ಮತದಾನದ ಬಗ್ಗೆ ಸಾರ್ವಜನಿಕಯಲ್ಲಿ ಜಾಗೃತಿ ಮೂಡಿಸಬೇಕು: ಸಿ.ಇ.ಓ ಭಂವರ ಸಿಂಗ್ ಮೀನಾ

0
21

ಕಲಬುರಗಿ: ಮತದಾನ ಪವಿತ್ರ ಕರ್ತವ್ಯವಾಗಿದ್ದು ಇದರ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಬೇಕು ಎಂದು ಜಿಲ್ಲಾ ಪಂಚಾಯತ ಮುಖ್ಯಕಾರ್ಯನಿರ್ವಾಹಕ ಅಧಿಕಾರಿ ಭಂವರ ಸಿಂಗ್ ಮೀನಾ ಪದವಿ ಪೂರ್ವ ಮೊದಲನೆಯ ವರ್ಷದ ವಿದ್ಯಾರ್ಥಿಗಳಿಗೆ ತಿಳಿಸಿದರು.

ಅವರು ಮಂಗಳವಾರಂದು ಸರ್ವಜ್ಞ ಪದವಿ ಪೂರ್ವ ಕಾಲೇಜ್‌ನಲ್ಲಿ ಭಾರತ ಚುನಾವಣಾ ಆಯೋಗ, ಜಿಲ್ಲಾಡಳಿತ ಜಿಲ್ಲಾ ಸ್ವೀಪ್ ಸಮಿತಿ ಕಾರ್ಯಕ್ರಮಕ್ಕೆ ಸಸಿಗೆ ನೀರು ಹಾಕುವ ಮೂಲಕ ಚಾಲನೆ ನೀಡಿದರು.

Contact Your\'s Advertisement; 9902492681

18 ವರ್ಷ ತುಂಬಿದ ಪ್ರತಿಯೊಬ್ಬರು ಮತದಾನದ ಹಕ್ಕು ಹೊಂದಿದ್ದಾರೆ.ಫಾರಂ.ನ೬ ಪಡೆದು ಅರ್ಜಿಸಲ್ಲಿಸಬೇಕು ಅದಕ್ಕೆ ವಾಸಸ್ಥಳ ಹಾಗೂ ಇನ್ನಿತರ ದಾಖಲೆಗಳು ಹಚ್ಚಿ ಬಿ.ಎಲ್.ಓ ಗೆ ನೀಡಿದರೆ. ವೋಟರ್ ಐಡಿ ಕಾರ್ಡ್ ಸಿಗುತ್ತದೆ. ತಾವುಗಳ ಮತದಾನ ಮಾಡಬಹುದು ಎಂದರು.

ಈಗಾಗಲೇ ಲೋಕಸಭಾ ಚುನಾವಣೆ ಬರುತ್ತಿದ್ದು, ಮತದಾನ ಮಾಡಲು ಎಲ್ಲರಿಗೂ ಅವಕಾಶ ಕಲ್ಪಿಸಲಾಗಿದೆ ಇದರ ಸದುಪಯೋಗ ಪ್ರತಿಯೊಬ್ಬರು ಪಡೆದುಕೊಳ್ಳಬೇಕೆಂದರು.
ಲೋಕಸಭಾ ಚುನಾವಣೆಗೆ ಹೆಚ್ಚಿನ ಪ್ರತಿಶತ ಬರಬೇಕಾದರೆ ತಾವೆಲ್ಲರೂ ಜಾಗೃತಿ ಮೂಡಿಸುವ ಕೆಲಸ ಮಾಡಬೇಕೆಂದರು.

ಈಗಾಗಲೇ ನಾವು ಕೆಲವೊಂದು ಜಾಥಾ ಕಾರ್ಯಕ್ರಮಗಳು ಮಾಡುತ್ತಿದ್ದೇವೆ ತಾವುಗಳು ಯಾರೆ ೧೮ ವರ್ಷಗಳಾದರೆ ನೀವು ನಿಮ್ಮ ಹೆಸರುಗಳನ್ನು ಮತದಾರರ ಪಟ್ಟಿಯಲ್ಲಿ ಸೇರಿಸಬೇಕೆಂದರು.

