ನಾಳೆ ಕಲಬುರಗಿಯಲ್ಲಿ 5ನೇ ಸೀರತ್ ಉನ್ ನಬಿ ಪ್ರತಿಭಾ ಪುರಸ್ಕಾರ ವಿತರಣೆ: ಸಾಧಕರಿಗೆ ಸನ್ಮಾನ

0
37

ಕಲಬುರಗಿ: ಕರ್ನಾಟಕ ಸೀರತ್ ಉನ್ ನಬಿ ಸ್ಟಡೀ ಮತ್ತು ರಿಸರ್ಚ್ ಸೆಂಟರ್, ಆಲ್ ಇಂಡಿಯಾ ಮಿಲ್ಲಿ ಕೌನ್ಸಿಲ್ ಕೇಂದ್ರೀಯ ಹಾಗೂ ಜಿಲ್ಲಾ ಘಟಕದ ಸಂಯುಕ್ತ ಆಶ್ರಯದಲ್ಲಿ ಮಾರ್ಚ್ 10 ರಂದು 5ನೇ ವಾರ್ಷಿಕ ಸೀರತ್ ಉನ್ ನಬೀ ಸ್ಪರ್ಧಾ ವಿಜೇತರಿಗೆ ಬಹುಮಾನ ವಿತರಣೆ ಹಾಗೂ ಹಜರತ್ ಸೈಯದ್ ಖುಸ್ರೋ ಹುಸೇನಿ ಮತ್ತು ಖಾಲಿದ್ ಸೈಫುಲ್ಲಾ ರಹಿಮಾನರವರಿಗೆ ಸನ್ಮಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಕರ್ನಾಟಕ ಸೀರತ್ ಉನ್ ನಬಿ ಸ್ಟಡೀ & ರಿಸರ್ಚ್ ಸೆಂಟರ್ ಅಧ್ಯಕ್ಷರಾದ ಮೊಹಮ್ಮದ್ ಅಸಗರ್ ಚುಲಬುಲ್ ತಿಳಿಸಿದ್ದಾರೆ.

ಸೀರತ್ ಉನ್ ನಬಿ ಸ್ಪರ್ಧೇಯಲ್ಲಿ ಈ ವರ್ಷ ಸುಮಾರು 3000 ಮಕ್ಕಳು ಪಾಲ್ಗೊಂಡಿದ್ದು, ಈ ಸೀರತ್ ಸ್ಪರ್ಧೆಯಲ್ಲಿ, ಖಿರಾತ್, ಹಾದೀಸ್, ಖುರಾನ್ ಕ್ವೀಜ್, ಸೀರತ್ ಕ್ವೀಜ್ ಬಗ್ಗೆ ಲೇಖನ ಮತ್ತು ಸೀರತ್ ಬಗ್ಗೆ ಭಾಷಣ ಸ್ಪರ್ಧೆ ಆಯೋಜಿಸಲಾಗಿತ್ತು. ಸ್ಪರ್ಧಾ ವಿಜೇತರಿಗೆ ಪ್ರಥಮ ಬಹುಮಾನ ರೂ. 6000/-, 2ನೇ ಬಹುಮಾನ ರೂ. 4000/-, 3ನೇ ಬಹುಮಾನ ರೂ. 3000/- ಮತ್ತು 4ನೇ ಬಹುಮಾನ ರೂ. 2000/- ರಂತೆ, 7 ಸ್ಪರ್ಧೆಗಳಲ್ಲಿ ಒಟ್ಟಾರೆ ರೂ. 225000/- ನಗದು ಬಹುಮಾನ ನೀಡಲಾಗುತ್ತಿದೆ.

ಶುಕ್ರವಾರ ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಭಾನುವಾರ ಬೆಳಿಗ್ಗೆ 10.30 ಗಂಟೆಗೆ ಟಿಪ್ಪು ಸುಲ್ತಾನ್ ಚೌಕ್ ಹತ್ತಿರದಲ್ಲಿರುವ ಮೊಘಲ್ ಗಾರ್ಡನ್ ಫಂಕ್ಷನ್ ಹಾಲ್ ಆಯೋಜಿಸಲಾಗಿದ್ದು ಮೊಹಮ್ಮದ್ ಅಸಗರ್ ಚುಲಬುಲ್ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ ಎಂದು ಮಾಹಿತಿ ನೀಡಿದರು.

