ಡಾ.ಪಂ.ಪುಟ್ಟರಾಜ ಕವಿ ಗವಾಯಿಗಳವರ ಜನ್ಮದಿನೋತ್ಸವ ಅಂಗವಾಗಿ ಕಾವ್ಯ ಕುಂಚ ಗಾಯನ 

0
30

ಕಲಬುರಗಿ: ಗಡಿನಾಡ ಸಂಗೀತ ಸೇವಾ ಸಂಸ್ಥೆ (ರಿ) ಕಲಬುರಗಿ ಇವರು ಗಾನಯೋಗಿ ಶಿವಯೋಗಿ ಡಾ. ಪಂ. ಪುಟ್ಟರಾಜ ಕವಿ ಗವಾಯಿಗಳವರ 110 ನೇ ಜನ್ಮದಿನೋತ್ಸವದ ಅಂಗವಾಗಿ ಕಾವ್ಯ ಕುಂಚ ಗಾಯನ ಸಾಂಸ್ಕøತಿಕ ಕಾರ್ಯಕ್ರಮಗಳು ನಗರದ ಕಲಾಮಂಡಳದಲ್ಲಿ ಮಾರ್ಚ 9 ರಂದು ಸಾಯಂಕಾಲ 4 ಗಂಟೆಗೆ ಹಮ್ಮಿಕೊಳ್ಳಲಾಗಿದೆ.

ಪಂ. ಪುಟ್ಟರಾಜ ಕವಿ ಗವಾಯಿಗಳವರ ವಿರಚಿತ ವಚನಗಳು, ಭಾವಗೀತೆ ಮತ್ತು ಭಕ್ತಿಗೀತೆಗಳ ಕಾವ್ಯ ಕುಂಚ ಗಾಯನ ಕಾರ್ಯಕ್ರಮಗಳು ಹಮ್ಮಿಕೊಳ್ಳಲಾಗಿದ್ದು, ಈ ಕಾರ್ಯಕ್ರಮದಲ್ಲಿ ಪಾಳಾದ ಷ.ಬ್ರ.ಡಾ.ಗುರುಮೂರ್ತಿ ಶಿವಾಚಾರ್ಯರು ಹಾಗೂ ಅಳ್ಳೊಳ್ಳಿಯ ಪರಮ ಪೂಜ್ಯ ಶ್ರೀ ಸಂಗಮನಾಥ ದೇವರು ದಿವ್ಯ ಸಾನಿಧ್ಯವನ್ನು ವಹಿಸಲಿದ್ದಾರೆ.

Contact Your\'s Advertisement; 9902492681

ಉದ್ಘಾಟಕರಾಗಿ ಹಿರಿಯ ರಾಜಕೀಯ ಮುಖಂಡರಾದ ಅಣ್ಣಾರಾವ ಧೂತ್ತರಗಾಂವ, ಅಧ್ಯಕ್ಷತೆಯನ್ನು ಜಲತಜ್ಞರಾದ ಡಾ. ಬಸವರಾಜ ಕಲಗುರ್ತಿ ಮಠ, ಮುಖ್ಯ ಅತಿಥಿಗಳಾಗಿ ಗೋದುತಾಯಿ ದೊಡ್ಡಪ್ಪ ಅಪ್ಪ ಅಪ್ಪ ಪದವಿ ಮಹಿಳಾ ಮಹಾವಿದ್ಯಾಲಯದ ಪ್ರಾಚಾರ್ಯೆ ಶ್ರೀಮತಿ ಜಾನಕಿ ಹೊಸೂರು. ಯುವ ಉದ್ಯಮಿಗಳಾದ ಶ್ರೀನಾಥ ಬಿರಾದಾರ. ಸಾಹಿತಿಗಳಾದ ಬಿ.ಎಚ್. ನಿರಗುಡಿ. ಪತ್ರಕರ್ತರಾದ ಡಾ.ಶಿವರಂಜನ ಸಂತ್ಯಂಪೇಟೆ. ಶರಣಬಸವ ವಿವಿಯ ಸಂಗೀತ ವಿಭಾಗದ ಡೀನ್‍ರಾದ ಪ್ರೊ.ರೇವಯ್ಯ ವಸ್ತ್ರದಮಠ. ಡಾ.ಮಲ್ಲಿಕಾರ್ಜುನ ಪೆÇೀಲಿಸ್ ಪಾಟೀಲ ಭಾಗವಹಿಸುವರು.

ಕಲಾವಿದರಾದ ಬಾಬುರಾವ ಕೋಬಾಳ. ಗುರುಶಾಂತಯ್ಯ ಸ್ಥಾವರಮಠ. ಶಿವಾನಂದ ಮಂದೆವಾಲ, ಕವಿತಾ ಪಾಟೀಲ, ರವಿಕುಮಾರ ಆಳಂದ, ಪ್ರಶಾಂತ ಗೋಲ್ಡ್‍ಸ್ಮೀತ್, ಹಣಮಂತ ತಳವಾರ, ವೀಣಾ ಮಠ, ಡಾ.ಕಾಮೇಶ ಕಮಲಾಪೂರ, ಬಸವರಾಜ ಶೃಂಗೇರಿ, ವಿಕಾಸ ಪಂಚಾಳ, ಸೂರ್ಯಕಾಂತ ಶಾಸ್ತ್ರಿ ಹಾಗೂ ಅನೇಕ ಕಲಾವಿದರು ಭಾಗವಹಿಸುವರು ಎಂದು ಸಂಸ್ಥೆಯ ಅಧ್ಯಕ್ಷರಾದ ವೀರಭದ್ರಯ್ಯ ಸ್ಥಾವರಮಠ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here