ಹೆಣ್ಣು ಸಂಸಾರದ ಕಣ್ಣು
=================
ದೈವಸ್ವರೂಪಿ ತಾಯಿ
ಪತಿಯ ಬಾಳಸಂಗಾತಿ ಮಡದಿ
ವಾತ್ಸಲ್ಯ ಮೂರ್ತಿ ಸಹೋದರಿ
ಕರುಳಿನ ಕುಡಿ ಮುದ್ದಿನ ಮಗಳು
ಅಜ್ಜನ ಚಿಗುರೆ ಮೊಮ್ಮಗಳು.
ಹೆಣ್ಣು ಹಲವು ಶಕ್ತಿಗಳ ಸಂಗಮ
ಮಮತೆ ಪ್ರೀತಿ ವಾತ್ಸಲ್ಯ ಸ್ನೇಹ
ಸೌಹಾರ್ದತೆ ಅಕ್ಕರೆ ಸಹನೆ,
ಮಾನವೀಯತೆ ಮೆರೆದ
ಸೃಷ್ಟಿಯ ಸುಂದರ ಕಲಾಕೃತಿ.
ಹೆಣ್ಣು ಕನಸೂ ಹೌದು
ವಾಸ್ತವವೂ ಹೌದು,
ಬಲವೂ ಹೌದು ಬುದ್ದಿಯೂ ಹೌದು,
ಮಹಾಕಾವ್ಯಗಳ ಪ್ರಧಾನ ಶಕ್ತಿಯೂ ಹೌದು.
ಭ್ರೂಣಹತ್ಯೆ ಅನಕ್ಷರತೆ ತಾರತಮ್ಯ,
ಅವಮಾನ ಅಗೌರವ ಅತ್ಯಾಚಾರ,
ಹೆಣ್ಣಿನ ಬವಣೆ ದಾರುಣ ಸ್ಥಿತಿ ಇಂದಿಗೂ ಕೂಡ
ಗೌರವಿಸುವ ಹೆಣ್ಣನು,
ಪ್ರೀತಿ ಪ್ರೇಮದ ಸಾಕ್ಷಾತ್ಕಾರ ಮೂರ್ತಿಯನ್ನಾಗಿ ನೋಡಿ
-ಕಾಶಿಬಾಯಿ. ಸಿ. ಗುತ್ತೇದಾರ