“ದೇಶಿಯ ಸೊಗಸು” ಹೊಸ ಪರಿಕಲ್ಪನೆಯೊಂದಿಗೆ ಆರ್.ಜೆ ಕಾಲೇಜು

0
180

ಕಲಬುರಗಿ: ನಗರದ ಸರದಾರ ವಲ್ಲಭಭಾಯಿ ಪಟೇಲ್ ಎಜ್ಯುಕೇಷನ್ ಟ್ರಸ್ಟ್ ಸಂಚಾಲಿತ ರಮಾಬಾಯಿ ಜಹಾಗೀರದಾರ್ (ಆರ್.ಜೆ) ಸ್ವತಂತ್ರ ಪದವಿ ಪೂರ್ವ ವಿಜ್ಞಾನ ಕಾಲೇಜಿನಲ್ಲಿ ದೇಶಿಯ ಸೊಗಸು ಎಂಬ ಹಳೆಯ ಸಂಪ್ರದಾಯದ ಆಟಗಳ ಉದ್ಘಾಟನೆ ಕಾರ್ಯಕ್ರಮ ಸಸಿಗೆ ನೀರೆಯುವುದರ ಮುಖಾಂತರ ಆರಂಬಿಸಲಾಯಿತು.

ಪ್ರಾರ್ಥನಾ ಗೀತೆಯನ್ನು ಲಕ್ಷಿ ಹಾಡಿದರು. ಕಾರ್ಯಕ್ರಮ ನಿರೂಪಣೆಯನ್ನು ಉಪ ಪ್ರಾಚಾರ್ಯರು ಕೇದಾರ ದೀಕ್ಷಿತ ನಡೆಸಿಕೊಟ್ಟರು. ಪ್ರಾಸ್ತಾವಿಕವಾಗಿ ಮಾತಾಡಿದ ಪ್ರಾಚಾರ್ಯರಾದ ಡಾ. ಭುರ್ಲಿ ಪ್ರಹ್ಲಾದ ಅವರು ವಿಧ್ಯಾರ್ಥಿಗಳ ಬರೀ ಓದಿನ ಜೊತೆಗೆ ಸರ್ವತೋಮುಖ ಬೆಳವಣಿಗೆಗಾಗಿ ದೇಶಿಯ ಸೊಗಸು ಎಂಬ ಕಾರ್ಯಕ್ರಮದಡಿಯಲ್ಲಿ ಹಳ್ಳಿಯ ಆಟಗಳಾದ ಅಗೋರಿ, ಚಿಣಿದಾಂಡು, ಹಗ್ಗದಾಟ, ಗೋಲಿ ಆಟ, ಗೋಣಿಚೀಲದ ಆಟ, ಕಬ್ಬಡ್ಡಿ, ಕಪ್ಪೆ ಜಿಗಿತ, ಬುಗರಿ, ಕುರ್ಚಿಯಾಟ ಮುಂತಾದವುಗಳು ಮಕ್ಕಳಿಗಾಗಿ ಏರ್ಪಡಿಸಲಾಗಿದೆ. ನಂತರ ಸಾಮೂಹಿಕ ಭೋಜನ, ರನಪ್ರಶ್ನೆ ಕಾರ್ಯಕ್ರಮವನ್ನು ಡಾ. ವಿಶಾಲ ಕೋಹಿರ ನಡೆಸಿಕೊಡುವರು ಎಂದು ಈ ಸಂದರ್ಭದಲ್ಲಿ ಮಾತನಾಡಿದರು.

Contact Your\'s Advertisement; 9902492681

ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾದ ಬಾಬುರಾವ್ ಯಡ್ರಾಮಿ ಮಾತನಾಡಿ ಡಾ. ಭುರ್ಲಿ ಪ್ರಹ್ಲಾದ ಅವರು ಕಲಬುರಗಿಯಲ್ಲಿ ಶಿಕ್ಷಣದ ಕಿರೀಟವಿದ್ದಂತೆ, ಅವರು ಶಿಕ್ಷಣವನ್ನು ಉನ್ನತಿ ಮಟ್ಟಕ್ಕೆ ತೆಗೆದುಕೊಂಡು ಹೋಗಲು ಶ್ರಮಿಸುತ್ತಿದ್ದಾರೆ. ಶಿಕ್ಷಣದ ಜೊತೆಗೆ ಜಾಗೃತಿ ಮೂಡಿಸಲು ಭ್ರಾತೃತ್ವ, ಸ್ನೇಹ, ಒಬ್ಬರೊನ್ನಬ್ಬೊರು ಬೆರೆಯುವದು ಜನಪದ ತಾಯಿಯಿದ್ದಂತೆ. ತಾಯಿಯ ವಾತ್ಸಲ್ಯದಂತೆ ಕಲ್ಯಾಣ ಕರ್ನಾಟಕದಲ್ಲಿ ಶಿಕ್ಷಣ ಅಭಿವೃದ್ದಿ ಆಗಬೇಕು ಎಂಬ ಬಯಕೆ ಅವರದು. ಸೈನಿಕ, ರೈತ ಭಾರತದ ರೋಲ್ ಮಾಡಲ್ ಆಗಿದ್ದಾರೆ ಎಂದರು.

