ಬೆಳಗಲ್ಲು ವೀರಣ್ಣ ಗುರು-ಶಿಷ್ಯ ಪರಂಪರೆಯ ಜೀವಂತ ಸಾಕ್ಷಿ

0
27

ಬಳ್ಳಾರಿ: ದೇಶ ವೀದೇಶಗಳಲ್ಲಿ ಬಳ್ಳಾರಿಯನ್ನು ಸುವಿಖ್ಯಾತಗೊಳಿಸಿದ ರಾಘವ ಅವರ ಶಿಷ್ಯ ಜೋಳದರಾಶಿ ದೊಡ್ಡನಗೌಡರು, ಅವರ ಶಿಷ್ಯ ಸಿಡಿಗಿನಮೊಳೆ ಚಂದ್ರಯ್ಯ, ಅವರ ಶಿಷ್ಯರೇ ಬೆಳಗಲ್ಲು ವೀರಣ್ಣ. ಹೀಗಾಗಿ ಆಧುನಿಕ ಯುಗದಲ್ಲಿ ಬೆಳಗಲ್ಲು ವೀರಣ್ಣ ಅವರು ಗುರು-ಶಿಷ್ಯ ಪರಂಪರೆಯ ಜೀವಂತ ಸಾಕ್ಷಿಯಾಗಿದ್ದಾರೆಂದು ಕರ್ನಾಟಕ ಬಯಲಾಟ ಅಕಾಡೆಮಿ ಅಧ್ಯಕ್ಷ ಡಾ. ಕೆ.ಆರ್. ದುರ್ಗಾದಾಸ ನುಡಿದರು.

ಅವರು ನಗರದಲ್ಲಿ ಸೋಮವಾರ ನಡೆದ ಸ್ಮರಣಾಂಜಲಿ ಕಾರ್ಯಕ್ರಮದಲ್ಲಿ ಬೆಳಗಲ್ಲು ವೀರಣ್ಣ ಅವರ ಆತ್ಮಕಥನ ‘ನಾಟಕದ ಗೊಂಬೆ’ ಪುಸ್ತಕ ಬಿಡುಗಡೆಗೊಳಿಸಿ ಮಾಡನಾಡುತ್ತಿದ್ದರು.

Contact Your\'s Advertisement; 9902492681

ವೀರಣ್ಣನವರು ನಾಟಕ ರಂಗದಲ್ಲಿ ಪಡಿಪಾಟಲು ಪಟ್ಟು ಮನೆತನದ ಕುಲಕಸುಬು ತೊಗಲುಗೊಂಬೆ’ ಆಟವನ್ನು ಕೈಗೆತ್ತಿಕೊಂಡು ಅದರಲ್ಲೇ ದೇಶ ವಿದೇಶಗಳಲ್ಲಿ ಪ್ರಖ್ಯಾತರಾದರು. ಅತ್ಯಂತ ಸೌಮ್ಯ, ವಿನಯವಂತರಾಗಿದ್ದರೂ ಅನ್ಯಾಯಕ್ಕೆ ವಿರೋಧಿಸುವ ಮನಸ್ಥಿತಿ ಅವರಿಗಿತ್ತು ಎಂದರು.

ಬೆಳಗಲ್ಲು ವೀರಣ್ಣ ನಾಟಕ ರಂಗದಲ್ಲೂ ಸೈ ಎನಿಸಿಕೊಂಡು ನಂತರ ತೊಗಲುಗೊಂಬೆ ಆಟಕ್ಕೆ ಬಂದಿದ್ದರ ನೆನಪಿನಲ್ಲಿ ನಾನೇ ನಿರೂಪಿಸಿದ ಅವರ ಆತ್ಮ ಕಥನಕ್ಕೆ ‘ನಾಟಕ ಗೊಂಬೆ’ ಶೀರ್ಷಿಕೆ ನೀಡಿದೆ ಎಂದು ಕೃತಿ ಕರ್ತೃ ಡಾ.ರಾಜಪ್ಪ ದಳವಾಯಿ ತಮ್ಮ ನುಡಿ ನಮನದಲ್ಲಿ ಹೇಳಿದರು.

ಬೆಳಗಲ್ಲು ವೀರಣ್ಣ ನವರ ಸ್ಮರಣೆ ಎಂದರೆ ರಕ್ತರಾತ್ರಿ, ತೊಗಲುಗೊಂಬೆ ಆಟ, ರಂಗಗೀತೆ ಇದ್ದಾಗಲೇ ಅದು ನಿಜವಾದ ಸ್ಮರಣೆ ಅದಕ್ಕಾಗಿ ರಂಗತೋರಣ ಹಾಗೂ ಹೆಜ್ಜೆ ಗೆಜ್ಜೆ ತಂಡಕ್ಕೆ ಅಭಿನಂದನೆ ಎಂದರು.

ಕಾರ್ಯಕ್ರಮ ಉದ್ಘಾಟಿಸಿದ ಇಂಜಿನಿಯರ್ ಎಂ.ಜಿ.ಗೌಡ ಅವರು ಮಾತನಾಡುತ್ತ ಬೆಳಗಲ್ಲು ವೀರಣ್ಣನವರು ಅದ್ಭುತ ಜೀವನೋತ್ಸಾಹಿ. ದೇಶ ವಿದೇಶಗಳಲ್ಲಿ ಪ್ರದರ್ಶನ ನೀಡಿ ಬಂದಾಗ ತಮ್ಮ ಅನುಭವಗಳನ್ನು ನಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದರು ಎಂದು ತಮ್ಮ ಒಡನಾಟ ವಿವರಿಸಿದರು.

