ಕಲಬುರಗಿ: ಗುಲ್ಬರ್ಗ ವಿಶ್ವವಿದ್ಯಾಲಯದ ಎದುರುಗಡೆ ಇರುವ ಸಿದ್ದಾರ್ಥ ಮೂಕ ಮತ್ತು ಕಿವುಡ ಮಕ್ಕಳ ಶಾಲೆಯಲ್ಲಿ ಜಯನಗರದ ಡೆಂಟಲ್ ಕೇರ್ ಡೆಂಟಲ್ ಕ್ಲಿನಿಕ್ ಮತ್ತು ಲೇಸರ್ ಡೆಂಟ್ಸಿಸ್ಟರಿ ಸಂಸ್ಥೆಗಳ ವತಿಯಿಂದ ವಿಶ್ವ ದಂತ ಆರೋಗ್ಯ ದಿನಾಚರಣೆಯನ್ನು ಹಮ್ಮಿಕೊಳ್ಳಲಾಗಿತ್ತು.
ಪ್ರಯುಕ್ತ ಡೆಟಾ ಕೇರ್ ಮತ್ತು ಕ್ಲಿನಿಕ್ ಮತ್ತು ಲೇಸರ್ ಡೆಂಟಲ್ ಸಂಸ್ಥೆಗಳ ವತಿಯಿಂದ ಎಲ್ಲಾ ಶಾಲಾ ಮಕ್ಕಳಿಗೆ ಡೆಂಟಲ್ ಕಿಟ್ ಗಳನ್ನ ಉಚಿತವಾಗಿ ವಿತರಿಸಲಾಯಿತು.
ಈ ಸಂದರ್ಭದಲ್ಲಿ ಡಾ. ಧರ್ಮರಾಜ್ ಬಿ ಪಾಟೀಲ್ ಹೇರೂರು, ಡಾಕ್ಟರ್ ಶೀತಲ್ ಪಾಟೀಲ್ ಹೇರೂರು, ಡಾ. ಸುಷ್ಮಾ ಸಜ್ಜನ್ ಡಾ. ಪೂಜಾ ಡಾ. ಸಂಹಿತ ಜೈನ್ ಎಂ ಜೆ ಇವರು ಉಪಸ್ಥಿತರಿದ್ದು ವಿದ್ಯಾರ್ಥಿಗಳಿಗೆ ಮತ್ತು ಪಾಲಕರಿಗೆ ಶಿಕ್ಷಕರಿಗೆ ದಂತ ಆರೋಗ್ಯದ ಮಹತ್ವದ ಕುರಿತು ತಿಳಿಸಿದರು.
ಈ ಸಂದರ್ಭದಲ್ಲಿ ಸಿದ್ದಾರ್ಥ ಮೂಕ ಮತ್ತು ಕಿವುಡ ಶಾಲೆಯ ಸಂಸ್ಥೆಯ ಸಂಸ್ಥಾಪಕರು ಅಧ್ಯಕ್ಷ ಚಂದ್ರಿಕಾ ಪರಮೇಶ್ವರ್ ಅವರು ಹಾಜರಿದ್ದರು.