ಕಲಬುರಗಿ: ನಗರದ ಸಂಜಯ್ ಗಾಂಧಿನಗರದ ದುಬೈ ಕಾಲೋನಿಯಲ್ಲಿರುವ ಚಕ್ರಕಟ್ಟಾ ಸರಕಾರಿಹಿರಿಯ ಪ್ರಾಥಮಿಕಶಾಲೆಯ ಶಾಲಾ ವಾರ್ಷಿಕೋತ್ಸವವನ್ನು ಆಚರಿಸಲಾಯಿತು. ಜಿಲ್ಲಾ ಪಂಚಾಯತಿ ಮಾಜಿ ಅಧ್ಯಕ್ಷ ನಿತಿನ್ ಗುತ್ತೇದಾರ ಅವರು ಕಾರ್ಯಕ್ರಮ ಉದ್ಘಾಟಿಸಿದರು.
ಸುಕ್ಷೇತ್ರಗಣಜಲಖೇಡದ ನಾಗೇಶ ಮುತ್ಯಾ ಅವರು ಸಮಾರಂಭದ ಸಾನಿಧ್ಯವಹಿಸಿದ್ದರು.ಸಿದ್ದಾರೂಢ ಮಠದ ಬ್ರಹ್ಮಚಾರಿ ಮಹೇಶ್ವರಜಿ, ಜಿಲ್ಲಾ ಮಹಿಳಾ ಒಕ್ಕೂಟದ ಪದ್ಮಾವತಿ ಮಾಲಿ ಪಾಟೀಲ, ಸೋಮಶೇಖರಬೆಳಮಗಿ,ದೇವೇಂದ್ರ ದೇಸಾಯಿ ಕಲ್ಲೂರ್, ಜಗನ್ನಾಥ ಅವರು ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು.ಎಸ್.ಡಿ.ಎಂ.ಸಿ.ಅಧ್ಯಕ್ಷ ಸೂರ್ಯಕಾಂತ ಸಲಾರೆ ಅಧ್ಯಕ್ಷತೆ ವಹಿಸಿದ್ದರು.
ಶಾಲಾ ಶಿಕ್ಷಣ ಇಲಾಖೆ ಶಿಕ್ಷಣ ಸಂಯೋಜಕ ಸದಾಶಿವು ಮಿರ್ಜಿ, ಜಿಲ್ಲಾ ಮುಖ್ಯ ಶಿಕ್ಷಕರ ಸಂಘದ ಅಧ್ಯಕ್ಷ ಮಲ್ಲಿಕಾರ್ಜುನ ಕೆ.ಎಚ್..ಶಿಕ್ಷಕರ ಸಂಘದ ಅಧ್ಯಕ್ಷ ಶೇಖ್ ಮುಜೀಬ್ ಅತಿಥಿಗಳಾಗಿ ಆಗಮಿಸಿದ್ದರು.ಶಾಲೆಯ ಮುಖ್ಯ ಶಿಕ್ಷಕ ಪರಮೇಶ್ವರ ವಾಗ್ಲರ್ಗಿ ಅವರು ಪ್ರಾಸ್ತಾವಿಕಾಗಿ ಮಾತನಾಡಿ, ಶ್ರೇಷ್ಠಮಟ್ಟದ ಮೂಲಭೂತ ಸೌಕರ್ಯ, ಅನುಭವಿ ಮತ್ತು ಕ್ರೀಯಾಶೀಲ ಶಿಕ್ಷಕರಿಂದ ಕೂಡಿದ ಈ ಶಾಲೆಯಲ್ಲಿ ಮಕ್ಕಳಿಗೆ ಗುಣಾತ್ಮಕ ಶಿಕ್ಷಣ ನೀಡುತ್ತಿದ್ದು, ಪಾಲಕರು ಮತ್ತು ಪೆÇೀಷಕರು ಮಕ್ಕಳನ್ನು ಈ ಸರ್ಕಾರಿ ಶಾಲೆಗೆ ದಾಖಲಿಸಿ ಅವರ ಬಾಳನ್ನು ಉತ್ತಮವಾಗಿ ರೂಪಿಸಬೇಕು ಎಂದು ಕರೆ ನೀಡಿದರು.
ಇದೇ ಸಂದರ್ಭದಲ್ಲಿ ಶಾಲೆಯ ಮಕ್ಕಳಿಗೆ ಟೈ ಮತ್ತು ಬೆಲ್ಟ್ ಉಚಿತವಾಗಿ ನೀಡಿದ ಲಕ್ಷ್ಮೀಕಾಂತಜಮಾದಾರ ಅವರನ್ನು ಸನ್ಮಾನಿಸಲಾಯಿತು.
ಶಾಲೆಯ ಬಿಸಿಯೂಟ ಸಿಬ್ಬಂದಿಯನ್ನು ಗೌರವಿಸಲಾಯಿತು. ನಂತರ ಶಾಲಾ ಮಕ್ಕಳಿಂದ ನೃತ್ಯ ಮತ್ತು ಸಾಂಸ್ಕøತಿಕ ಕಾರ್ಯಕ್ರಮ ನಡೆದವು. ಸಹ ಶಿಕ್ಷಕಿ ಅರ್ಚನಾ ಸುನಾಮಿಕ ಅಚ್ಚುಕಟ್ಟಾಗಿ ಕಾರ್ಯಕ್ರಮ ನಡೆಸಿಕೊಟ್ಟರು. ವೀರಮ್ಮಎಂ.ಪಾಟೀಲ ಕಾರ್ಯಕ್ರಮ ನಿರೂಪಿಸಿದರು. ಅತಿಥಿ ಶಿಕ್ಷಕಿ ಬನಶಂಕರಿ ವಂದಿಸಿದರು. ಸಹ ಶಿಕ್ಷಕರಾದ ಲೀಲಾವತಿ, ಶಿವಲೀಲಾ, ಶಾಲೆಯ ಹಳೆಯ ವಿದ್ಯಾರ್ಥಿಗಳು, ವಿದ್ಯಾರ್ಥಿಗಳ ಪಾಲಕರು, ಪೆÇೀಷಕರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.