ಮೈಸೂರಿನ ಹೆಸರಾಂತ ರಂಗಕರ್ಮಿ ಬಿ.ಎಂ.ರಾಮಚಂದ್ರ ಅವರು ವೀರಣ್ಣನವರ ‘ಸ್ಮರಣಾಂಜಲಿ’ ಆಮಂತ್ರಣ ತಲುಪುತ್ತಿದ್ದಂತೆಯೇ ಇದಕ್ಕಾಗಿ ಇಲ್ಲಿಗೆ ಬಂದೆ. ೧೯೭೪ರಲ್ಲಿ ವೀರಣ್ಣನವರನ್ನು ಪ್ರಥಮ ಭೇಟಿ ಆಗಿನಿಂದಲೂ ಅವರು ನನ್ನನ್ನು ಕಂಡಾಗಲೆಲ್ಲ ‘ಅಪ್ಪಾ’ ಎಂದೇ ಮಾತನಾಡಿಸುತ್ತಿದ್ದರು.

ಕಾರ್ಯಕ್ರಮದ ಆಯೋಜಕರಲ್ಲೊಬ್ಬರಾದ ಹೆಜ್ಜೆ ಗೆಜ್ಜೆ ಬಯಲಾಟ ಕಲಾ ಟ್ರಸ್ಟ್ ಈ ವರ್ಷದಿಂದ ಕೊಡ ಮಾಡುತ್ತಿರುವ ನಾಡೋಜ ಬೆಳಗಲ್ಲು ವೀರಣ್ಣ ಪ್ರಥಮ ಪ್ರಶಸ್ತಿಯನ್ನು ತೊಗಲುಗೊಂಬೆ ಕಲಾವಿದ ೯೧ ವರ್ಷದ ‘ನಾರಾಯಣಪ್ಪ ಕಾರಿಗನೂರು’ ಅವರಿಗೆ ಶಾಲು, ಪೇಟ, ಹಾರ, ಫಲಪುಷ್ಪ, ನಟರಾಜ ವಿಗ್ರಹದೊಂದಿಗೆ ೧೧ ಸಾವಿರ ರೂ ಚೆಕ್ ನೀಡಿ ಗೌರವಿಸಲಾಯಿತು.

ಕರ್ನಾಟಕ ಸರ್ಕಾರದ ರಂಗ ಸಮಾಜ ಸದಸ್ಯರಾಗಿ ನಿಯುಕ್ತಗೊಂಡ ಡಾ.ರಾಜಪ್ಪ ದಳವಾಯಿ ಹಾಗೂ ಬಯಲಾಟ ಅಕಾಡೆಮಿ ಅಧ್ಯಕ್ಷ ಡಾ.ಕೆ.ಆರ್. ದುರ್ಗಾದಾಸ ಅವರನ್ನು ಗೌರವಿಸಲಾಯಿತು.

ಕಾರ್ಯಕ್ರಮದ ಆರಂಭದಲ್ಲಿ ಕೆ.ವಸಂತಕುಮಾರ ಹಾಗೂ ಕವಿತಾ ಗಂಗೂರ ಅವರಿಂದ ಗೀತ ನಮನ ಕಾರ್ಯಕ್ರಮ ನಡೆಯಿತು. ತಿಪ್ಪೇಸ್ವಾಮಿ ಹಾಗೂ ತಬಲಾ ವಿರುಪಾಕ್ಷಪ್ಪ ಸಾಥ ನೀಡಿದರು.

ವೇದಿಕೆ ಮೇಲೆ ಅತಿಥಿಗಳೊಂದಿಗೆ ರಂಗತೋರಣ ಅಧ್ಯಕ್ಷ ಪ್ರೊ.ಆರ್.ಭಿಮನಸೇನ, ಕಾರ್ಯದರ್ಶಿ ಪ್ರಭುದೇವ ಕಪ್ಪಗಲ್ಲು ಹಾಗೂ ಹೆಜ್ಜೆ ಗೆಜ್ಜೆ ಟ್ರಸ್ಟ್ನ ಅಧ್ಯಕ್ಷ ಹೆಚ್.ತಿಪ್ಪೇಸ್ವಾಮಿ ಹಾಜರಿದ್ದರು.

ಉಪನ್ಯಾಸಕ ಎ.ಎಂ.ಪಿ. ವೀರೇಶಸ್ವಾಮಿ ಕವನ ವಾಚಿಸಿದರು. ಹೆಚ್. ತಿಪ್ಪೇಸ್ವಾಮಿ ನಿರೂಪಸಿದರು. ಸುಬ್ಬಣ್ಣ ವಂದಿಸಿದರು.ನಂತರ ಶ್ರೀರಾಮಾಂಜನೇಯ ತೊಗಲುಗೊಂಬೆ ಟ್ರಸ್ಟ್ ನವರಿಂದ ‘ಮಹಾತ್ಮಾಗಾಂಧಿ’ ತೊಗಲುಗೊಂಬೆ ಪ್ರದರ್ಶನ ನಡೆಯಿತು. ಆಟವನ್ನು ಬೆಳಗಲ್ಲು ವೀರಣ್ಣನವರ ಪುತ್ರ ಹನುಮಂತು ನಿರ್ವಹಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here