ವಾಡಿ: ಪಟ್ಟಣದ ಬಿಜೆಪಿ ಕಛೇರಿಯಲ್ಲಿ ಕ್ರಾಂತಿಕಾರಿ ಭಗತ್ ಸಿಂಗ್ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಬಲಿದಾನ ದಿನ ಆಚರಿಸಲಾಯಿತು.
ಈ ವೇಳೆ ಬಿಜೆಪಿ ಮಹಾಶಕ್ತಿ ಕೇಂದ್ರದ ಅಧ್ಯಕ್ಷ ವೀರಣ್ಣ ಯಾರಿ ಮಾತನಾಡಿ ದೇಶದ ಸ್ವಾತಂತ್ರ್ಯ ಹೋರಾಟದಲ್ಲಿ ಅಚ್ಚಳಿಯದ ಹೆಸರು ಹೊಂದಿರುವ ಕ್ರಾಂತಿವೀರ ಭಗತ್ ಸಿಂಗ್, ರಾಜಗುರು, ಸುಖದೇವ್ ಅವರನ್ನು ಬ್ರಿಟಿಷರು ನೇಣಿಗೇರಿಸಿದ್ದು ಇವತ್ತಿನ ದಿನದಂದು. ಮಹಾನ್ ದೇಶಭಕ್ತರ ತ್ಯಾಗ ಬಲಿದಾನದ ಸ್ಮರಣೆಗೆ ಈ ದಿನವನ್ನು ನಾವು ಬಲಿದಾನ ದಿನ ಎಂದು ಆಚರಿಸುತ್ತಿದ್ದೇವೆ.
ಈ ನೆಲದ ವೀರ ಸ್ವಾತಂತ್ರ್ಯ ಹೋರಾಟಗಾರರು
ಭಾರತಾಂಬೆಯ ಪರಾಕ್ರಮಿ ಸುಪುತ್ರರ ತ್ಯಾಗ, ಹೋರಾಟ ಮತ್ತು ಆದರ್ಶಗಳು ನಮ್ಮೆಲ್ಲರಿಗೂ ಸ್ಪೂರ್ತಿದಾಯಕ
ನಗುನಗುತ್ತಾ ನೇಣಿಗಿರಿ ನಮ್ಮ ದೇಶದ ಸ್ವಾತಂತ್ರ್ಯಕ್ಕೆ ಮುನ್ನುಡಿ ಬರೆದರು.ಅವರನ್ನು ಈ ಜಗತ್ತು ಇರುವವರಿಗೆ ಯಾರು ಮರೆಯುವಂತಿಲ್ಲ ಎಂದು ಹೇಳಿದರು.
ಈ ಸಂದರ್ಭದಲ್ಲಿ ಶಕ್ತಿ ಕೇಂದ್ರದ ಪ್ರಧಾನ ಕಾರ್ಯದರ್ಶಿ ರವಿ ನಾಯಕ, ಮುಖಂಡರಾದ ರಾಮಚಂದ್ರ ರೇಡ್ಡಿ,ಹರಿ ಗಲಾಂಡೆ,ಕಿಶನ ಜಾಧವ,ಶರಣಗೌಡ ಚಾಮನೂರ,ಭೀಮರಾವ ದೊರೆ,ಶಿವಶಂಕರ ಕಾಶೆಟ್ಟಿ,ಚನ್ನಯ್ಯ ಸ್ವಾಮಿ,ಪ್ರಕಾಶ ಪುಜಾರಿ,ಅಯ್ಯಣ್ಣ ದಂಡೋತಿ,ರಾಜಶೇಖರ ಅರಳಗುಂಡಗಿ,ಸತೀಶ ಸಾವಳಗಿ,ಭಾರತ ರಾಠೋಡ,ಕಿಶನ ನಾಯಕ, ಚಂದ್ರಶೇಖರ ಬೆಣ್ಣೂರ,ಸತೀಶ ಸಾವಳಗಿ,ಮಲ್ಲಿಕಾರ್ಜುನ ಸಾತಖೇಡ,ಬಸವರಾಜ ಪಗಡಿಕರ, ನಿರ್ಮಲ ಇಂಡಿ,ಯಂಕಮ್ಮ ಗೌಡಗಾಂವ,ಉಮಾದೇವಿ ಗೌಳಿ,ಶರಣಮ್ಮ ಯಾದಗಿರಿ,ಬಾಲರಾರಾಜ ಪಗಡಿಕರ,ಪುಣ್ಯ ರಾಠೋಡ, ಉದಯ ಕುಮಾರ ಪಾಟೀಲ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.