ಕಲಬುರಗಿ: ನೂತನ ವಂದೇ ಭಾರತ್ ರೈಲು ಗಾಡಿ ಇಂದು (ಮಾರ್ಚ್12ರಂದು ಮಂಗಳವಾರ)ಬೆಳಗ್ಗೆ 9.15ಕ್ಕೆ ಉದ್ಘಾಟನೆಗೊಂಡು ಬೆಂಗಳೂರು (ಬೈಯ್ಯಪ್ಪನಹಳ್ಳಿ)ಸಂಚಾರ ಆರಂಭಿಸಲಿದೆ ಎಂದು ಲೋಕಸಭಾ ಸದಸ್ಯ ಡಾ. ಉಮೇಶ್ ಜಿ ಜಾಧವ್ ತಿಳಿಸಿದ್ದಾರೆ.
ಪ್ರಧಾನಮಂತ್ರಿಯವರು ಬೆಳಗ್ಗೆ 9.15ಕ್ಕೆ ಹಸಿರು ನಿಶಾನೆ ತೋರಿಸಿ ಚಾಲನೆ ನೀಡಲಿದ್ದಾರೆ. 9.40ಕ್ಕೆ ವಾಡಿ,10.53ಕ್ಕೆ ರಾಯಚೂರು, 11.08ಕ್ಕೆಮಂತ್ರಾಲಯ ರೋಡ್,12.25ಕ್ಕೆ ಗುಂತಕಲ್,1.28 ಕ್ಕೆ ಅನಂತಪುರ, 2.50ಕ್ಕೆ ಧರ್ಮಾವರಂ, 4.45ಕ್ಕೆ ಯಲಹಂಕ ಹಾಗೂ 6ಗಂಟೆಗೆ ಬೆಂಗಳೂರು (ಬೈಯ್ಯಪ್ಪನಹಳ್ಳಿ ) ತಲುಪಲಿದೆ. ನಂತರದ ದಿನಗಳಲ್ಲಿ ಯಥಾ ಪ್ರಕಾರ ಬೆಳಗ್ಗೆ 5.15 ಕಲಬುರಗಿ ಯಿಂದಲೂ 2.40ಕ್ಕೆ ಬೆಂಗಳೂರಿನಿಂದಲೂ ಸಂಚಾರ ಪ್ರಾರಂಭಿಸಲಿದೆ ಎಂದು ಜಾಧವ್ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ವಂದೇ ಭಾರತ್ ರೈಲು ಗಾಡಿ ಯಾದಗಿರಿ ರೈಲು ನಿಲ್ದಾಣದಲ್ಲಿ ನಿಲುಗಡೆ ಮಾಡಲು ಪ್ರಯಾಣಿಕರಿಂದ ಒತ್ತಾಯ ಬಂದಿದ್ದು ಈಗಾಗಲೇ ರೈಲ್ವೆ ಇಲಾಖೆಗೆ ಪತ್ರ ಬರೆಯಲಾಗಿದೆ.ಮುಂದಿನ ದಿನಗಳಲ್ಲಿ ಪರಿಹಾರ ಕಲ್ಪಿಸಲು ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಜಾಧವ್ ಭರವಸೆ ನೀಡಿದ್ದಾರೆ.
ನಂತರ ಸಂಜೆ ಕಲಬುರಗಿ ರೈಲ್ವೆ ನಿಲ್ದಾಣಕ್ಕೆ ಆಗಿಮಿಸಿ ವಂದೇ ಭಾರತ್ ರೈಲನ್ನು ವಿಕ್ಷಿಸಿದರು. ಈ ಸಂದರ್ಭದಲ್ಲಿ ಕಲಬುರಗಿ ಬಿಜೆಪೆ ಅಧ್ಯಕ್ಷ ಚಂದು ಪಾಟೀಲ್, ಗ್ರಾಮೀಣ ಘಟಕದ ಅಧ್ಯಕ್ಷ ರದ್ದೇವಾಡಿ, ವಿಧಾನ ಪರಿಷತ್ ಮಾಜಿ ಸದಸ್ಯ ಮರನಾಥ್ ಪಾಟೀಲ್ ಸೇರಿದಂತೆ ಹಲವರು ಇದ್ದರು.