಿ ಬೆಳೆಸುವ ಕಾರ್ಯವಾಗಬೇಕಾಗಿದೆ. ನಿರಂತರ ಪ್ರಯತ್ನ ಉನ್ನತ ಸಾಧನೆ ರಹದಾರಿಯಿದ್ದಂತೆ. ಪುಸ್ತಕ ಓದುವುದರಿಂದ ಮಸ್ತಕ ಸ್ವಚ್ಛವಾಗುತ್ತದೆ. ಮೌಢ್ಯತೆ, ಅಂಧಶೃದ್ಧೆ, ಕಂದಾಚಾರ, ಅನಿಷ್ಠ ಪದ್ಧತಿಗಳಿಂದ ದೂರವಿರಬೇಕು. ಬಸವಾದಿ ಶರಣರ ಕೊಡುಗೆ ಅವಿಸ್ಮರಣೀಯವಾಗಿದೆ. ಪ್ರಾಮಾಣಿಕತೆ, ದಕ್ಷತೆ ಮೈಗೂಡಿಸಿಕೊಳ್ಳಬೇಕು. ಮತ್ತೊಬ್ಬರ ಕಣ್ಣೀರನ್ನು ಒರೆಸುವವನೇ ಜಗತ್ತಿನ ದೊಡ್ಡ ವ್ಯಕ್ತಿಯಾಗಿದ್ದಾನೆ. ಜೀವನದ ಶಿಸ್ತು, ತಾಳ್ಮೆ ಎಂದಿಗೂ ಮರೆಯಬಾರದು. ಮನಸ್ಸುಗಳ ಕಟ್ಟುವ ಕೆಲಸ ಮಾಡಬೇಕು. ಬೆಂಕಿ ಹಚ್ಚುವವರಿಂದ ದೂರವಿದ್ದು, ಸಂದರ್ಭ ಬಂದರೆ ಆರಿಸುವ ಕೆಲಸ ಮಾಡಬೇಕೆ ಹೊರತು, ಎಂದಿಗೂ ಕೂಡಾ ಬೆಂಕಿ ಹಚ್ಚುವ ಕೆಲಸ ಮಾಡಬಾರದು. ಎನ್.ಎಸ್.ಎಸ್ ಬದುಕುವ ಕಲೆ ಕಲಿಸಿಕೊಡುತ್ತದೆ ಎಂದು ಪೂಜ್ಯ ಸಿದ್ದಬಸವ ಕಬೀರ ಸ್ವಾಮೀಜಿ ಅಭಿಮತಪಟ್ಟರು.

ಜೇವರ್ಗಿ ಪಟ್ಟಣದ ಬಸವೇಶ್ವರ ವೃತ್ತದ ಸಮೀಪವಿರುವ ಸರ್ಕಾರಿ ಪದವಿ ಪೂರ್ವ ಕಾಲೇಜಿನ ವತಿಯಿಂದ ಜೇವರ್ಗಿ ತಾಲೂಕಿನ ಚಿಗರಹಳ್ಳಿ ಶ್ರೀ ಜಗದ್ಗುರು ಮರುಳ ಶಂಕರ ದೇವರ ಗುರುಪೀಠದ ಸಮುದಾಯ ಭವನದಲ್ಲಿ ಎನ್.ಎಸ್.ಎಸ್ ವಾರ್ಷಿಕ ವಿಶೇಷ ಶಿಬಿರಕ್ಕೆ ಸೋಮವಾರ ಚಾಲನೆ ನೀಡಿ ಅವರು ಆಶೀರ್ವಚನ ನೀಡಿದರು.