Contact Your\'s Advertisement; 9902492681

ಬಹುಮಾನ ಪಡೆದಿರುವ ಅಭ್ಯರ್ಥಿಗಳಿಗೆ ಪ್ರಶಸ್ತಿ ಟ್ರೋಫಿ, ಪ್ರಮಾಣ ಪತ್ರದೊಂದಿಗೆ ಗಿಫ್ಟ್ ಕೊಡಲಾಗುವುದು ಮತ್ತು ಉಳಿದಿರುವ ಸುಮಾರು 2500 ಅಭ್ಯಥಿಗಳಿಗೆ ಸ್ಪರ್ಧೆಗಳಲ್ಲಿ ಭಾಗವಹಿಸಿರುವ ಅಭ್ಯರ್ಥಿಗಳಿಗೆ ಪ್ರಮಾಣ ಪತ್ರ ಮತ್ತು ಗಿಫ್ಟ್ ನೀಡಲಾಗುವುದೆಂದು ತಿಳಿಸಿದರು.

ರಂಜಾನ್ ಸಮಿಪಿಸಿರುವ ಹಿನ್ನೆಲೆಯಲ್ಲಿ ಕಾರ್ಯಕ್ರಮದಲ್ಲಿ ಭಾಗವಹಿಸದೇ ಇರುವ ಮಕ್ಕಳಗಳ ಬಹುಮಾನ ಮತ್ತು ಪ್ರಮಾಣ ಪತ್ರಗಳನ್ನು ಸಂಬಂಧಪಟ್ಟ ಶಾಲೆಗೆ ಕಳುಹಿಸಿಕೊಡಲು ಸಾಧ್ಯವಿಲ್ಲದ. ಆದರಿಂದ ಕಡ್ಡಾಯವಾಗಿ ಎಲ್ಲಾ ಮಕ್ಕಳು ತಮ್ಮ ಬಹುಮಾನ ಮತ್ತು ಪ್ರಮಾಣ ಪತ್ರಗಳನ್ನು10 ರಂದು ನಡೆಯಲಿರುವ ಕಾರ್ಯಕ್ರಮದಲ್ಲಿ ಪಡೆಯಬೇಕೆಂದು ಮನವಿ ಮಾಡಿದ್ದಾರೆ.

ಕಾರ್ಯಕ್ರಮದಲ್ಲಿ ಮುಸ್ಲಿಂ ಪಸ್ರ್ನಲ್ ಲಾ ಬೋರ್ಡ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಮೌಲಾನಾ ಖಾಲಿದ ಸೈಫುಲ್ಲಾ ರಹಮಾನಿ ಮತ್ತು ಉಪಾಧ್ಯಕ್ಷರಾಗಿ ಆಯ್ಕೆಯಾಗಿರುವ ಸೈಯದ್ ಶಾ ಗೇಸುದರಾಜ್ ಖುಸ್ರೋ ಹುಸೇನಿ, ಉಸ್ಮಾನಿಯಾ ಯೂನಿವರ್ಸಿಟಿಯ ಅರೆಬಿಕ್ ವಿಭಾಗದ ಮಾಜಿ ಅಧ್ಯಕ್ಷ ಡಾ. ಮುಸ್ತಫಾ ಶರೀಫ್ ಹೈದ್ರಾಬಾದ್, ಸಫಾ ಬೈತುಲ್ ಮಾಲ್ ಹೈದ್ರಾಬಾದ್ ಅಧ್ಯಕ್ಷ ಮತ್ತು ಮೆಂಬರ-ಓ-ಮೆಹರಾಬ ಫೌಂಡೇಷನ್ ಇಂಡಿಯಾದ ಅಧ್ಯಕ್ಷರಾಗಿರುವ ಮೌಲಾನಾ ಗಯಾಸ್ ಅಹ್ಮದ್ ರಶ್ಶಾದಿ ಅವರ ಸಾಧಕರಿಗೆ ಸನ್ಮಾನಿಸಲಾಗುವುದು ಎಂದು ತಿಳಿಸಿದರು.

