ಕಲಬುರಗಿ: ಇಲ್ಲಿನ ಕೋಟನೂರ (ಡಿ)ಗ್ರಾಮದಲ್ಲಿ ಡಾ. ಬಿ.ಆರ್ ಅಂಬೇಡ್ಕರ್ ಮೂರ್ತಿಗೆ ಅವಮಾನ ಮಾಡಿರುವ ನಾಲ್ಕು ಜನ ಆರೋಪಿಗಳ ಜಾಮೀನು ಅರ್ಜಿಯನ್ನು ಕಲಬುರಗಿ 2ನೇ ಅಪರ ಜಿಲ್ಲಾ ಮತ್ತು ವಿಶೇಷ ಸತ್ರ ನ್ಯಾಯಾಲಯ (ಎಸ್.ಸಿ/ಎಸ್.ಟಿ) ಮಂಗಳವಾರ ವಜಾಗೊಳಿಸಿದೆ.
ಜನವರಿ 23 ರಂದು ಡಾ. ಅಂಬೇಡ್ಕರ್ ರವರ ಮೂರ್ತಿಗೆ ಅಪಮಾನ ಮಾಡುವ ಉದ್ದೇಶದಿಂದ ಮೂರ್ತಿಗೆ ಚಪ್ಪಲ ಹಾರ ಹಾಕಿ ಅವಮಾನಗೊಳಿಸಿರುವ ಕೊಟನೂರ(ಡಿ) ಗ್ರಾಮದ ಆರೋಪಿಗಳಾದ ಸಂಗಮೇಶ ಸುಭಾಷ ಪಾಟೀಲ್, ಕಿರಣ ಪ್ರಭುರಾವ ಬಿರಾದಾರ, ಹಣಮಂತ ಚಂದ್ರಕಾಂತ ಹಾಗೂ ಪಾಣೇಗಾಂವ್ ಶಿವಾಜಿನಗರ ನಿವಾಸಿ ಮಾನು ಗಂಗಾರಾಂ ರಾಠೋಡ್ ಸೇರಿ ಐದು ಜನರ ವಿರುದ್ಧ ವಿಶ್ವವಿದ್ಯಾಲಯ ಪೋಲೀಸ್ ಠಾಣೆ ಪ್ರಕರಣ ದಾಖಲಾಗಿತ್ತು.
ಪ್ರಕರಣದ ಕುರಿತು ಸಬ್ ಅರ್ಬನ್ ಉಪ ವಿಭಾಗದ ತನಿಖಾಧಿಕಾರ ಎಸಿಪಿ ಡಿ.ಜಿ. ರಾಜಣ್ಣ ತನಿಖೆ ಕೈಗೊಂಡು ಆರೋಪಗಳನ್ನು ಬಂಧಿಸಿದರು. ಸದ್ಯ ನಾಲ್ವರು ಆರೋಪಿಗಳು ಜಾಮೀನು ಕೋರಿ ನ್ಯಾಯಲಯಕ್ಕೆ ಅರ್ಜಿ ಸಲ್ಲಿಸಿದರು.
ಜಿಲ್ಲಾ ನ್ಯಾಯಾಲಯದ ವಕೀಲರಾದ ಲಿಂಗರಾಜ್ ಎಮ್.ಜಿ ಅವರು ದೂರುದಾರರ ಪರವಾಗಿ ವಾದ ಮಂಡಿಸಿದರು. ಸರ್ಕಾರದ ಪರವಾಗಿ ಪ್ರಭಾರಿ ವಿಶೇಷ ಸರಕಾರ ಅಭಿಯೋಜಕರಾದ ರಾಜಮಹೇಂದರ ಜಿ. ರವರು ವಾದವನ್ನು ಮಂಡಿಸಿದರು. ಜಿಲ್ಲಾ ವಕೀಲರ ಸಂಘ, ಎಸ್.ಸಿ./ಎಸ್.ಟಿ ವಕೀಲರ ಸಂಘದ ಸಹಕಾರದಲ್ಲಿನ ಅಶ್ವಿನಿ ಮದನಕರ್, ಆರತಿ ರಾಠೋಡ್, ರಮೇಶ ರಾಗಿ, ಧರ್ಮಣ್ಣ ಕೋನೆಕರ್, ವಿಜಯಕಾಂತ್ ರಾಗಿ, ಜಗನ್ನಾತ್ ಮಾಳಗೆ, ಮಲ್ಲಿಕಾರ್ಜುನ, ಜೆ.ಡಿ.ಆರ್, ಹಣಮಂತ ಬಾವಿಕಟ್ಟಿ ಇವರು ಪತ್ರಿಕಾ ಪ್ರಕಟಣೆ ಮೂಲಕ ಮಾಹಿತಿ ನೀಡಿದರು.