ಚುನಾವಣೆ ದಿನದಂದು ಎಲ್ಲರಿಗೂ ರಜೆ ಸಿಗುತ್ತದೆ ಎಷ್ಟು ಜನರು ಮತದಾನ ಮಾಡುವುದನ್ನು ಬಿಟ್ಟು ಊರುಗಳಿಗೆ ಹೋಗುತ್ತಾರೆ ಅದನ್ನು ಬಿಟ್ಟು ಮತದಾನ ಮಾಡಬೇಕೆಂದರು ತಿಳಿಸಿದರು.

ಮತದಾನ ಮಾಡುವಾಗ ತಮ್ಮ ಹೆಸರುಗಳು ಚಿನ್ನೆಗಳನ್ನು ಗುರುತಿಸಿ ಮತದಾನ ಮಾಡಬೇಕು ಯಾವುದೇ ಗೊಂದಲ ಒಳಗಾಗಬಾರದು ಎಂದರು.

ಅದೇ ರೀತಿಯಾಗಿ ಮಹಾನಗರ ಪಾಲಿಕೆ ಆಯುಕ್ತರಾದ ಪಾಟೀಲ ಭುವನೇಶ ದೇವಿದಾಸ ಮಾತನಾಡಿ,

ಪ್ರಜಾಪ್ರಭುತ್ವದ ಏಳಿಗಾಗಿ ನಾವೆಲ್ಲರೂ ಕೆಲಸ ಕಾರ್ಯಗಳನ್ನು ನಿರ್ವಹಿಸಬೇಕೆಂದರು. ತಮ್ಮ ಹೆಸರನ್ನು ಫಾರಂ ನಂ.೬ ರಡಿಯಲ್ಲಿ ನೋಂದಾಯಿಸಬೇಕು. ಯಾವುದೇ ಮತದಾರರ ಚುನಾವಣೆಯಿಂದ ವಂಚಿತರಾಗಬಾರದು ಎಂದು ಅವರು ತಿಳಿಸಿದರು.

ಸ್ವೀಪ್ ಕಾರ್ಯಕ್ರಮದಲ್ಲಿ ತಾವೆಲ್ಲರೂ ಭಾಗವಹಿಸಿದ್ದೀರಿ ನನಗೆ ಸಂತೋಷ ತಂದಿದೆ ಚುನಾವಣೆಗೆ ಸಂಬಂಧಿಸಿದ ಪ್ರತಿಯೊಂದ ಮಾಹಿತಿಗಳನ್ನು ವಿದ್ಯಾರ್ಥಿಗಳಿಗೆ ತಿಳಿಸಿದರು.

ಕಾಲೇಜಿನ ವಿದ್ಯಾರ್ಥಿಗಳಿಗೆ ಜಿಲ್ಲಾ ಪಂಚಾಯತ್ ಸಂಯೋಜನಾಧಿಕಾರಿ ವಿರೇಂದ್ರ ಕುಮಾರ ಅವರು ಮತದಾರರ ಪ್ರತಿಜ್ಞಾ ವಿಧಿ ಬೋಧಿಸಿದರು.

ಸರ್ವಜ್ಞ ಕಾಲೇಜಿನ ಸಂಸ್ಥಾಪಕ ಅಧ್ಯಕ್ಷರಾದ ಚನ್ನಾರೆಡಿ ಅವರು ಸ್ವಾಗತಿಸಿದರು.

ಜೇವರ್ಗಿ ಸರಕಾರಿ ಪದವಿ ಪೂರ್ವ ಕಾಲೇಜ್ ಬಸವರಾಜ ಪ್ರಾಂಶುಪಾಲ ಜಿಲ್ಲಾ ಪಂಚಾಯತ ವ್ಯವಸ್ಥಾಪಕ ಮಲ್ಲಿಕಾರ್ಜುನ, ಸೇರಿದಂತೆ ಸರ್ವಜ್ಞ ಕಾಲೇಜಿನ ಪ್ರಾಂಶುಪಾಲರು ವಿದ್ಯಾರ್ಥಿಗಳು ಸ್ವೀಪ್ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here