ಸುದ್ದಿ ಗೋಷ್ಠಿಯಲ್ಲಿ ಕರ್ನಾಟಕ ಸೀರತ್ ಉನ್ ನಬಿ ಸ್ಟಡಿ & ರಿಸರ್ಚ್ ಸೆಂಟರ ಕಾರ್ಯದರ್ಶಿ ಹಾಗೂ ಹಿರಿಯ ಪತ್ರಕರ್ತ ಅಜೀಜುಲ್ಲಾ ಸರ್ಮಸ್ತ್ ಮಾತನಾಡಿ ಸೆಂಟರ ನಿರ್ಮಾಣಕ್ಕಾಗಿ ನಗರದ ಹೊರ ವಲಯದಲ್ಲಿ ಹುಮನಾಬಾದ್ ರಸ್ತೆ ಪಕ್ಕದಲ್ಲಿ ನಿವೇಶನ ಪಡೆದಿರುವುದಾಗಿ ಮಾಹಿತಿ ನೀಡಿದರು.

ನಾಲ್ಕು ತಿಂಗಳಲ್ಲಿ ಸದರಿ ನಿವೇಶನದಲ್ಲಿ ಮಸೀದಿ, ರಿಸರ್ಚ್ ಸೆಂಟರ, ಗ್ರಂಥಾಲಯ ಒಳಗೊಂಡ ಕಟ್ಟಡ ನಿರ್ಮಾಣ ಮಾಡಲು ತೀರ್ಮಾನಿಸಲಾಗಿದೆ ಎಂದು ತಿಳಿಸಿದರು.

ಸೀರತ್ ಕುರಿತು ಸೆಮಿನಾರ್, ವರ್ಕಶಾಪ್ ಅಯೋಜಿಸಿ ಮಕ್ಕಳಲ್ಲಿ ಮತ್ತು ಹಿರಿಯರಿಗೆ ಸೀರತ್ ಬಗ್ಗೆ ವಿಷಯಗಳನ್ನು ಸಾರ್ವಜನಿಕರಿಗೆ ತಲುಪಿಸುವ ಮೂಲಕ ಒಳ್ಳೆ ವಾತಾರಣ ನಿರ್ಮಾಣ ಮಾಡುವ ಉದ್ದೇಶ ಇದಾಗಿದೆ.

ಸೀರತ್ ಸ್ಪರ್ಧೆಯನ್ನು ಮೊದಲು ಬಾರಿ ಹಜ್ ಕಮೇಟಿ ನಯಾ ಮೊಹೆಲ್ಲಾದಲ್ಲಿ ಆಯೋಜಿಸಲಾಗುತ್ತಿತ್ತು, ಆದರೆ ಈ ವರ್ಷ ಮಕ್ಕಳ ಸಂಖ್ಯೆ ಹೆಚ್ಚಾಗಿರುವುದರಿಂದ ಸ್ಪರ್ಧೆಗೆ ಐಡಿಯಲ್ ಇಂಗ್ಲೀಷ್ ಶಾಲೆಯ ಜಲೀಲ್ ಕಂಪೌಂಡನಲ್ಲಿ ಅಬ್ದುಲ್ ರಹೀಮ್ ಮಾಮೂಪೂರಿರವರ ಸಹಕಾರದಿಂದ ಆಯೋಜಿಸಲಾಗಿದೆ ಎಂದು ಇಂಜಿನಿಯರಾಗಿರುವ ಮುಸ್ತಾಕ್ ಅಹ್ಮದ ಮಾಹಿತಿ ನೀಡಿದರು.

ಕಾರ್ಯಕ್ರಮದಲ್ಲಿ ನಗರದ ಸಾರ್ವಜನಿಕರು, ಸ್ಪರ್ಧೆಯಲ್ಲಿ ಮಕ್ಕಳು, ಪಾಲಕರು, ಶಾಲೆಯ ಶಿಕ್ಷಕರು ಸೇರಿದಂತೆ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮ ಯಶಸ್ವಿಗೊಳಿಸಲು‌ ಮನವಿ ಮಾಡಿದರು.

ಸುದ್ದಿ ಗೋಷ್ಠಿಯಲ್ಲಿ ಮೌಲಾನಾ ಮೊಹಮ್ಮದ್ ಇಸ್ಮಾಯಿಲ್ ಮುದ್ದಸ್ಸಿರ್, ಅತೀಖ್ ಏಜಾಜ್, ಅಫಜಾಲ್ ಮಹಮೂದ್ ಮತ್ತು ಸೈಯದ್ ಅರ್ಸಲಾನ್ ಅಹ್ಮದ ವಜೀರ ಸೇರಿದಂತೆ ಅನೇಕರು ಹಾಜರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here