ಭಾಲ್ಕಿ; ತಾಲೂಕಿನ ಖಟಕಚಿಂಚೋಳಿ ಗ್ರಾಮದಲ್ಲಿ ಹಿರೇಮಠ ಸಂಸ್ಥಾನ ವಿದ್ಯಾಪೀಠ ಟ್ರಸ್ಟ್ (ರಿ) ವತಿಯಿಂದ ನಡೆಯುತ್ತಿರುವ ಶ್ರೀಮತಿ ಸಿದ್ಧಮ್ಮ ಕಲ್ಯಾಣರಾವ ಪಾಟೀಲ ಗುರುಕುಲ ಪ್ರಾಥಮಿಕ ಮತ್ತು ನೀಲಮ್ಮ ವೀರಬಸಪ್ಪ ಪಾಟೀಲ ಗುರುಕುಲ ಪ್ರೌಢಶಾಲೆ ಹಾಗೂ ವಿ.ಕೆ.ಪಾಟೀಲ ಕಲಾ, ವಾಣಿಜ್ಯ, ವಿಜ್ಞಾನ ಪದವಿಪೂರ್ವ ಮಹಾವಿದ್ಯಾಲಯದಲ್ಲಿ ನಾಡಿನ ಪ್ರತಿಷ್ಠಿತ ನಾಡೋಜ ಪ್ರಶಸ್ತಿ ಪುರಸ್ಕøತರಾದ ಪೂಜ್ಯ ಶ್ರೀ ಡಾ.ಬಸವಲಿಂಗ ಪಟ್ಟದ್ದೇವರಿಗೆ ಅಭಿನಂದನಾ ಸಮಾರಂಭ ಹಾಗೂ 10ನೇ ಮಕ್ಕಳ ಬೀಳ್ಕೊಡುಗೆ ಸಮಾರಂಭ ಹಮ್ಮಿಕೊಳ್ಳಲಾಗಿತ್ತು. ಸಮಾರಂಭದ ದಿವ್ಯ ಸಾನಿಧ್ಯವನ್ನು ಪೂಜ್ಯ ಶ್ರೀ ನಾಡೋಜ ಡಾ.ಬಸವಲಿಂಗ ಪಟ್ಟದ್ದೇವರು ವಹಿಸಿಕೊಂಡಿದ್ದರು. ದಿವ್ಯಸಮ್ಮುಖ ಪೂಜ್ಯ ಶ್ರೀ ಗುರುಬಸವ ಪಟ್ಟದ್ದೇವರು ವಹಿಸಿಕೊಂಡಿದ್ದರು.
ಅಧ್ಯಕ್ಷತೆ ಶರಣೆ ನೀಲಮ್ಮ ವಿ.ಕೆ.ಪಾಟೀಲ ವಹಿಸಿಕೊಂಡಿದ್ದರು. ಮುಖ್ಯ ಅತಿಥಿಗಳಾಗಿ ಶರಣ ಮಲ್ಲಿಕಾರ್ಜುನ ಪಾಟೀಲ, ಶರಣ ವೈಜಿನಾಥ ರಾಗಾ, ಶರಣ ಸಿದ್ಧಯ್ಯ ಕಾವಡಿಮಠ, ಶರಣೆ ಗಾಯತೊಂಡೆ ತಾಯಿವರು ಹಾಗೂ ಶರಣ ಮೋಹನರೆಡ್ಡಿ ಆಗಮಿಸಿದ್ದರು. ವಚನ ಪ್ರಾರ್ಥನೆ ಕು.ಸುಷ್ಮಾ ಮತ್ತು ಕು.ರೀನಾ ವಿದ್ಯಾರ್ಥಿಗಳು ನಡೆಸಿಕೊಟ್ಟರು. 10ನೇ ವಿದ್ಯಾರ್ಥಿಗಳಿಂದ ಬಸವಗುರುಪೂಜೆ ನಡೆಯಿತು.
ಕು. ಲಕ್ಷ್ಮಿ ಕು. ಪ್ರಜ್ವಲ್‍ರೆಡ್ಡಿ ಕು. ಆರತಿರೆಡ್ಡಿ ಬೀಳ್ಕೊಡುಗೆ ಸಮಾರಂಭದ ಕುರಿತು ತಮ್ಮ ಅನಿಸಿಕೆ ಹೇಳಿದರು. ಕು. ಮುಖ್ಯೋಪಾಧ್ಯಾಯರಾದ ಶರಣ ಶಿವಕುಮಾರ ನಾಗಶೆಟ್ಟಿ ಸ್ವಾಗತಿಸಿದರು. ಶರಣೆ ಸಾವಿತ್ರಿ ಹಚ್ಚೆ ಶರಣು ಸಮರ್ಪಣೆ ಮಾಡಿದರು. ಶಾಲೆಯ ಶಿಕ್ಷಕ/ಶಿಕ್ಷಕೇತರರ ಸಿಬ್ಬಂದಿ ಹಾಗೂ ಮಕ್ಕಳು ಈ ಸಮಾರಂಭದಲ್ಲಿ ಪಾಲ್ಗೊಂಡಿದ್ದರು.