ಕಲಬುರಗಿ: ನಗರದ ಖಾಜಾ ಬಂದಾನವಾಜ ವಿಶ್ವವಿದ್ಯಾಲಯದ ಓಟೋರಿನೋಲಾರ್ಜಿಂಗೋಲಜಿ, ( ಕಿವಿ ಮೂಗು ಗಂಟಲು ) ವಿಭಾಗದಲ್ಲಿ ಶನಿವಾರ “ಬೇಸಿಕ್ ಫಂಕ್ಷನಲ್ ಎಂಡೋಸ್ಕೋಪಿಕ್ ಸೈನಸ್ ಸರ್ಜರಿ (FESS), & ATTICO ಆಂಟ್ರಲ್ CSOM ಮತ್ತು ಫಂಕ್ಷನಲ್ ಮೀಟೊಪ್ಲ್ಯಾಸ್ಟಿ ಒಂದು ಅವಲೋಕನ” ವಿಷಯದ ಬಗ್ಗೆ ಮುಂದುವರಿದ ವೃತ್ತಿಪರ ಅಭಿವೃದ್ಧಿ (CPD) ವನ್ನು ಹಮ್ಮಿಕೊಳ್ಳಲಾಗಿತ್ತು.
ಈ ಕಾರ್ಯಕ್ರಮದಲ್ಲಿ ಕೆಬಿಎನ ವಿವಿಯ ಉಪ ಕುಲಪತಿ ಪ್ರೊ ಅಲಿ ರಜಾ ಮೂಸ್ವಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು. ಮೆಡಿಕಲ್ ಡೀನ ಡಾ ಸಿದ್ದೇಶ ಇವರು ಸ್ಫೂರ್ತಿದಾಯಕ ಮಾತುಗಳನ್ನು ಆಡಿದರು.
ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿಗಳಾಗಿ ಡಾ ಸಿ ಬಿ ನಂದಾಲ ಇವರು “ATTICO ಆಂಟ್ರಲ್ CSOM ಮತ್ತು ಫಂಕ್ಷನಲ್ ಮೀಟೊಪ್ಲ್ಯಾಸ್ಟಿ : ಒಂದು ಅವಲೋಕನ” ಬಗ್ಗೆ ಉಪನ್ಯಾಸ ನೀಡಿದರೆ, ಎರಡನೇಯ ಗೋಷ್ಠಿಯಲ್ಲಿ ಡಾ ಸೋಮನಾಥ ಮೇಘಲ್ಮನಿ ” ಬೇಸಿಕ್ ಫಂಕ್ಷನಲ್ ಎಂಡೋಸ್ಕೋಪಿಕ್ ಸೈನಸ್ ಸರ್ಜರಿ (FESS) ” ವಿಷಯದ ಬಗ್ಗೆ ಉಪನ್ಯಾಸ ನೀಡಿದರು.
ಕಾರ್ಯಕ್ರಮದಲ್ಲಿ ವಿದ್ಯಾರ್ಥಿನಿ ಕೀರ್ತಿ ಪ್ರಾರ್ಥನೆ ಪ್ರಸ್ತುತ ಪಡಿಸಿದರೆ, ಇಎನ್‌ಟಿ ವಿಭಾಗದ ಮುಖ್ಯಸ್ಥ ಡಾ ಸೈಯದ್ ಮುಷ್ತಾಕ್ ಹಾಸ್ಮಿ ಸ್ವಾಗತಿಸಿದರು. ಅತಿಥಿ ಉಪನ್ಯಾಸಕಿ ಡಾ.ದೀಪಿಕಾ ರಾಣಿ ಪಾಟೀಲ್ ಮತ್ತು ಡಾ.ಭಾವನಾ ಪರಿಚಯಿಸಿದರು. ಡಾ ಸಂಜೀವ್ ಸಿ ಗುಡ್ಡದಮಠ ವಂದಿಸಿದರು. ಡಾ ಸಮೀರಾ ವಂದಿಸಿದರೆ ಇಂಟರ್ನ್ ಡಾ ದೀಪ್ತಿ ನಿರೂಪಿಸಿದರು.
ಡಾ ರಾಜಶ್ರೀ ಪಾಲದಿ, ಡಾ. ಅಬ್ದುಲ್ ಬಸೀರ್,ಡಾ. ಪಿ ಎಸ್ ಶಂಕರ್, ಡಾ. ಸಿಡ್ಲಿಂಗ್ ಚೆಂಗ್ಟಿ, ಡಾ ನಜೀರ್, ಡಾ ರಾಜೀವ, ಡಾ. ರಾಧಿಕಾ, ಡಾ. ಗುರುಪ್ರಸಾದ, ಡಾ. ರೇಣುಕಾ,ಡಾ ಮಲ್ಲಿಕಾರ್ಜುನ, ಡಾ ದಿನೇಶ್, ಡಾ. ಸಂಜೀವ್ ಸಿ ತಡಸದ್ಮಠ, ಡಾ ಭಾವನಾ ಸಂಗೋಳಿ, ಡಾ ಪದ್ಮ ತಾಳಿಕೋಟಿ,
ಡಾ. ದೀಪಿಕಾ ರಾಣಿ ಪಾಟೀಲ್, ಡಾ. ಸಮೀರ ಕ್ಯೂಮ್, ಶ್ರೀಮತಿ. ವೀಣಾ ಪಿಳ್ಳೈ ಮುಂತಾದವರು ಹಾಜರಿದ್ದರು.