Contact Your\'s Advertisement; 9902492681

ರಾಷ್ಟ್ರೀಯ ಸೇವಾ ಯೋಜನೆಯು ವಿದ್ಯಾರ್ಥಿಗಳಲ್ಲಿ ದೆಸೆಯಿಂದಲೇ ಶಿಸ್ತು, ದೇಶಭಕ್ತಿ, ರಾಷ್ಟ್ರೀಯ ಪ್ರಜ್ಞೆ, ಮಾನವೀಯ ಹಾಗೂ ನೈತಿಕ ಮೌಲ್ಯಗಳು, ಸಮಯಪ್ರಜ್ಞೆ, ಬದ್ದತೆ, ಜವಾಬ್ದಾರಿ, ಪ್ರಾಮಾಣಿಕತೆ, ನಿಶ್ಚಿತ ಗುರಿ, ನಾಯಕತ್ವದ ಗುಣಗಳು, ನಿರಂತರ ಪ್ರಯತ್ನ, ಮುಂತಾದ ಕಾರ್ಯಗಳನ್ನು ಮಾಡುತ್ತದೆ. ವಿಶೇಷ ಉಪನ್ಯಾಸಗಳ ಮೂಲಕ ಅಂತರಂಗ ಶುದ್ದಿ ಮತ್ತು ಸ್ವಚ್ಛತೆ, ಪರಿಸರ ಸಂರಕ್ಷಣೆ ಅಂತಹ ಮುಂತಾದ ಕೆಲಸಗಳ ಮೂಲಕ ಬಹಿರಂಗ ಶುದ್ದಿ ಮಾಡಲು ಪೂರಕವಾಗಿದೆ ಎಂದು ಹೇಳಿದರು.

ಜಿ.ಪಂ. ಮಾಜಿ ಸದಸ್ಯ ಕಾಶಿಂಪಟೇಲ್ ಮುದವಾಳ, ಸಿಬಿಸಿ ಉಪಾಧ್ಯಕ್ಷ ರವೀಂದ್ರಕುಮಾರ ವೈ.ಕೋಳಕೂರ ಮಾತನಾಡುತ್ತಾ, ಎನ್.ಎಸ್.ಎಸ್ ಸ್ವಯಂ ಸೇವಕರು ಶಿಸ್ತಿನ ಶಿಪಾಯಿಗಳಾಗಿ, ಈ ಯೋಜನೆಯ ಮಹತ್ವಕಾಂಕ್ಷೆಯನ್ನು ಅರ್ಥಮಾಡಿಕೊಂಡು, ಅದರ ಸದುಪಯೋಗವನ್ನು ಮಾಡಿಕೊಳ್ಳುವ ಮೂಲಕ ದೇಶದ ಅಮೂಲ್ಯ ಸಂಪತ್ತಾಗುವಂತೆ ಸಲಹೆ ನೀಡಿದರು.

ಕಾರ್ಯಕ್ರಮದಲ್ಲಿ ಭೂ ನ್ಯಾಯ ಮಂಡಳಿಯ ಮಾಜಿ ಸದಸ್ಯ ಮುನ್ನಾಪಟೇಲ್ ಯಾಳವಾರ, ಸ್ಥಳೀಯ ಬಾಲಕಿಯರ ಸರ್ಕಾರಿ ಪಿಯು ಕಾಲೇಜಿನ ಪ್ರಾಚಾರ್ಯ ಶಿವಶರಣಪ್ಪ ಮಸ್ಕನಳ್ಳಿ, ಕಾಲೇಜಿನ ಪ್ರಾಚಾರ್ಯ ಮೊಹ್ಮದ್ ಅಲ್ಲಾಉದ್ದೀನ್ ಸಾಗರ, ಗ್ರಾ.ಪಂ.ಸದಸ್ಯ ಮಲ್ಲಿನಾಥ ನಡಗೇರಿ, ನಿವೃತ್ತ ಶಿಕ್ಷಕ ರಾಮಚಂದ್ರ ಕೌಂಟೆ, ಎನ್.ಎಸ್.ಎಸ್ ಎಚ್.ಬಿ.ಪಾಟೀಲ, ಕಾಲೇಜಿನ ಉಪನ್ಯಾಸಕರಾದ ರವೀಂದ್ರಕುಮಾರ ಬಟಗೇರಿ, ಮಲ್ಲಪ್ಪ ರಂಜಣಗಿ, ಸಾಹೇಬಗೌಡ ಪಾಟೀಲ ಹಾಗೂ ಎನ್.ಎಸ್.ಎಸ್ ಸ್ವಯಂ ಸೇವಕರು ಪಾಲ್ಗೊಂಡಿದ್ದರು. ಯಲ್ಲಮ್ಮ ಪ್ರಾರ್ಥಿಸಿದಳು. ರವಿ ನಿರೂಪಿಸಿ, ವಂದಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here