ಇನ್ನೋರ್ವ ಅತಿಥಿಗಳಾದ ಬಿ.ಎಸ್. ಮಾಲೀಪಾಟೀಲ ಪ್ರಾಚಾರ್ಯರು ಖರ್ಗೆ ಪಿಯು ಕಾಲೇಜು ಕಲಬುರಗಿ ಇವರು ಮಾತನಾಡುತ್ತಾ ಶಿಕ್ಷಕನು ಬ್ರಹ್ಮರೂಪಿ, ಜ್ಞಾನವಂತನು, ಸೂರ್ಯನಂತೆ ಪ್ರಖರನು ಆಗಿದ್ದಾನೆ. ಎಲ್ಲಾ ಉಪನ್ಯಾಸಕರನ್ನು ಜೊತೆಯಲ್ಲಿ ಕರೆದುಕೊಂಡು ಹೋಗುವ ಗುಣ ಭುರ್ಲಿ ಅವರಲ್ಲಿದೆ. ಮನೂ, ಆಡಮ್ಸ್, ಸ್ವಾಮಿ ವಿವೇಕಾನಂದರ ವಾಣಿಯಂತೆ “ಶಿಕ್ಷಕನು ಆತ್ಮವಿದ್ದಂತೆ ವಿಧ್ಯಾರ್ಥಿಗಳ ಆತ್ಮದ ಜೊತೆಗೆ ಬೆಸೆಯುತ್ತಾನೆ” ದೇಶ ಕಟ್ಟುವ ಕಾರ್ಯ ಶಿಕ್ಷಕರ ಯುವಜನಾಂಗದ ಕೈಯಲ್ಲಿದೆ.

ಪ್ರಾಚಾರ್ಯರಾದ ಡಾ. ಭುರ್ಲಿ ಪ್ರಹ್ಲಾದರು ಆಟಗಳಿಗೆ ಚಾಲನೆಯನ್ನು ನೀಡಿದರು. ವಿಧ್ಯಾರ್ಥಿಗಳು ಖುಷಿಯಿಂದ ದೇಶಿಯ ಆಟಗಳನ್ನು ಆಡಿದರು. ಮನೋರಂಜನೆ ಪಟ್ಟರು. ವಿಧ್ಯಾರ್ಥಿಯಾದ ಶ್ರೀಧರ್ ಕಾಬಾ ಶಿಕ್ಷಕರು ಕೇಳಿದ ಪ್ರಶ್ನೆಗೆ ಹೀಗೆ ಉತ್ತರ ನೀಡುತ್ತಾನೆ. ಹೊಸಾ ವಾತಾವರಣ ಸೃಷ್ಟಿ, ಹಳೆಯ ನೆನಪುಗಳು ಮರಳಿಸಿದೆ.

ಈ ಆಟಗಳಿಂದ ಧೈಹಿಕ ಕಸರತ್ತು ನೀಡಿದೆ. ತುಂಬಾ ಖುಷಿ ಪಡೆಯಲು ಅವಕಾಶವನ್ನು ನಮ್ಮ ಪ್ರಾಚಾರ್ಯರು ನಮಗೆ ಒದಗಿಸಿಕೊಟ್ಟದ್ದಾರೆ. ಇಂತಹ ವಾತಾವರಣ ನಮ್ಮ ಕಾಲೇಜಿನಲ್ಲಿ ಕಂಡಿದ್ದೇನೆ. ಕುಮಾರಿ ತನೀಶಾ ಮಾತಾಡುತ್ತಾ ಉತ್ತಮ ಚಟುವಟಿಕೆ, ಬಹಳ ಖುಷಿಯ ವಿಷಯ, ಒತ್ತಡ ಕಡಿಮೆಯಾಗಿದೆ, ಮನಸಿಗೆ ಹಿತವೆನಿಸಿದೆ, ಹೇಳಲು ಸಾಧ್ಯವಾಗದಂತೆ ಹಬ್ಬದ ವಾತಾವರಣ ನಿರ್ಮಾಣವಾಗಿದೆ. ನಮ್ಮ ಭುರ್ಲಿ ಸರ್ ಅವರಿಗೆ ಧನ್ಯವಾದಗಳು ಎಂದಳು. ಅನೇಕ ಆಟಗಳು ಉಪನ್ಯಾಸಕರ ನೇತೃತ್ವದಲ್ಲಿ ನಡೆದವು. ಹಾಗೂ ವಂದನಾರ್ಪಣೆಯನ್ನು ಮಳೇಂದ್ರ ಹಿರೇಮಠ ನಡೆಸಿಕೊಟ್ಟರು. ಸಿಬ್ಭಂದಿ ಬಳಗ ಹಾಗೂ ವಿದ್ಯಾರ್ಥಿಗಳು ಭಾಗಿಯಾಗಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here