ನಾಗಪುರ; ಸಿಪಿಐ (ಎಂಎಲ್ )ರೆಡ್ ಸ್ಟಾರ್ ಪಕ್ಷವು ಮಾರ್ಚ್ 10 ರಂದು ನಾಗಪುರ ಬ್ಯಾರಿಸ್ಟರ್ ರಾಜಬಾಹು ಸಭಾಂಗಣದಲ್ಲಿ ಫ್ಯಾಸಿಸ್ಟ್ ವಿರೋಧಿ ಅಖಿಲ ಭಾರತ ಜನತಾ ಸಮಾವೇಶ ನಡೆಸಲಿದೆ ಎಂದು ಸಮಾವೇಶ ಸಂಘಟನಾ ಸಮಿತಿ ಸಮನ್ವಯಕ ಆರ್. ಮಾನಸಯ್ಯ ಹಾಗೂ ಕ್ರಾಂತಿಕಾರಿ ಸಾಂಸ್ಕೃತಿಕ ವೇದಿಕೆಯ ಪ್ರಧಾನ ಕಾರ್ಯದರ್ಶಿಯಾದ ತುಹಿನ್, ಇಂದು ನಾಗಪುರದಲ್ಲಿ ನಡೆದ ಪತ್ರಿಕಾ ಗೋಷ್ಠಿಯಲ್ಲಿ ಘೋಷಿಸಿದರು.
ದೇಶದ ಪ್ರಜಾಪ್ರಭುತ್ವ, ಸಂವಿಧಾನ, ಜಾತ್ಯಾತೀತ ಹಾಗೂ ಸಾಮಾಜಿಕ ಮೀಸಲಾತಿ ಮೇಲೆ ಹಿಂದುತ್ವವಾದಿ ಫ್ಯಾಸಿಸ್ಟ್ ದಾಳಿಯನ್ನು ಹಿಮ್ಮೆಟ್ಟಿಸಬೇಕಾಗಿದೆ. ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಫ್ಯಾಸಿಸ್ಟ್ ಬಿಜೆಪಿಯನ್ನು ಒಂಟಿಯಾಗಿಸಿ ಸೋಲಿಸಬೇಕಾಗಿದೆ. ಪ್ರತಿಯಾಗಿ, ದಲಿತ ಮುಸ್ಲಿಂ ಆದಿವಾಸಿ ಮುಂತಾದ ದಮನಿತ ಸಮುದಾಯಗಳು ಹಾಗೂ ರೈತ ಹಾಗೂ ಕಾರ್ಮಿಕ ಮುಂತಾದ ಶೋಷಿತ ವರ್ಗಗಳು ಒಗ್ಗೂಡಿ ಚುನಾವಣಾ ಹೋರಾಟವನ್ನು ಗೆಲ್ಲಬೇಕಾಗಿದೆ.
ಈ ಫ್ಯಾಸಿಸ್ಟ್ ವಿರೋಧಿ ಐಕ್ಯ ಹೋರಾಟದ ರೂಪರೇಷೆಗಳನ್ನು ನಾಗಪುರ ಸಮಾವೇಶವು ನಿರ್ಧರಿಸಲಿದೆ. ಫ್ಯಾಸಿಸ್ಟ್ ಬಿಜೆಪಿಯನ್ನು ಸುತ್ತುವರಿದು ಸೋಲಿಸಲು ಬೇಕಾದ ಕಾರ್ಯತಂತ್ರವನ್ನು ನಾಗಪುರ ಘೋಷಣೆ ಎಂದೇ ಪ್ರಕಟಿಸಲಾಗುತ್ತದೆ.
ಹಾಗಾಗಿ,ಈ ಮಹತ್ವದ ಅಖಿಲ ಭಾರತ ಸಮಾವೇಶಕ್ಕೆ ಕ್ರಾಂತಿಕಾರಿ ಎಡ ಪಕ್ಷಗಳ, ಸಂವಿಧಾನ ಪರ ದಲಿತ ಹಾಗೂ ಮುಸ್ಲಿಂ ಸಂಘಟನೆಗಳ, ವಿದ್ಯಾರ್ಥಿ ಯುವಜನ ಮಹಿಳಾ ಸಂಘಟನೆಗಳ ಪ್ರತಿನಿಧಿ ಮುಖಂಡರು ಭಾಗವಹಿಸಲಿದ್ದಾರೆಂದು ಪ್ರಕಟಸಿದರು. ಇಂದಿನ ಪತ್ರಿಕಾಗೋಷ್ಠಿಯಲ್ಲಿ, ಸಮಾವೇಶ ಸ್ವಾಗತ ಸಮಿತಿಯ ಅಧ್ಯಕ್ಷ ಅಡ್ವಕೇಟ್ ಅನಿಲ್ ಕಾಳೆ, ಕಾರ್ಯದರ್ಶಿ ಬಂಡು ಮೇಸ್ರಾಂ ಮುಂತಾದವರು ಉಪಸ್ಥಿತರಿದ್ದರು.