ಪರೋಪಕಾರ ಗುಣ ಬೆಳೆಸಿಕೊಂಡಿರುವ ಮಹಿಳೆಯಿಂದ ಉತ್ತಮ ಸಮಾಜ ನಿರ್ಮಾಣಕ್ಕೆ ಮುನ್ನುಡಿ

0
136

ಕಲಬುರಗಿ: ಸಹನೆ, ತಾಳ್ಮೆ ಹಾಗೂ ಪರೋಪಕಾರದ ಗುಣ ಬೆಳೆಸಿಕೊಂಡಿರುವ ಮಹಿಳೆ ಉತ್ತಮ ಸಮಾಜ ನಿರ್ಮಾಣಕ್ಕೆ ಮುನ್ನುಡಿ ಬರೆದಿದ್ದಾಳೆ ಎಂದು ಶರಣಬಸವ ವಿಶ್ವವಿದ್ಯಾಲಯದ ಪ್ರಾಧ್ಯಾಪಕಿ ಡಾ. ಸಾರಿಕಾದೇವಿ ಕಾಳಗಿ ಹೇಳಿದರು.

ಅಂತರಾಷ್ಟ್ರೀಯ ಮಹಿಳಾ ದಿನದಂಗವಾಗಿ ತಾಲೂಕಾ ಕನ್ನಡ ಸಾಹಿತ್ಯ ಪರಿಷತ್ತು ನಗರದ ಕನ್ನಡ ಭವನದ ಸುವರ್ಣ ಸಭಾ ಭವನದಲ್ಲಿ ಶುಕ್ರವಾರ ಆಯೋಜಿಸಿದ ಕವಯಿತ್ರಿ ಕಾವ್ಯಸಿರಿ ಎಂಬ ಮಹಿಳಾ ಕವಿಗೋಷ್ಠಿಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಕನ್ನಡ ಸಾಹಿತ್ಯ ಪರಿಷತ್ತು ಜಿಲ್ಲೆಯಲ್ಲಿ ಸಮಾಜಮುಖಿಯಾಗಿ ಕಾರ್ಯ ಮಾಡುತ್ತಿದೆ. ಪ್ರತಿಭೆಗಳಿಗೆ ಉತ್ತಮ ಬೆಳಕು ಕೊಡುವ ಕಾರ್ಯ ನಿರಂತರವಾಗಿ ಮಾಡುತ್ತಿದೆ ಎಂದರು.

Contact Your\'s Advertisement; 9902492681

ಜಿಲ್ಲಾ ಕಸಾಪ ಅಧ್ಯಕ್ಷ ವಿಜಯಕುಮಾರ ಪಾಟೀಲ ತೇಗಲತಿಪ್ಪಿ ಮಾತನಾಡಿ, ಮಹಿಳೆ ಇಂದು ಏಲ್ಲ ರಂಗಗಳಲ್ಲೂ ದಾಪುಗಾಲಿಟ್ಟು ಉನ್ನತ ಸಾಧನೆ ಮಾಡುತ್ತಿರುವುದು ಆ ತಾಯಿಯ ಶಕ್ತಿಯ ಪ್ರತೀಕವಾಗಿದೆ. ಪರಿಷತ್ತು ಸಾಹಿತ್ಯಿಕ ಚಟುವಟಿಕೆಗಳ ಜತೆಗೆ ಸಾಮಾಜಿಕ ಕಾರ್ಯಗಳಿಗೂ ಆದ್ಯತೆ ಕೊಡಲಾಗುತ್ತಿದೆ ಎಂದರು.

ತಾಲೂಕಾ ಕಸಾಪ ಅಧ್ಯಕ್ಷ ಗುರುಬಸಪ್ಪ ಸಜ್ಜನಶೆಟ್ಟಿ ಮಾತನಾಡಿ, ಇಂದಿನ ಜಾಗತೀಕರಣದ ದಿನಗಳಲ್ಲಿ ಮಹಿಳೆಯರಿಗೆ ಹಲವು ಸವಾಲುಗಳು ಎದುರಾಗುತ್ತಿವೆ. ಇವುಗಳನ್ನು ಧೈರ್ಯದಿಂದ ಎದುರಿಸಿ ಮುಂದೆ ಬರಬೇಕು. ಈ ನಿಟ್ಟಿನಲ್ಲಿ ಪರಿಷತ್ತಿನ ತಾಲೂಕಾ ಘಟಕದ ವತಿಯಿಂದ ಮಹಿಳೆಯರಲ್ಲಿ ಆತ್ಮಸ್ಥೈರ್ಯ ತುಂಬುವ ಕಾರ್ಯ ಇಂಥ ಕಾರ್ಯಕ್ರಮಗಳ ಮೂಲಕ ಮಾಡಲಾಗುತ್ತಿದೆ. ಮುಂದಿನ ದಿನಗಳಲ್ಲಿ ಮರೆಯಾಗುತ್ತಿರುವ ಜನಪದ ಹಾಡುಗಳನ್ನು ಜೀವಂತವಾಗಿಡಿಸುವ ಕಾರ್ಯ ಮಾಡುತ್ತೇವೆ ಎಂದರು.

ಹಿರಿಯ ಸಾಹಿತಿ ಡಾ. ವಾಸುದೇವ ಸೇಡಂ ಅಧ್ಯಕ್ಷತೆ ವಹಿಸಿದ್ದರು. ಪ್ರಮುಖರಾದ ಈರಮ್ಮ ಅವಧೂತಮಠ, ಶಿವಲೀಲಾ ಶಾಸ್ತ್ರೀ, ನಂದಿನಿ ಸನ್ಬಾಲ್, ಕುಪೇಂದ್ರ ಬರಗಾಲಿ, ವಿಶ್ವನಾಥ ಯನಗುಂಟಿ, ವಿಶಾಲಾಕ್ಷಿ ಮಾಯಣ್ಣವರ್, ಶರಣರಾಜ್ ಛಪ್ಪರಬಂದಿ, ಧರ್ಮಣ್ಣ ಎಚ್ ಧನ್ನಿ, ರಾಜೇಂದ್ರ ಮಾಡಬೂಳ, ಶರಣು ಹಾಗರಗುಂಡಗಿ, ಮಲ್ಲಿಕಾರ್ಜುನ ಇಬ್ರಾಹಿಂಪುರ, ಕವಿತಾ ಕಾವಳೆ, ಸುನೀತಾ ಮಾಳಗಿ, ಭಾಗ್ಯಶ್ರೀ ಮರಗೋಳ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

ವಿವಿಧ ಕ್ಷೇತ್ರದ ಪ್ರಮುಖರಾದ ಸವಿತಾ ಸಜ್ಜನ್, ನೀತಾ ಡಿ ಕಾಬಾ, ಲಕ್ಷ್ಮೀ ಲೋಕೇಶ ತೆಲ್ಲೂರ, ಅನ್ನಪೂರ್ಣ ಮಾಲಿಪಾಟೀಲ, ಬಸವರಾಜೇಶ್ವರಿ ಸಿ ಪಸಾರ್ ಅವರನ್ನು ಸತ್ಕರಿಸಲಾಯಿತು.

ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಕವಿಗಳು ಪ್ರಸ್ತುತ ಸನ್ನಿವೇಶದಲ್ಲಿ ಸ್ತ್ರೀ ಮೇಲೆ ನಡೆಯುತ್ತಿರುವ ಅನೇಕ ರೀತಿಯ ಶೋಷಣೆಗಳ ಭಗ್ಗೆ ಕವನಗಳು ವಾಚಿಸಿ ಜನಜಾಗೃತಿ ಮೂಡಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here