ಡಾ. ಭಕ್ತ ಕುಂಬಾರಗೆ ಚಾಲುಕ್ಯ ರತ್ನ ಇಮ್ಮಡಿ ಪುಲಿಕೇಶಿ ಪ್ರಶಸ್ತಿ

0
25

ಕಲಬುರಗಿ: ಬಾದಾಮಿ ಮೇಘಮೈತ್ರಿ ಕನ್ನಡ ಸಾಹಿತ್ಯ ಸಂಘ ರಾಜ್ಯಾಧ್ಯಕ್ಷ ರಮೇಶ್ ಕಮತಗಿ ಇವರ ಸಾರಥ್ಯದಲ್ಲಿ ಬಾದಾಮಿ ಚಾಲುಕ್ಯರ ಉತ್ಸವ ಸಮಾರಂಭದಲ್ಲಿ ಸಾವಿರ ಕಾರ್ಯಕ್ರಮಗಳ ಸರದಾರ ಎಂದೇ ಖ್ಯಾತರಾದ ಕನ್ನಡದ ಖ್ಯಾತ ಸೆಲೆಬ್ರಿಟಿ ನಿರೂಪಕ ಡಾ|| ಎಸ್.ಎಮ್.ಭಕ್ತ ಕುಂಬಾರ ರವರಿಗೆ 2024ನೇ ಸಾಲಿನ “ಚಾಲುಕ್ಯ ರತ್ನ ಇಮ್ಮಡಿ ಪುಲಿಕೇಶಿ” ಪ್ರಶಸ್ತಿ ಪ್ರಧಾನ ಮಾಡಿ ಗೌರವಿಸಲಾಯಿತು.

ಕನ್ನಡದ ಕೀರ್ತಿಯನ್ನು ಕಾಶ್ಮೀರದಿಂದ ಕನ್ಯಾಕುಮಾರಿ ವರೆಗೆ ಹಬ್ಬಿಸುವ ಕನ್ನಡದ ಕುವರ ಈಗಾಗಲೇ ಹೊರ ರಾಜ್ಯಗಳಾದ ಆಂದ್ರ ಪ್ರದೇಶ, ತೆಲಂಗಾಣ, ಮಹಾರಾಷ್ಟ್ರ, ನವ ದೆಹಲಿ, ಗುಜರಾತ, ತಮಿಳುನಾಡು ಹಿಗೆ ಅನೇಕ ರಾಜ್ಯಗಳಿಗೆ ಸಂಚರಿಸಿ ಕನ್ನಡದಲ್ಲಿಯೇ ನಿರೂಪಣೆಯ ನುಡಿಯನ್ನು ನಿಡಿ ಸೈ ಎನಿಸಿಕೊಂಡಿದ್ದಾರೆ ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಕೂಡ ಇವರ ಕನ್ನಡದ ಸೇವೆ ನಿರಂತರವಾಗಿ ಸಾಗಲಿ ಎಂದು ಚಿಕ್ಕಮ್ಯಾಗೆರಿಯ ಭೂ ಕೈಲಾಸ ಮೇಲುಗದ್ದಗೆ ಹಿರೇಮಠದ ಷ.ಬ್ರ.ಡಾ. ಗುರುಶಾಂತ ಶಿವಾಚಾರ್ಯ ಸ್ವಾಮಿಗಳು ತಮ್ಮ ಆಶಿರ್ವಚನ ನುಡಿಯಲ್ಲಿ ಭಕ್ತ ಕುಂಬಾರ ರವರಿಗೆ ಬಣ್ಣಿಸಿ ಮಾತನಾಡಿದರು.

Contact Your\'s Advertisement; 9902492681

ಇದೆ ವೇಳೆ ಕಮತಗಿಯ ಷ.ಬ್ರ.108 ಶಿವಕುಮಾರ್ ಸ್ವಾಮಿಗಳು ಕೊಪ್ಪಳದ ಮಹೇಶ್ವರ ತಾತನವರು. ಡಾ. ಶಿವಾನಂದ ಕುಬಸದ ಡಾ. ಕರವೀರಪ್ರಭು ಬದಾಮಿ ರವಿ ಕಂಗಳ ಮಹೇಶ ಹೋಸಗೌಡ್ರು, ವರದಿಗಾರ ಎಸ್.ಎಮ್. ಹೀರೆಮಠ ಸೇರಿದಂತೆ ಹಲವು ಗಣ್ಯರು ಸೆರಿ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here