ಕಲಬುರಗಿ: ಚುನಾವಣಾ ಇಲೆಕ್ಟ್ರಾಲ್ ಬಾಂಡ್ ವಿವರ ನೀಡುವಳಿ ಹಿಂದೆಟ್ಟು ಹಾಕಿ, ಸಾರ್ವಜನಿಕರ ಹಣವನ್ನು ಪಕ್ಷದ ಪರವಾಗಿ ಖರ್ಚು ಮಾಡಲು ಸಹಕರಿಸುತ್ತಿರುವ SBI ಬ್ಯಾಂಕ್ ವಿರುದ್ದ ಜಿಲ್ಲಾ ಯುವ ಕಾಂಗ್ರೆಸ್ ವತಿಯಿಂದ ಪ್ರತಿಭಟನೆ ಹಮ್ಮಿಕೊಳ್ಳಲಾಯಿತು.
ಸರ್ವೊಚ್ಛ ನ್ಯಾಯಾಲಯ ಆದೇಶ ಮಾಡಿದರೂ ಎಸ್‍ಬಿಐ ಬಾಂಡ್‍ಗಳನ್ನು ಬ್ಯಾಂಕ್ ಗ್ರಾಹಕರಿಗೆ ವಿತರಣೆ ಮಾಡದೇ ಸರಕಾರದಂತೆ ಏಕ ನಿರ್ಣಯ ನಡೆಸುತ್ತಿರುವದನ್ನು ಖಂಡಿಸಿ ಜಿಲ್ಲಾ ಯುವ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಶಿವಾನಂದ ಆರ್. ಹೊನಗುಂಟಿ ಅವರ ನೇತೃತ್ವದಲ್ಲಿ ನಗರದ ಎಸ್‍ಬಿಐ ಬ್ಯಾಂಕ್ ಎದುರುಗಡೆ ಪ್ರತಿಭಟನೆ ನಡೆಸುವ ಮೂಲಕ ಎಸ್‍ಬಿಐ ಬ್ಯಾಂಕ್ ಯಾರ ಅಡಿಯಲ್ಲಿ ಕೆಲಸ ಮಾಡುತ್ತಿದೆ ? ಇದು ಪ್ರಧಾನಿ ನರೇಂದ್ರ ಮೋದಿ ಇವರ ಕೈಗೊಂಬೆಯಾಗಿದೆಯಾ ? ಸ್ವೀಸ್ ಬ್ಯಾಂಕ್ ದಾಖಲೆ ಬಹಿರಂಗ ಮಾಡುತ್ತೇವೆಂದು ಅಧಿಕಾರಕ್ಕೆ ಬಂದ ಕೇಂದ್ರ ಬಿಜೆಪಿ ಸರಕಾರದ ಪ್ರಧಾನಿ ನರೇಂದ್ರ ಮೋದಿ ಈಗ ಎಸ್‍ಬಿಐ ದಾಖಲೆ ಬಹಿರಂಗಪಡಿಸಲು ಗಡಗಡ ನಡುಗುತ್ತಿದ್ದಾರೆ ಏಕೆ ? ಸುಪ್ರೀಂ ಕೋರ್ಟ ಆದೇಶ ಪಾಲಿಸದೇ ಇರುವ ಎಸ್‍ಬಿಐ ಬ್ಯಾಂಕ್‍ಗೆ ಧಿಕ್ಕಾರ ಎಂದು ಅವರು ಪ್ರತಿಭಟನೆಯ ಮೂಲಕ ಪ್ರಧಾನಿ ನರೇಂದ್ರ ಮೋದಿಯವರನ್ನು ಹಾಗೂ ಕೇಂದ್ರ ಬಿಜೆಪಿ ಸರಕಾರವನ್ನು ಹೋನಗುಂಟಿಯವರು ತೀವ್ರವಾಗಿ ಖಂಡಿಸಿದ್ದಾರೆ.
ಈ ಸಂದರ್ಭದಲ್ಲಿ ಯುವ ಕಾಂಗ್ರೆಸ್ ರಾಜ್ಯ ಉಪಧ್ಯಕ್ಷ ಈರಣ್ಣ ಝಳಕಿ, ಯುವ ಮುಖಂಡರಾದ ಗೌತಮ್ ಕರಿಕಲ್, ಪರಶುರಾಮ್ ನಾಟಿಕಾರ್, ಶಕೀಲ ಸರಡಗಿ, ಅಶೋಕ ಕಪನೂರ, ಅಮರ ಶಿರವಾಳ, ಉಲ್ಲಾಸ್ ಪಾಟೀಲ್, ಸೈಯದ್ ರಕಿಬ್, ಟೈಗರ್ ವಿಗ್ನೇಶ್, ಸಂಘಪಾಲ್, ಗಣೇಶ್ ನಾಗನಳ್ಳಿ, ಶೇಖ ಸಮರಿನ್, ಸಂಪೂರ್ಣ, ರಾಮ ಪ್ರಸಾದ್ ಕಾಂಬಳೆ, ಚಂದ್ರು ನೆಲ್ಲೂರ್, ರಮೇಶ ಹಡಪದ, ಸಂಜಯ ಇದ್ದರು.