ಸಮಕಾಲೀನ ಕನ್ನಡ ಸಾಹಿತ್ಯಕ್ಕೆ ಮಹಿಳೆಯರ ಕೊಡುಗೆ ಅಮೋಘ; ವಿಜಯಕುಮಾರ ಪಾಟೀಲ ತೇಗಲತಿಪ್ಪಿ

0
228

ಕಲಬುರಗಿ: ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ಮಹಿಳಾ ಪ್ರತಿನಿಧಿಗಳಾದ ಶಕುಂತಲಾ ಪಾಟೀಲ ಜಾವಳಿ, ಜ್ಯೋತಿ ಕೋಟನೂರ, ಶಿಲ್ಪಾ ಜೋಶಿ ಅವರ ನೇತೃತ್ವದಲ್ಲಿ ಗುರುವಾರ ನಗರದ ಕನ್ನಡ ಭವನದ ಆವರಣದಲ್ಲಿ ಅಂತರಾಷ್ಟ್ರೀಯ ಮಹಿಳಾ ದಿನದಂಗವಾಗಿ ಮಹಿಳೆ ನಿನ್ನಿಂದಲೇ ಈ ಇಳೆ ಎನ್ನುವ ವಿಶೇಷ ಕಾರ್ಯಕ್ರಮದಡಿಯಲ್ಲಿ ವಿವಿಧ ಸ್ಪರ್ಧೆಗಳಾದ ಕುರ್ಚಿ ಆಟ, ನಿಂಬೆಹಣ್ಣಿನ ಚಮಚೆ ಸ್ಪರ್ಧೆ ಸೇರಿದಂತೆ ಅನೇಕ ವೈವಿಧ್ಯಮಯ ಕಾರ್ಯಕ್ರಮಗಳನ್ನು ನಡೆಸಿ ನೆರೆದಿದ್ದ ಪ್ರೇಕ್ಷಕರ ವಿಶೇಷ ಗಮನ ಸೆಳೆದರು.

ಜಿಲ್ಲಾ ಕಸಾಪ ಅಧ್ಯಕ್ಷ ವಿಜಯಕುಮಾರ ಪಾಟೀಲ ತೇಗಲತಿಪ್ಪಿ ಮಾತನಾಡಿ, ಸಮಕಾಲೀನ ಕನ್ನಡ ಸಾಹಿತ್ಯ ಅವಲೋಕನ ಮಾಡಿದರೆ ಮಹಿಳೆಯರ ಕೊಡುಗೆ ಅಮೋಘವಾಗಿದೆ. ಕನ್ನಡ ಮಹಿಳಾ ಸಾಹಿತ್ಯದ ಆರಂಭದ ಕುರುಹುಗಳನ್ನು ಹನ್ನೇರಡನೆಯ ಶತಮಾನದ ವಚನ ಸಾಹಿತ್ಯದಲ್ಲಿ ಕಾಣಬಹುದು. ಕನ್ನಡದ ಮೊಟ್ಟ ಮೊದಲ ಕವಯತ್ರಿ 12ನೇ ಶತಮಾನದ ಅಕ್ಕಮಹಾದೇವಿ. ಅಂದಿನ ಸಮಾಜದಲ್ಲಿ ಬೇರೂರಿದ್ದ ಮೌಢ್ಯ, ಕಂದಾಚಾರ ಮತ್ತು ಜಾತೀಯತೆಯನ್ನು ತನ್ನ ಬರವಣಿಗೆಯ ಮೂಲಕ ಹೇಳಿ ಕ್ರಾಂತಿ ಮಾಡಿದರು ಎಂದು ಹೇಳಿದರು.

Contact Your\'s Advertisement; 9902492681

ಹಿರಿಯ ಲೇಖಕಿ ಶಕುಂತಲಾ ಪಾಟೀಲ ಜಾವಳಿ ಮಾತನಾಡಿ, ಹೆಣ್ಣು ಮಕ್ಕಳು ಇಂದು ಪ್ರತಿಯೊಂದು ರಂಗ ಹಾಗೂ ಕ್ಷೇತ್ರದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ಸೇವೆಯನ್ನು ನೀಡುತ್ತಿದ್ದಾರೆ. ಇತ್ತಿಚೀನ ದಿನಗಳಲ್ಲಿ ಮಹಿಳೆಯರು ಕ್ರೀಡೆ, ಸಾಹಿತ್ಯ, ಕಲೆ, ಆಡಳಿತ ಸೇರಿದಂತೆ ಮುಂತಾದ ಕ್ಷೇತ್ರಗಳಲ್ಲಿ ಸ್ಪರ್ಧೆ ನೀಡುತ್ತಿದ್ದಾರೆ. ಹೀಗೆ ಮಹಿಳೆಯರಿಗೆ ಎಲ್ಲ ಪ್ರಕಾರಗಳಲ್ಲೂ ಅವಕಾಶ ಸಿಗಬೇಕಾಗಿದೆ ಎಂದರು.

ಸಮಾಜದ ಪ್ರತಿಯೊಂದು ಕ್ಷೇತ್ರದಲ್ಲೂ ನಾವು ಸಮಾನವಾಗಿದ್ದೇವೆ ಎಂದು ಮಾರ್ಮಿಕವಾಗಿ ಹೇಳಿದರು. ಮಹಿಳಾ ಪ್ರತಿನಿಧಿಗಳಾದ ಜ್ಯೋತಿ ಕೋಟನೂರ, ಶಿಲ್ಪಾ ಜೋಶಿ ನೇತೃತ್ವ ವಹಿಸಿದ್ದರು. ಜಿಲ್ಲಾ ಕಸಾಪ ಗೌರವ ಕಾರ್ಯದರ್ಶಿ ಶಿವರಾಜ ಅಂಡಗಿ, ಕೋಶಾಧ್ಯಕ್ಷ ಶರಣರಾಜ ಛಪ್ಪರಬಂದಿ, ಪ್ರಮುಖರಾದ ಕಲ್ಯಾಣಕುಮಾರ ಶೀಲವಂತ, ದರ್ಮಣ್ಣ ಎಚ ಧನ್ನಿ, ರಾಜೇಂದ್ರ ಮಾಡಬೂಳ, ವಿಶ್ವನಾಥ ತೊಟ್ನಳ್ಳಿ, ಎಚ್ ಎಸ್ ಬರಗಾಲಿ, ಎಂ. ಎನ್ ಸುಗಂಧಿ ಮಾತನಾಡಿದರು.

ಕೆ.ಪಿ.ಟಿ.ಸಿ.ಎಲ್. ನ ಎ.ಇ.ಇ. ಮಾಲಿ ಬುಕ್ಕೇಗಾರ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಗ್ರೇಡ್-1 ಕಾರ್ಯದರ್ಶಿ ಮಹಾನಂದಾ ಸಿಂಗೆ, ಲಲಿತಾ ಶಿವಶಂಕರ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು.

ಮಹಿಳಾ ಕ್ಷೇತ್ರದ ಪ್ರಮುಖರಾದ ರಾಜೇಶ್ವರಿ ಸಾಹುವಾಡಿ, ಪುಷ್ಪಾವತಿ ಕಟ್ಟಿ, ಮಧು ಎನ್ ಹಿಂದೊಡ್ಡಿ, ಉಮಾ ಗಚ್ಚಿನಮನಿ, ಡಾ. ಪೂಜಾ ಪಾಟೀಲ, ನಿರ್ಮಲಾ ಉಪ್ಪಿನ್ ಅವರನ್ನು ವಿಶೇಷವಾಗಿ ಸತ್ಕರಿಸಲಾಯಿತು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here